ನಟ ದರ್ಶನ್ ಮನುಷ್ಯನಾಗಿ ಪರಿವರ್ತನೆ ಆಗಬೇಕಂದ್ರೆ ಹೀಗೆ ಮಾಡ್ಬೇಕು: ಮಾಜಿ ಕೈದಿ ಹೇಳಿದ್ದೇನು ಗೊತ್ತಾ.?
Actor darshan Case: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ರಾಜಾತಿಥ್ಯದ ಫೋಟೋ ವೈರಲ್ ಆದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕೈದಿಯೊಬ್ಬರು ನಟ ದರ್ಶನ್‌ಗೆ ಈ ಜೈಲು ಸೇಫ್ ಅಲ್ಲ, ತಿಹಾರ್ ಜೈಲಿಗೆ ಹಾಕಿ ಎಂದು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.
ಪರಪ್ಪನ ಅಗ್ರಾಹರ ಜೈಲಿನಲ್ಲೇ ವಿಲ್ಸನ್ ಗಾರ್ಡನ್ ನಾಗನ ಜೊತೆ ನಟ ದರ್ಶನ್ ರೌಂಡ್ ಟೇಬಲ್ ಪಾರ್ಟಿಯಲ್ಲಿ ಭಾಗಿಯಾಗಿ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿರುವ ಪೋಟೋ ಭಾರೀ ವೈರಲ್ ಆಗಿತ್ತು. ಅಲ್ಲದೆ, ರೌಡಿ ಶೀಟರ್‌ಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಇದು ಕೂಡ ಭಾರೀ ವೈರಲ್ ಆಗತ್ತು. ಇದರ ಬೆನ್ನಲ್ಲೇ ಪೊಲೀಸರು ನಟ ದರ್ಶನ್‌ನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ಮೊದಲು ಈ ಬಗ್ಗೆ ಎಚ್ಚತ್ತ ಸರ್ಕಾರ ಕೋರ್ಟ್ ಮೊರೆ ಹೋಗಿತ್ತು. ಬಳಿಕ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬಗ್ಗೆ ಹಲವರು ಪ್ರತಿಕ್ರಿಯೆಗಳನ್ನು ನೀಡಿ, ಇಲ್ಲಿಯೂ ಕೂಡ ಗಾಂಜಾ, ಸಿಗರೇಟ್, ಮೊಬೈಲ್ ಎಲ್ಲವೂ ಸಫ್ಲೈ ಆಗುತ್ತದೆ ಎನ್ನುವ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
"ಬಳ್ಳಾರಿ ಜೈಲ್ ಸೇಫ್ ಅಲ್ಲ, ನಟ ದರ್ಶನ್‌ನನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಿ, ಅಲ್ಲಿ ಪರಿವರ್ತನೆ ಆಗಲಿ," ಎಂದು ಮಾಜಿ ಕೈದಿ ಸಿಗ್ಲಿ ಬಸ್ಯಾ ಎಂಬುವವರು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ. ಇನ್ನು "ಬಳ್ಳಾರಿ ಜೈಲಿನಿಂದ ಗ್ರೇಟ್ ಎಸ್ಕೇಪ್ ಆದವರೂ ಇದ್ದಾರೆ. ಅಲ್ಲದೆ, ಇಲ್ಲಿ ಮೊಬೈಲ್, ಗಾಂಜಾ, ಚರಸ್ ಎಲ್ಲೂ ಸಿಗುತ್ತದೆ," ಅಂತಲೂ ಹೇಳಿದ್ದಾರೆ.
"ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ, ಬೆಳಗಾವಿ ಹಿಂಡಲಗಾ, ಶಿವಮೊಗ್ಗ, ಧಾರವಾಡ ದರ್ಗಾ, ಗುಲ್ಬರ್ಗ ಜೈಲಿಗೆ ಹಾಕಿದರೂ ಸೇಫ್ ಅಲ್ಲ. ಮತ್ತೆ ಮನುಷ್ಯವಾಗಿ ಬರಬೇಕೆಂದರೆ, ದರ್ಶನ್‌ನನ್ನು ತಿಹಾರ್ ಜೈಲಿಗೆ ಹಾಕಿ, ಅಲ್ಲಿ ಏಕಾಂಗಿಯಾಗಿ ಇಟ್ಟು ಕೇಸ್ ಇತ್ಯರ್ಥ ಆಗುವವರೆಗೂ ಅವರ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಿ. ಇದರಿಂದ ದರ್ಶನ್ ಮನಪರಿವರ್ತನೆ ಆಗಲಿದೆ," ಎಂದು ಹೇಳಿದ್ದಾರೆ.
"ಬಳ್ಳಾರಿ ಜೈಲಿಗೆ ಹಾಕುತ್ತೇನೆ ಅಂದರೆ ಇಡೀ ಜೈಲನ್ನೇ ಕೊಂಡುಕೊಂಡುಬಿಡುತ್ತಾನೆ ಆತ. ಅಲ್ಲದೆ, ಅಲ್ಲಿರುವ ಅಮಾಯಕರಿಗೆ ಮತ್ತೆ ಹೆಚ್ಚೆಚ್ಚು ಕೇಸ್‌ಗಳು ಬೀಳುವ ಸಾಧ್ಯತೆ ಇರುತ್ತದೆ ಹಾಗೂ ಅಧಿಕಾರಿಗಳು ಕೂಡ ಅಮಾನತು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ದರ್ಶನ್ ಬಳ್ಳಾರಿ ಜೈಲ್ ಸೇಫ್ ಅಲ್ಲ, ತಿಹಾರ್ ಜೈಲೈ ಸೂಕ್ತ," ಎಂದು ಹೇಳಿದ್ದಾರೆ.












Click it and Unblock the Notifications