ಥರ್ಡ್ ರೇಟೆಡ್ ಭಾಷೆ ನಿಂದು, ಕಚಡಾ ನೀನು: ರಜತ್ ಗಂಡಸ್ತನಕ್ಕೆ ಅಶ್ವಿನಿ ಗೌಡ ಸವಾಲ್
ಬಿಗ್‌ಬಾಸ್ ಮನೆ ಈಗ ಭೂತದ ಮನೆಯಾಗಿದೆ. ಹೊಸ ಟಾಸ್ಕ್ ವೇಳೆ ರಜತ್, ಧ್ರುವಂತ್ ಹಾಗೂ ಅಶ್ವಿನಿ ಗೌಡ ನಡುವೆ ಭಾರೀ ದೊಡ್ಡ ಗಲಾಟೆಯಾಗಿದೆ. ಮೊದಲಿಗೆ ಧ್ರುವಂತ್ ಜೊತೆಗೆ ಕಿತ್ತಾಡಿಕೊಂಡಿರುವ ರಜತ್ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ಬಳಿಕ ಅಶ್ವಿನಿ ಗೌಡ ಜೊತೆಗೂ ರಜತ್ ಕಿರಿಕ್ ಮಾಡಿಕೊಂಡಿದ್ದಾರೆ. ಆಗ ಅಶ್ವಿನಿಗೌಡ ರಜತ್‌ಗೆ 'ನೀವು ಗಂಡಸಲ್ವಾ?' ಎಂದು ಗಂಡಸ್ತನಕ್ಕೆ ಸವಾಲ್ ಕೂಡ ಹಾಕಿದ್ದಾರೆ. ಕಲರ್ಸ್ ಈ ಪ್ರೋಮೊ ಹಂಚಿಕೊಂಡಿದೆ.
'ಧ್ರುವಂತ್ ಬಂದು ಟಿ* ಗಾಂಚಾಲಿ ಅಂದಾಗ ಅಶ್ವಿನಿ ಗೌಡ ಅವರು ಸೈಲೆಂಟಾಗಿದ್ರು. ಅದೇ ರಘು ಅವರು ಒಂದು ಮಾತು ಹೇಳಿದ್ದಕ್ಕೆ ಹಾಗೆ ಹೇಳಬಾರದು, ಹೀಗೆ ಹೇಳಬಾರದು ಅಂತೆಲ್ಲ ಹೇಳಿದ್ರು. ಹಾಗಾಗಿ ಇವರ ಜೊತೆ ನಾನು ಫೈಟ್ ಮಾಡೋಕೆ ಆಗಲ್ಲ. ಹಾಗಾಗಿ ಅಶ್ವಿನಿ ಅವರು ಮನೆಗೆ ಹೋಗುವುದೇ ಒಳ್ಳೆಯದು' ಎಂದು ರಜತ್ ಹೇಳಿದ್ದಾರೆ.

ಏಯ್... ಥು ಕಚಡಾ ನೀನು
'ಈ ಮಾತಿನಿಂದ ಸಿಟ್ಟಾದ ಅಶ್ವಿನಿ ಗೌಡ, ನಿನ್ನಷ್ಟು ಥರ್ಡ್ ರೇಟೆಡ್ ಭಾಷೆಯನ್ನ ಇಲ್ಲಿರುವ ಯಾರೂ ಬಳಸಲ್ಲ. ನಾವು ಗಂಡಸರ ಜೊತೆ ಗುದ್ದಾಡೀವಿ ಅಂದ್ರಿ, ನೀವು ಗಂಡಸಲ್ವಾ? ಎಂದು ಕೂಗಾಡಿದ್ದಾರೆ. ಮತ್ತೆ ಜಗಳಕ್ಕಿಳಿದ ರಜತ್ ನಾವು ಗಂಡಸರ ಜೊತೆ ಮಾತ್ರವೇ ಹೊಡೆದಾಡೋದು ಅಂತ ಅಶ್ವಿನಿ ಅವರನ್ನು ಏಕಾಏಕಿ ಸ್ವಿಮ್ಮಿಂಗ್ ಪೂಲ್‌ಗೆ ನೂಕಿದ್ದಾರೆ. ಇದರಿಂದ ಕೆರಳಿ ಕೆಂಡವಾದ ಅಶ್ವಿನಿ ಗೌಡ, ಏಯ್... ಥು ಕಚಡಾ ನೀನು ಅಂತ ರಜತ್‌ಗೆ ಹೇಳಿದ್ದಾರೆ. ನೀನೇನು ನನಗೆ ಕಚಡಾ ಅನ್ನೋದು? ನೀನು ಕಚಡಾ' ಅಂತ ರಜತ್ ಕೂಡ ಕೌಂಟರ್ ಕೊಟ್ಟಿದ್ದಾರೆ.
ಕೈ ಕೈ ಮಿಲಾಯಿಸಿದ ರಜತ್-ಧ್ರುವಂತ್
ಇನ್ನು ಕಾವ್ಯ ಅವರು ರಜತ್ ಅವರನ್ನು ನಾಮಿನೇಟ್ ಮಾಡಿದ್ದು, 'ಈ ವೇಳೆಯೂ ಗಲಾಟೆ ತಾರಕಕ್ಕೇರಿದೆ. ರಜತ್ ಒಂದೇ ಕಡೆಗೆ ಸೀಮಿತ ಆಗೋದ್ರು ಅಂತ ಅನಿಸುತ್ತಿದೆ ಎಂದು ಕಾವ್ಯ ಹೇಳಿದ್ದು, ಇದಕ್ಕೆ ಸಿಟ್ಟಾದ ರಜತ್ ಏನು ನಾನು ಮನೇಲಿ ತಮಾಷೆ ಮಾಡಲೇಬಾರದಾ? ಕಂಟೆಸ್ಟೆಂಟ್‌ಗಳಿಗೆ ತಲೆ ಏನಾದ್ರೂ ಕೆಟ್ಟಿದ್ಯಾ?' ಎಂದು ಕೇಳಿದ್ದಾರೆ.
ಬಳಿಕ ಧ್ರುವಂತ್ ಹಾಗೂ ರಜತ್ ಹೊಡೆದಾಡಿಕೊಳ್ಳುವ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. 'ಏನ್ ನಿಂದು? ಇದೆಲ್ಲ ಲಾಸ್ಟ್ ಸೀಸನ್‌ನಲ್ಲಿ ಇಟ್ಕೋ, ನಾನೇನು ಗಿಲ್ಲಿ ಅಲ್ಲ, ಧ್ರುವಂತ್ ಅಂತ ರಜತ್ ಮೇಲೆ ರೇಗಿದ್ದಾರೆ. ರಜತ್ ಕೂಡ ಸಿಟ್ಟಾಗಿ ನನ್ ಮ*ನೇ...ಯಾರಿಗೆ ಹೇಳ್ತಿದಿಯಾ? ಕೊಟ್ರೆ ಏಟುಗಳು ತಿಂತೀಯ ನೋಡ್ಕೋ..' ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಇವರಿಬ್ಬರ ಗಲಾಟೆ ಬಿಡಿಸುವಷ್ಟರಲ್ಲಿ ಉಳಿದ ಸ್ಪರ್ಧಿಗಳು ಸುಸ್ತಾಗಿದ್ದಾರೆ.
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications