Bigg Boss: ಮಿಡ್ ವೀಕ್ ಎಲಿಮಿನೇಷನ್: ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳು ಇವರೇ
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಒಟ್ಟು ಎಂಟು ಜನ ಸ್ಪರ್ಧಿಗಳು ಉಳಿದುಕೊಂಡಿದ್ದು ಈ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಇನ್ನು ಇಬ್ಬರು ವಾರಾಂತ್ಯಕ್ಕೆ ಬಿಗ್‌ಬಾಸ್ ಮನೆಯಿಂದ ಹೊರ ಬರಲಿದ್ದಾರೆ. ಒಟ್ಟಿನಲ್ಲಿ ಈ ವಾರಾಂತ್ಯಕ್ಕೆ ಮೂರು ಜನ ಬಿಗ್‌ಬಾಸ್ ಮನೆಯಿಂದ ಹೊರಬರಲಿದ್ದು ಜನವರಿ 19ಕ್ಕೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಹಾಗಾದರೆ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳು ಯಾರು? ಯಾರೆಲ್ಲಾ ಟಾಪ್ 5 ಸ್ಪರ್ಧಿಗಳಾಗಿ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ?
ಬಿಗ್‌ಬಸ್ ಕನ್ನಡ ಸೀಸನ್ 11 ಎರಡು ವಾರದಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಲಿದೆ. ಈ ಬಾರಿ ಬಿಗ್‌ಬಾಸ್ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಒಟ್ಟು ಎಂಟು ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಇವರಲ್ಲಿ ಮೂರು ಜನ ಮನೆಯಿಂದ ಹೊರ ಬರಲಿದ್ದು, ಐದು ಜನ ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ. ಹಾಗಾದರೆ ಬಿಗ್‌ಬಾಸ್ ಮನೆಯಿಂದ ಹೊರಬರುವ ಆ ಸ್ಪರ್ಧಿಗಳು ಯಾರು? ಯಾರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ?

ಕಳೆದ ವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಹನುಮಂತ ತನಗೆ ಮೋಸ ಮಾಡಿದರೂ ಲೆಕ್ಕಿಸದೆ ನಿಯತ್ತಾಗಿ ಆಡಿ ಗೆದ್ದು ತಮ್ಮ ಸಾಮಾರ್ಥ್ಯ ತೋರಿಸಿದ್ದಾರೆ. ಕೊನೆಗೆ ಫಿನಾಲೆ ಟಿಕೆಟ್ ಹನುಮಂತ ಪಡೆದುಕೊಂಡು ಮನೆಯ ಈ ವಾರದ ಕ್ಯಾಪ್ಟನ್ ಕೂಡ ಆಗಿದ್ದಾರೆ. ಇವರೊಂದಿಗೆ ತ್ರಿವಿಕ್ರಮ್ ಕೂಡ ಆಟದಲ್ಲಿ ಗೆದ್ದು ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ.
ಕೊಟ್ಟ ಕೆಲಸ ನಿಭಾಯಿಸದ ರಜತ್
ಇನ್ನೂ ಕಳೆದ ವಾರ ಕ್ಯಾಪ್ಟನ್ ಆಗಿದ್ದರಿಂದ ರಜತ್ ನೇರವಾಗಿ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಕ್ಯಾಪ್ಟನ್ ಆಗಿದ್ದಾಗ ರಜತ್‌ಗೆ ಟಾಸ್ಕ್ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಲು ತಿಳಿಸಲಾಗಿತ್ತು. ಆದರೆ ಟಾಸ್ಕ್‌ನಲ್ಲಿ ನೀಡಿದ ಕೆಲಸವನ್ನು ರಜತ್ ಸರಿಯಾಗಿ ನಿಭಾಯಿಸಿಲ್ಲ. ಇಲ್ಲಿ ರಜತ್ ಕೆಲವರ ಪರವಾಗಿ ಆಡಿದ್ದು ಸ್ಪಷ್ಟವಾಗಿ ಗೊತ್ತಾಗಿದೆ. ಇದಕ್ಕಾಗಿ ಕಿಚ್ಚನ ಪಂಚಾಯಿತಿಯಲ್ಲಿ ರಜತ್‌ಗೆ ತರಾಟೆ ಕೂಡ ತೆಗೆದುಕೊಳ್ಳಲಾಯಿತು. ಹೀಗಾಗಿ ಟಾಪ್ 5ನಲ್ಲಿ ರಜತ್ ಇದ್ದರೂ ಕೂಡ ಕಿಚ್ಚ ಸುದೀಪ್ ಅವರು ಹಿಡಿಯುವ ಕೈ ಹನುಮಂತ ಹಾಗೂ ತ್ರಿವಿಕ್ರಮ್ ಅವರದ್ದು ಎನ್ನಲಾಗುತ್ತಿದೆ.

ಕೊಟ್ಟ ಮಾತು ಉಳಿಸಿಕೊಳ್ಳದ ಮಂಜು
ಇನ್ನೂ ಮಂಜು ಈ ಬಾರಿ ಆಟದಲ್ಲಿ ಉತ್ತಮವಾಗಿ ಆಡಿದರೂ ಕೂಡ ರಜತ್ ಮೇಲ್ವಿಚಾರಣೆಯಲ್ಲಿ ತಪ್ಪಾಗಿ, ಫಿನಾಲೆ ಟಿಕೆಟ್ ಪಡೆದುಕೊಳ್ಳುವುದು ಮಿಸ್ ಆಯ್ತು. ಆದರೆ ಮಂಜು ಅವರು ಗೌತಮಿ ಸ್ನೇಹ ಬಿಡುವುದಾಗಿ ಹೇಳಿ ಬಿಗ್‌ಬಾಸ್ ವೀಕ್ಷಕರಿಗೆ ಮಾತು ಕೊಟ್ಟು ಮತ್ತೆ ಗೌತಮಿಯೊಂದಿಗೆ ಸೇರಿಕೊಂಡು ಧನ್‌ರಾಜ್ ಅವರನ್ನು ಆಟದಿಂದ ದೂರ ಇಡುತ್ತಾರೆ. ಇಲ್ಲಿ ಮಂಜು ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು ಎದ್ದು ಕಾಣಿಸುತ್ತದೆ.

ಸ್ನೇಹ ಬಿಟ್ಟು ಹೊರಬಾರದ ಗೌತಮಿ
ಗೌತಮಿ ಕೂಡ ಅಷ್ಟೇ. ಮಂಜು ಸ್ನೇಹದಿಂದ ದೂರ ಇರುವುದಾಗಿ ಮಾತು ಕೊಟ್ಟು ಆಟದಲ್ಲಿ ಮಂಜು ಜೊತೆ ಕೈ ಜೋಡಿಸಿ ಧನ್‌ರಾಜ್ ಅವರನ್ನು ದೂರ ಇಟ್ಟರು. ಇಲ್ಲಿ ಗೌತಮಿ ಕೂಡ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿರುವುದು ಕಂಡು ಬರುತ್ತದೆ. ಈ ಹಿಂದೆ ಕೂಡ ಮೋಕ್ಷಿತಾ ಹಾಗೂ ಮಂಜು ಜೊತೆಗೆ ಗೌತಮಿ ಸ್ನೇಹ ಮಾಡಿಕೊಂಡು ಆಡಿದರು. ಫಿನಾಲೆ ಹಂತ ತಲುಪುವಾಗಲೂ ಗೌತಮಿ ಇದನ್ನೇ ಮುಂದುವರೆಸಿರುವುದು ಬಿಗ್‌ಬಾಸ್ ವೀಕ್ಷಕರಿಗೆ ಬೇಸರ ತಂದಿದೆ. ಹೀಗಾಗಿ ಗೌತಮಿ ಟಾಪ್ 5 ಸ್ಪರ್ಧಿಯಾಗುವುದು ಸ್ವಲ್ಪ ಕಷ್ಟವೇ ಇದೆ.

ಭವ್ಯಾ-ಮೋಕ್ಷಿತಾ ಸಂಚು ಬಯಲು
ಇನ್ನೂ ಮೋಕ್ಷಿತಾ. ಮೋಕ್ಷಿತಾ ತಮ್ಮ ಸೇಫ್ ಝೋನ್ ನಿಂದ ಹೊರ ಬಂದು ಚೆನ್ನಾಗಿ ಆಟ ಆಡುತ್ತಿದ್ದರು. ಆದರೆ ಅವರು ಮಾಡುವ ಒಳಸಂಚಿನಿಂದಾಗಿ ಅವರು ಮುಂದೆ ಹೋಗುವುದು ಕಷ್ಟವಿದೆ. ಕಳೆದ ದಿನ ಎಲಿಮಿನೇಟ್ ಆಗದೇ ಇರಲು ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೋಡಲಾಗಿತ್ತು. ಆದರೆ ಮೋಕ್ಷಿತಾ ಈ ಟಾಸ್ಕ್‌ನಲ್ಲಿ ರಜತ್ ವಿರುದ್ಧ ಸಂಚು ರೂಪಿಸಲು ಭವ್ಯಾ ಜೊತೆಗೆ ಕೈ ಜೋಡಿಸುತ್ತಾರೆ. ಅಷ್ಟೇ ಅಲ್ಲದೇ ಭವ್ಯಾ ಅವರನ್ನು ನಾಮಿನೇಟ್ ಕೂಡ ಮಾಡುತ್ತಾರೆ. ಭವ್ಯಾ ಮೋಕ್ಷಿತಾ ಜೊತೆಗೆ ಸೇರಿಕೊಳ್ಳದೇ ಇದ್ದಿದ್ದರೆ ಟಾಪ್ 5 ಸ್ಪರ್ಧಿ ಆಗಿರುವ ಸಾಧ್ಯತೆ ಇತ್ತು. ಆದರೀಗ ಅವರು ಟಾಪ್ 5 ಸ್ಪರ್ಧಿ ಆಗಬಹುದು ಆಗದೇ ಕೂಡ ಇರಬಹುದು. ಹೀಗಾಗಿ ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳಲ್ಲಿ ಭವ್ಯಾ, ಮೋಕ್ಷಿತಾ ಹಾಗೂ ಗೌತಮಿ ಇಲ್ಲವೆ ರಜತ್ ಇರುವುದು ಪಕ್ಕಾ ಎನ್ನಲಾಗುತ್ತಿದೆ.

ಟಾಪ್ 5 ಸ್ಪರ್ಧಿಗಳು ಇವರೇ..
ಇನ್ನೂ ಟಾಪ್ 5 ಸ್ಪರ್ಧಿಗಳಲ್ಲಿ ಹನುಮಂತ, ತ್ರಿವಿಕ್ರಮ್, ಧನ್‌ರಾಜ್, ಮಂಜು, ರಜತ್ ಇಲ್ಲವೆ ಭವ್ಯಾ ಇರುವುದು ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ಈ ವಾರ ಮೋಕ್ಷಿತಾ, ಗೌತಮಿ ಹಾಗೂ ಭವ್ಯಾ ಅಥವಾ ರಜತ್ ಹೋಗುವುದು ಖಚಿತ ಎನ್ನಲಾಗುತ್ತಿದೆ. ಆದರೆ ಟಾಪ್ 5 ಸ್ಪರ್ಧಿಗಳಲ್ಲಿ ಹನುಮಂತ, ತ್ರಿವಿಕ್ರಮ್, ಧನ್‌ರಾಜ್ ಇರುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಬಿಗ್‌ಬಾಸ್ ವೀಕ್ಷಕರು. ಇದೆಲ್ಲವೂ ಈ ವಾರ ಸ್ಪಷ್ಟವಾಗಿ ಗೊತ್ತಾಗಲಿದೆ.












Click it and Unblock the Notifications