ಕನ್ನಡದ ಮತ್ತೊಂದು ನಟಿಯ ದಾಂಪತ್ಯದಲ್ಲಿ ಬಿರುಕು?: ವಿಚ್ಛೇದನ ನಿಜನಾ?

ಇತ್ತೀಚಿಗೆ ಸೆಲೆಬ್ರೆಟಿಗಳ ವಿಚ್ಛೇದನ ಎನ್ನುವುದು ತೀರಾ ಸಾಮಾನ್ಯವಾಗುತ್ತಿದೆ. ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ಕನ್ನಡದ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ, ಅದಾದ ಬಳಿಕ ನಟ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಬೈರಪ್ಪ ಹೀಗೆ ಸಾಲು ಸಾಲು ವಿಚ್ಛೇದನಗಳು ಸುದ್ದಿಯಲ್ಲಿದ್ದವು. ಇದೀಗ ಮತ್ತೊಬ್ಬ ಕನ್ನಡ ನಟಿಯ ವಿಚ್ಛೇದನದ ಬಗ್ಗೆ ಗಾಳಿಸುದ್ದಿ ಹರಿದಾಡುತ್ತಿದೆ.

ಹೌದು ಸ್ಯಾಂಡಲ್‌ವುಡ್‌ ನಟಿ ಮಯೂರಿ ಕ್ಯಾತರಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ. ಪ್ರೀತಿಸಿ ಮದುವೆಯಾಗಿದ್ದ ನಟಿ ಮಯೂರಿ ಕ್ಯಾತರಿ ಸದ್ಯ ಪತಿಯಿಂದ ದೂರವಿದ್ದು, ವಿಚ್ಛೇದನ ಪಡೆದಿರಬಹುದು ಅಥವಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರಬಹುದು ಎನ್ನುವ ಗಾಳಿ ಸುದ್ದಿ ಎಲ್ಲಡೆ ಹರಿದಾಡುತ್ತಿದೆ. ಇದಕ್ಕೆ ಕಾರಣ ಕೂಡ ಇದೆ.

Ashwini Nakshatra Fame Actress Mayuri Is Rumored To Be Separated From Her Husband

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆ್ಯಕ್ಟಿವ್ ಆಗಿರುವ ನಟಿ ಮಯೂರಿ ಕ್ಯಾತರಿ, ಈ ಹಿಂದೆ ಆಗಾಗ ತಮ್ಮ ಪತಿ ಹಾಗೂ ಮಗುವಿನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡುತ್ತಿದ್ದರು. ಪತಿ ಅರುಣ್‌ ಕುಮಾರ್ ಜೊತೆಗಿನ ಕೆಲವು ವಿಶೇಷ ಸಂದರ್ಭಗಳ ಫೋಟೋಗಳನ್ನು ಸಹ ಶೇರ್‌ ಮಾಡುತ್ತಿದ್ದರು. ಆದರೆ ನಟಿ ಮಯೂರಿ ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಆದ ದಿಢೀರ್‌ ಬದಲಾವಣೆ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ನಟಿ ಮಯೂರಿ ಕ್ಯಾತರಿ ಇತ್ತೀಚಿಗೆ ತಮ್ಮ ಹಾಗೂ ಮಗನ ಫೋಟೋ ಹಾಗೂ ವಿಡಿಯೋಗಳನ್ನು ಮಾತ್ರ ಶೇರ್‌ ಮಾಡುತ್ತಿದ್ದಾರೆ. ಅಲ್ಲದೇ ಪತಿ ಜೊತೆಗಿನ ಎಲ್ಲಾ ಫೋಟೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಿಂದ ಡಿಲೀಟ್‌ ಮಾಡಿದ್ದಾರೆ. ಇದರಿಂದ ನೆಟ್ಟಿಗರು ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಭಾವಿಸಿದ್ದಾರೆ. ಆದರೆ ನಟಿ ಮಯೂರಿ ಆಗಲೀ, ಅವರ ಪತಿ ಅರುಣ್‌ ಕುಮಾರ್‌ ಆಗಲೀ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.

Ashwini Nakshatra Fame Actress Mayuri Is Rumored To Be Separated From Her Husband

ಕನ್ನಡ ಕಿರುತೆರೆಯ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಮಯೂರಿ ಕ್ಯಾತರಿ, ಬಳಿಕ ಇಷ್ಟಕಾಮ್ಯ, ಕರಿಯ 2 , ನಟರಾಜ ಸರ್ವಿಸ್, ಕೃಷ್ಣ ಲೀಲಾ, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಪೊಗರು ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ತಮ್ಮ ವೈಯಕ್ತಿಕ ಜೀವನದತ್ತ ಹೆಜ್ಜೆ ಹಾಕಿದ್ದ ಮಯೂರಿ 2020ರಲ್ಲಿ ಅರುಣ್ ಕುಮಾರ್ ಎನ್ನುವವರನ್ನು ಸರಳವಾಗಿ ವಿವಾಹವಾದರು. ಈ ದಂಪತಿಗೆ ಗಂಡು ಮಗುವಿದೆ. ಮದುವೆ, ಮಗು ಎಂದು ನಟನೆಯಿಂದ ದೂರ ಉಳಿದಿದ್ದ ಮಯೂರಿ ಇತ್ತೀಚಿಗೆ ನನ್ನ ದೇವ್ರು ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+