ಪ್ರಭಾಸ್‌, ಸಮಂತಾ, ವಿಜಯ್ ಹೀಗೇ ಸಾಯ್ತಾರೆ: ಖ್ಯಾತ ಜ್ಯೋತಿಷಿ ಶಾಕಿಂಗ್‌ ಭವಿಷ್ಯ

ಟಾಲಿವುಡ್‌ನಲ್ಲಿ ಡಾರ್ಲಿಂಗ್‌ ಪ್ರಭಾಸ್‌, ವಿಜಯ್‌ ದೇವರಕೊಂಡ ಹಾಗೂ ಸಮಂತಾ ರುತ್‌ ಪ್ರಭು ಮೂವರು ಟಾಪ್‌ ನಟ-ನಟಿಯರು. ತಮ್ಮದೇ ಆದ ಅಭಿಮಾನಿ ಬಳಗದೊಂದಿಗೆ ಹೆಚ್ಚು ಕ್ರೇಜ್‌ ಕೂಡ ಹೊಂದಿರುವ ಈ ಮೂವರ ಬಗ್ಗೆ ಇದೀಗ ಒಂದು ಕಹಿ ಹಾಗೂ ಆಘಾತಕಾರಿ ವಿಚಾರವೊಂದು ಹರಿದಾಡುತ್ತಿದೆ. ಈ ಮೂರೂ ಸೆಲೆಬ್ರಿಟಿಗಳ ಬಗ್ಗೆ ಭಯಾನಕ ಭವಿಷ್ಯವಾಣಿಯೊಂದು ಕೇಳಿಬಂದಿದ್ದು, ಇದನ್ನು ಖ್ಯಾತ ಜ್ಯೋತಿಷಿಯೇ ಹೇಳಿದ್ದಾರೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮಂದಿಗೆ ಚಿರಪರಿಚಿತರೂ ಹಾಗೂ ಖ್ಯಾತ ಜ್ಯೋತಿಷಿಯೂ ಆದ ವೇಣು ಸ್ವಾಮಿ ಅವರು ಚಿತ್ರರಂಗದ ಈ ಮೂರು ಮಂದಿಯ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ವಿವಾಹವಾಗಿರುವ ನಾಗಚೈತನ್ಯಾ ಹಾಗೂ ಶೋಭಿತಾ ಧೂಳಿಪಾಲ ಅವರ ಸಂಬಂಧ ಮುರಿಯುತ್ತೆ ಎನ್ನುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಇವರ ದಿವ್ಯದೃಷ್ಟಿ ನಟರಾದ ಪ್ರಭಾಸ್‌, ವಿಜಯ್‌ ದೇವರಕೊಂಡ ಹಾಗೂ ಖ್ಯಾತ ನಟಿ ಸಮಂತಾ ಅವರ ಮೇಲೆ ಬಿದ್ದಿದೆ.

Astrologer Venu Swamy Shocking Prediction About Prabhas Vijay Deverakonda Samantha

ಟಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ದಿಟ್ಟ ಮತ್ತು ಆಘಾತಕಾರಿ ಭವಿಷ್ಯಗಳನ್ನು ನುಡಿಯುವ ಮೂಲಕವೇ ವೇಣುಸ್ವಾಮಿ ಜನಪ್ರಿಯರಾಗಿದ್ದಾರೆ. ಇದೀಗ ಇವರು ಮತ್ತೊಂದು ಗಂಭೀರ ಹೇಳಿಕೆಯೊಂದಿಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಟಾಲಿವುಡ್‌ನ ಟಾಪ್‌ ನಟರಾದ ಡಾರ್ಲಿಂಗ್‌ ಪ್ರಭಾಸ್‌ ಹಾಗೂ ವಿಜಯ್‌ ದೇವರಕೊಂಡ ಅವರ ಬಗ್ಗ ನುಡಿದಿರುವ ಭವಿಷ್ಯವು ಈಗ ಸಂಚಲನ ಹಾಗೂ ವಿವಾದ ಸೃಷ್ಟಿಸಿದೆ. ಇಷ್ಟಕ್ಕೂ ವೇಣುಸ್ವಾಮಿ ಹೇಳಿರುವುದು ಈ ನಟರ ಸಾವಿನ ಕುರಿತಾದ ಭವಿಷ್ಯ!

ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮೂವರು ಪ್ರಸಿದ್ಧ ತೆಲುಗು ಚಲನಚಿತ್ರ ತಾರೆಯರಾದ ಪ್ರಭಾಸ್, ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರು ಆತ್ಮಹತ್ಯೆಯಿಂದ ಸಾಯಬಹುದು ಎಂದು ವೇಣುಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ. ಅವರ ಜ್ಯೋತಿಷ್ಯ ಲೆಕ್ಕಾಚಾರದ ಆಧಾರದ ಮೇಲೆ ಈ ಮೂವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಹೆಚ್ಚಾಗಿರುವುದು ನಟ ವಿಜಯ್ ದೇವರಕೊಂಡ ಅವರಿಗೇ ಎಂದು ಳಿಕೊಂಡಿದ್ದಾರೆ. ಅಲ್ಲದೆ ಪ್ರಭಾಸ್ ಅವರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದೂ ಅವರು ಹೇಳಿರುವುದು ಆಡಿಯೋದಲ್ಲಿದೆ.

Astrologer Venu Swamy Shocking Prediction About Prabhas Vijay Deverakonda Samantha

ಈ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ವೇಣುಸ್ವಾಮಿ ಅವರ ಇಂತಹ ಹೇಳಿಕೆಗಳು ಸೆಲೆಬ್ರಿಟಿಗಳು ಹಾಗೂ ಅವರ ಕುಟುಂಬಸ್ಥರಿಗೆ ಭಾರೀ ನೋವುಂಟು ಮಾಡಬಹುದು ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ. ರೊಚ್ಚಿಗೆದ್ದ ಅಭಿಮಾನಿಗಳು ಈ ಭವಿಷ್ಯವಾಣಿಗಳನ್ನು ಸಾರ್ವಜನಿಕವಾಗಿ ಹೇಳಲು ಹೇಗೆ ಅನುಮತಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಕೆಲವರು ಹೇಳುವ ಪ್ರಕಾರ ಸೆಲೆಬ್ರಿಟಿಗಳನ್ನು ಹೆದರಿಸಲು ವೇಣುಸ್ವಾಮಿ ಇಂತಹ ಭವಿಷ್ಯ ನುಡಿಯುತ್ತಾರೆ. ದುಬಾರಿ ಪೂಜೆಗಳು ಮತ್ತು ಆಚರಣೆಗಳಿಗಾಗಿ ಸೆಲೆಬ್ರಿಟಿಗಳು ತನ್ನ ಬಳಿಗೆ ಬರಲಿ ಎಂಬ ಉದ್ದೇಶದಿಂದಲೂ ಈ ರೀತಿಯ ಹೇಳಿಕೆಗಳ ಮೂಲ ಭಯ ಸೃಷ್ಟಿಸುತ್ತಾರೆ. ಇವರು ಈ ಹಿಂದೆಯೂ ಹಲವು ನಟ-ನಟಿಯರು, ರಾಜಕೀಯ ನಾಯಕರ ವಿವಾದಾತ್ಮಕ ಭವಿಷ್ಯ ನುಡಿದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+