ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ರಾಜಕುಮಾರ್ ಕಾರಣ ಎಂದ ದರ್ಶನ್ ಫ್ಯಾನ್ಸ್- ಅಪ್ಪು ಅಭಿಮಾನಿಗಳು ಗರಂ
ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್‌ರಾಜಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ. ಅಶ್ವಿನಿ ಪುನೀತ್‌ರಾಜಕುಮಾರ್ ಅವರಿಗೆ ಅವಮಾನ ಮಾಡಿದ್ದಕ್ಕೆ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ದರ್ಶನ್ ಕೆಲ ಅಭಿಮಾನಿಗಳು ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ರಾಜಕುಮಾರ್ ಕಾರಣ ಎಂದು ಪೋಸ್ಟ್ ಮೂಲಕ ದೂರಿದ್ದಾರೆ.
ಗಜಪಡೆ ಎಂಬ ಪೇಜ್ ಸೃಷ್ಟಿಸಿ ಅದರಲ್ಲಿ, ಅಶ್ವಿನಿ ಪುನೀತ್‌ರಾಜಕುಮಾರ್ ಅವರು ಆರ್‌ಸಿಬಿ ಸೋಲಿಗೆ ಕಾರಣ ಎಂದು ಹೇಳಲಾಗಿದೆ. 'ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಇದು ಆರ್‌ಸಿಬಿ ಸೋಲಿಗೆ ಕಾರಣ' ಎಂದು ಪೇಜ್‌ನಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪವರ್ ಸ್ಟಾರ್ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಕಮೀಷನರ್ ಭೇಟಿ ಮಾಡಿ ದೂರು ನೀಡಲು ಮುಂದಾಗಿದ್ದಾರೆ.

ನಟ ಪುನೀತ್‌ರಾಜಕುಮಾರ್ ಅವರು ಇಲ್ಲದೇ ಇದ್ದಾಗ ಇಂತಹ ಅವಮಾನಗಳು ಹೆಚ್ಚಾಗಿವೆ. ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಬೀಳಬೇಕು ಎಂದು ಅಪ್ಪು ಫ್ಯಾನ್ಸ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಆರ್‌ಸಿಬಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್, ತಮ್ಮ ಲ್ಯಾಪ್ಟ್ಯಾಪ್ನ ಪಾಸ್ವರ್ಡ್ ಬದಲಾಯಿತುತ್ತಿರುತ್ತಾರೆ. ವಿಡಿಯೋನಲ್ಲಿ ಮೊದಲಿಗೆ ಅಣ್ಣಾವ್ರ ಚಿತ್ರ ತೋರಿಸಲಾಗುತ್ತದೆ. ಬಳಿಕ ಪುನೀತ್ರ ಸಣ್ಣ ಪುತ್ಥಳಿ ತೋರಿಸಲಾಗುತ್ತದೆ. ಬಳಿಕ ಅಶ್ವಿನಿ ಅವರು ಲ್ಯಾಪ್ಟಾಪ್ನಲ್ಲಿ 'ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್' ಎಂದು ಇಂಗ್ಲೀಷ್ನಲ್ಲಿ ಪಾಸ್ವರ್ಡ್ ಅಪ್ಡೇಟ್ ಮಾಡುತ್ತಾರೆ. ಆದರೆ ಆ ಪಾಸ್ವರ್ಡ್ ಅನ್ನು ಲ್ಯಾಪ್ಟಾಪ್ ಅಕ್ಸೆಪ್ಟ್ ಮಾಡದೆ, 'ಹಳೆಯ ಪಾಸ್ವರ್ಡ್ ಅನ್ನು ಮತ್ತೊಮ್ಮೆ ಬಳಸುವಂತಿಲ್ಲ' ಎನ್ನುತ್ತದೆ. ಆಗ ಅಶ್ವಿನಿ ಅವರು 'ಬ್ಯಾಂಗಲೂರ್' ಅನ್ನು ಅಳಿಸಿ ಹೊಸ ಪಾಸ್ವರ್ಡ್ ಸೆಟ್ ಮಾಡುತ್ತಾರೆ. ಬಳಿಕ ಕ್ಯಾಮೆರಾ ಕಡೆ ತಿರುಗಿ 'ಅರ್ಥವಾಯ್ತಾ?' ಎಂದು ಕೇಳುತ್ತಾರೆ.

ಇಷ್ಟು ದಿನ ಆರ್‌ಸಿಬಿ ಹೆಸರು 'ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್' ಎಂದಿತ್ತು. ಆದರೆ ಅದನ್ನು ಈ ಬಾರಿ ಬದಲಾಯಿಸಲಾಗುತ್ತಿದ್ದು, ಇನ್ನು ಮುಂದೆ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (Royal Challengers Bengaluru) ಎಂದು ಮಾಡಲಾಗುತ್ತಿದೆ. ಮಾರ್ಚ್ 15ರಂದು ಅದ್ಧೂರಿಯಾಗಿ ಆರಂಭಗೊಂಡ ಆರ್‌ಸಿಬಿ ಅನ್ಬಾಕ್ಸಿಂಗ್ ಇವೆಂಟ್ನ ಪ್ರಚಾರ ಜಾಹೀರಾತು ಇದಾಗಿದೆ. ಇದಕ್ಕೆ ಕಿಡಿಗೇಡಿಗಳು ಕಿಡಿ ಹೊತ್ತಿಸಿದ್ದಾರೆ.












Click it and Unblock the Notifications