Puneeth Rajkumar: ಅಪ್ಪು ಕಾರ್ಯ ಮುಂದುವರಿಸಿದ ಅಶ್ವಿನಿ ಪುನೀತ್

ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಕನ್ನಡಿಗರ ಎದೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಹೀಗೆ ಅವರು ಬದುಕಿದ್ದಾಗಲೂ ಕನ್ನಡ ಸಿನಿಮಾ ಜಗತ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬೆಂಬಲ ನೀಡುತ್ತಿದ್ದರು. ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಕಾರ್ಯ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಹೌದು ಅಪ್ಪು ಅವರ ರೀತಿಯೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರೋತ್ಸಾಹ ನೀಡುತ್ತಿದ್ದಾರೆ. ಅದರಲ್ಲೂ ಹೊಸಬರ ಪ್ರೋತ್ಸಾಹಕ್ಕೆ ತಮ್ಮದೇ ಬ್ಯಾನರ್ ಅಡಿ ಬೆಂಬಲ ನೀಡಿದ್ದು ಹೆಮ್ಮೆಗೆ ಪಾತ್ರವಾಗಿತ್ತು. ಅದೇ ರೀತಿ ಹಬ್ಬದ ದಿನವೆ 'ಕೆಂದಾವರೆ' ಫಸ್ಟ್ ಲುಕ್ ರಿಲೀಸ್ ಮಾಡಿ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ ದೊಡ್ಮನೆ ಸೊಸೆ. ಹಾಗಾದರೆ ಯಾವುದು ಈ ಚಿತ್ರ? ಹೆಸರಲ್ಲೇ 'ಕೆಂದಾವರೆ' ಇರುವ ಸಿನಿಮಾಗೆ ನಿರ್ದೇಶಕ ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ.

Ashwini Puneeth Rajkumar released Kendavare movie first Look

ಹೊಸ ಹೀರೋ.. ಡೈರೆಕ್ಟರ್ ಯಾರು?

ಅಷ್ಟಕ್ಕೂ ಕಡಲತೀರದ ಭಾರ್ಗವ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪನ್ನಾಗ ಹೊಸ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡ್ಲಾಗಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಟೈಟಲ್ ಮತ್ತು ಫಸ್ಟ್ ಲುಕ್ ಲಾಂಚ್ ಮಾಡಿ ಚಿತ್ರ ತಂಡಕ್ಕೆ ಹಬ್ಬದ ದಿನ ಶುಭ ಕೋರಿದ್ದಾರೆ. ಪನ್ನಾಗ ಹೊಸ ಹೆಜ್ಜೆಗೆ ಕೆಂದಾವರೆ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಆದಿತ್ಯ ವಿನೋದ್ ಹೀರೋ ಆಗಿ ಸ್ಯಾಂಡಲ್ ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ವಿನೋದ್ ಮ್ಯೂಸಿಕ್ ಆಲ್ಬಂ ಅಲ್ಲಿ ನಟಿಸಿದ್ದರು.

ಇನ್ನು ನೈಜ ಘಟನೆ ಆಧಾರಿತ ಕೆಂದಾವರೆ ಸಿನಿಮಾಗೆ ಆದಿತ್ಯ ವಿನೋದ್, ಹಿತಾಂಶು ಸಂಗೀತ ಒದಗಿಸುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ ನೀಡಲಿದ್ದಾರೆ. ಅಪ್ರಮೇಯ ಫಿಲ್ಮಂಸ್ ಬ್ಯಾನರ್ ನಡಿ ಚಿತ್ರ ತಯಾರಾಗುತ್ತಿದ್ದು, ಅನಿಲ್ ಎಂ ಎಚ್, ಪ್ರಶಾಂತ್ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿ, ಕಾರ್ಕಳ, ಸಾಗರ ಭಾಗದಲ್ಲಿ ಕೆಂದಾವರೆ ಚಿತ್ರದ ಚಿತ್ರೀಕರಣ ನಡೆಸಲು ತಂಡ ಸಜ್ಜಾಗಿದೆ. ನವೆಂಬರ್ ತಿಂಗಳಿನಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಈ ಮಧ್ಯೆ ಹಬ್ಬದ ದಿನವೇ ಫಸ್ಟ್ ಲುಕ್ ರಿಲೀಸ್ ಮಾಡಿ ಹೊಸ ಹುರುಪಿನೊಂದಿಗೆ ಮುಂದೆ ಹೋಗಲು ಸಿನಿಮಾ ತಂಡ ತಯಾರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+