Baahubali 3 ಬಗ್ಗೆ ಕೊನೆಗೂ ಸಿಕ್ತು ಬಿಗ್ ಅಪ್ಡೇಟ್; ಗುಟ್ಟು ಬಿಟ್ಟುಕೊಟ್ಟ ಪ್ರಭಾಸ್-ಅನುಷ್ಕಾ

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದ್ದ 'ಬಾಹುಬಲಿ' ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಬಿಗ್ ಸರ್ಪ್ರೈಸ್ ಇಲ್ಲಿದೆ. ಇಡೀ ದೇಶವೇ ಕಳೆದ ಹಲವು ವರ್ಷಗಳಿಂದ ಕಾದು ಕುಳಿತಿದ್ದ ಆ ಒಂದು ಪ್ರಶ್ನೆಗೆ ಈಗ ಉತ್ತರವೂ ಸಿಕ್ಕಿದೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ದೃಶ್ಯ ವೈಭವ 'ಬಾಹುಬಲಿ 3' (Baahubali Part 3) ಬರುವುದು ಈಗ ಬಹುತೇಕ ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ನಟ ಪ್ರಭಾಸ್, ಭಲ್ಲಾಳದೇವ ರಾಣಾ ದಗ್ಗುಬಾಟಿ ಮತ್ತು ದೇವಸೇನಾ ಖ್ಯಾತಿಯ ಅನುಷ್ಕಾ ಶೆಟ್ಟಿ ಸುಳಿವು ನೀಡಿದೆ. ಸದ್ಯ ಅಭಿಮಾನಿಗಳು ಮಾಹಿಷ್ಮತಿ ಸಾಮ್ರಾಜ್ಯದ ವೈಭವ ಕಣ್ತುಂಬಿಕೊಳ್ಳಲು ಕಾತರದಲ್ಲಿದ್ದಾರೆ.

ವೈರಲ್ ವಿಡಿಯೋದಲ್ಲಿ ಗುಟ್ಟು ರಟ್ಟು ಮಾಡಿದ ರಾಣಾ-ಪ್ರಭಾಸ್

ಇತ್ತೀಚೆಗೆ ಬಿಡುಗಡೆಯಾಗಿರುವ 'ಬಾಹುಬಲಿ: ದಿ ಟಾರ್ಚ್‌ಬೇರರ್' (Baahubali: The Torchbearer) ಸಾಕ್ಷ್ಯಚಿತ್ರದ ಸಣ್ಣ ವಿಡಿಯೋ ತುಣುಕೊಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಪ್ರಭಾಸ್, ರಾಣಾ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ರಾಣಾ ದಗ್ಗುಬಾಟಿ ಅವರು, "ಇದನ್ನು ಸಾರ್ವಜನಿಕವಾಗಿ ಹೇಳಬೇಕೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ನಿರ್ದೇಶಕ ರಾಜಮೌಳಿ ಮತ್ತು ನಿರ್ಮಾಪಕ ಇಲ್ಲದೇ ಇರುವುದರಿಂದ ನನ್ನ ಮನಸ್ಸಿನಲ್ಲಿ ಇರುವುದನ್ನು ಹೇಳಿಬಿಡುತ್ತೇನೆ. ಈ ಪ್ರಪಂಚ ಇನ್ನೂ ಅದಕ್ಕೆ ಸಿದ್ಧವಾಗಿಲ್ಲದೇ ಇರಬಹುದು, ಆದರೆ ಮತ್ತೊಮ್ಮೆ ಬಾಹುಬಲಿ..." ಎಂದು ಹೇಳಿ ನಗುತ್ತಾ ಮಾತು ಅರ್ಧಕ್ಕೆ ನಿಲ್ಲಿಸಿದ್ದಾರೆ.

Baahubali 3

ಟ್ವಿಸ್ಟ್ ಕೊಟ್ಟ ಪ್ರಭಾಸ್

ರಾಣಾ ಮಾತು ಮುಗಿಸುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ಪ್ರಭಾಸ್ ಅವರು ಮುಗುಳ್ನಗುತ್ತಾ ತಮ್ಮ ಕೈಬೆರಳುಗಳಲ್ಲಿ 'ಮೂರು' (3) ಎಂದು ಸನ್ನೆ ಮಾಡುತ್ತಾರೆ. ಇದನ್ನು ನೋಡಿ ಅನುಷ್ಕಾ ಶೆಟ್ಟಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಜೋರಾಗಿ ನಗಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೆ, ಈ ವಿಡಿಯೋದ ಕೊನೆಯಲ್ಲಿ "And the legacy continues" (ಪರಂಪರೆ ಮುಂದುವರಿಯುತ್ತದೆ) ಎಂಬ ಸಾಲುಗಳು ಕೂಡ ಕೇಳಿಬಂದಿವೆ.

Prabhas: ಶೀಘ್ರದಲ್ಲೇ ಪ್ರಭಾಸ್ ಮದುವೆ; ಹುಡುಗಿ ಯಾರು?
Prabhas: ಶೀಘ್ರದಲ್ಲೇ ಪ್ರಭಾಸ್ ಮದುವೆ; ಹುಡುಗಿ ಯಾರು?

ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸಿನಿಮಾ ಪ್ರೇಮಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ನೆಟ್ಟಿಗರು ಇದನ್ನು 'ಬಾಹುಬಲಿ 3' ಚಿತ್ರದ ಅಧಿಕೃತ ಘೋಷಣೆ ಎಂದೇ ಪರಿಗಣಿಸುತ್ತಿದ್ದಾರೆ. "ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಸಿನೆಮಾ ಇವೆಂಟ್ ಇದು, ರಾಜಮೌಳಿ ಮ್ಯಾಜಿಕ್ ಮತ್ತೆ ಶುರುವಾಗಲಿದೆ" ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಒಂದು ವೇಳೆ ರಾಜಮೌಳಿ ಅವರು ಈ ಪ್ರಾಜೆಕ್ಟ್‌ಗೆ ಕೈ ಹಾಕಿದರೆ, ಅದು ಭಾರತದ ಚಿತ್ರರಂಗದ ಎಲ್ಲ ಹಳೆಯ ಬಾಕ್ಸ್ ಆಫೀಸ್ ರೆಕಾರ್ಡ್‌ಗಳನ್ನು ಧೂಳೀಪಟ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ.

'ಬಾಹುಬಲಿ' ಸೃಷ್ಟಿಸಿದ ಇತಿಹಾಸ

ಬಾಹುಬಲಿ: ದಿ ಬಿಗಿನಿಂಗ್ (2015) ಪ್ರಭಾಸ್, ರಾಣಾ, ತಮನ್ನಾ, ರಮ್ಯಾ ಕೃಷ್ಣನ್, ಸತ್ಯರಾಜ್ ನಟನೆಯ ಈ ಸಿನಿಮಾ ಭಾರತೀಯ ಚಿತ್ರರಂಗದ ಗಡಿಯನ್ನು ದಾಟಿ ಜಾಗತಿಕ ಮಟ್ಟದಲ್ಲಿ ತೆಲುಗು ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿತ್ತು. ಬಳಿಕ 'ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?' ಎಂಬ ಕುತೂಹಲದೊಂದಿಗೆ ತೆರೆಕಂಡ ಈ ಎರಡನೇ ಭಾಗ ಬಾಹುಬಲಿ: ದಿ ಕನ್ಕ್ಲೂಷನ್ (2017) ವಿಶ್ವಾದ್ಯಂತ ಬರೋಬ್ಬರಿ ₹1,788 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ಬರೆದಿತ್ತು. ಕಳೆದ ವರ್ಷವಷ್ಟೇ ಈ ಎರಡು ಭಾಗಗಳನ್ನು ಒಟ್ಟುಗೂಡಿಸಿ ಒಂದೇ ಸಿನಿಮಾವಾಗಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮರು ಬಿಡುಗಡೆ ಮಾಡಲಾಗಿತ್ತು.

ಅಧಿಕೃತ ಪ್ರಕಟಣೆ ಯಾವಾಗ?

ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿರುವುದನ್ನು ಬಿಟ್ಟರೆ, ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಕಡೆಯಿಂದಾಗಲಿ ಅಥವಾ ನಿರ್ಮಾಣ ಸಂಸ್ಥೆಯಿಂದಾಗಲಿ ಕಥೆ ಹಾಗೂ ಶೂಟಿಂಗ್ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ರಾಜಮೌಳಿ ಸದ್ಯ ಮಹೇಶ್ ಬಾಬು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಮೂವರು ಸ್ಟಾರ್ ನಟರು ಕೊಟ್ಟಿರುವ ಹಿಂಟ್ ಮಾತ್ರ ಸದ್ಯಕ್ಕೆ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+