ದಿವ್ಯಾ ಉರುಡುಗ ಬಗ್ಗೆ ಹಲವು ಕಂಪ್ಲೆಂಟ್ ಹೇಳಿದ ಅರವಿಂದ್ ಕೆಪಿ
ಬಿಗ್‌ಬಾಸ್ ಮನೆಗೆ ಹೋದ ಅದೆಷ್ಟೋ ಜನ ಸಿಂಗಲ್ ಆಗಿ ಹೋಗಿ ಮಿಂಗಲ್ ಆಗಿ ಬಂದಿದ್ದಾರೆ. ಹೊರ ಬಂದು ಮದುವೆ ಮಾಡಿಕೊಂಡಿದ್ದಾರೆ. ಇಂತಹ ಜೋಡಿಯಲ್ಲಿ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಬ್ಬರು. ಆದರೆ ಈ ಜೋಡಿ ಮದುವೆ ಆಗಿ ಕೆಲವೇ ವರ್ಷದಲ್ಲಿ ವಿಚ್ಚೇದನ ಪಡೆದುಕೊಂಡಿದೆ. ಇನ್ನೂ ಕೆಲವರು ಬಿಗ್‌ಬಾಸ್ ಮನೆಯಲ್ಲಿ ಲವ್ ಮಾಡಿ ಹೊರಬಂದ ಮೇಲೆ ದೂರವಾಗಿದ್ದಾರೆ. ಇಂತಹ ಜೋಡಿಗಳ ನಡುವೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಇಂದಿಗೂ ಎವರ್ ಗ್ರೀನ್ ಪ್ರೇಮಿಗಳು ಅಂದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಅರವಿಂದ್ ದಿವ್ಯಾ ಉರುಡುಗ ಬಗ್ಗೆ ಕೆಲ ಕಂಪ್ಲೆಂಟ್ಸ್ ಹೇಳಿದ್ದಾರೆ. ಹಾಗಾದರೆ ಅರವಿಂದ ದಿವ್ಯಾ ಬಗ್ಗೆ ಹೇಳಿದ್ದೇನು?
ಅರವಿಂದ್ ಕೆಪಿ ಅವರು ವೃತ್ತಿಪರ ಬೈಕ್ ರೇಸರ್ ಆಗಿದ್ದಾರೆ. ದಿವ್ಯಾ ಉರುಡುಗ ಕಿರುತೆರೆ ನಟಿ ಆಗಿದ್ದಾರೆ. ಇದೀಗ ದಿವ್ಯಾ 'ನಿನಗಾಗಿ' ಧಾರವಾಹಿಯಲ್ಲಿ ನಾಯಕಿ ನಟಿಯಾಗಿ ಪಾತ್ರ ಮಾಡುತ್ತಿದ್ದಾರೆ. ದಿವ್ಯಾ ಅರವಿಂದ್ ಒಟ್ಟಿಗೆ ಭೇಟಿ ಮಾಡಿದ್ದು ಬಿಗ್‌ಬಾಸ್ ಮನೆಯಲ್ಲಿ. ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಪರಿಚಯವಾದ ಈ ಜೋಡಿ ನಡುವೆ ಸ್ನೇಹ ಹುಟ್ಟುಕೊಂಡಿತ್ತು. ಸ್ನೇಹದ ಮೂಲಕ ಕಾಳಜಿ ಹೆಚ್ಚಾಯಿತು. ಈ ಕಾಳಜಿ ಪ್ರೀತಿಯ ರೂಪ ಪಡೆದುಕೊಂಡಿದೆ. ಇದೀಗ ಈ ಜೋಡಿಯ ನಡುವಿನ ಪ್ರೀತಿ ಇನ್ನೂ ಕೂಡ ಹಾಗೆಯೇ ಇದೆ. ಆದರೆ ಅದೆಷ್ಟೋ ಪ್ರೇಮಿಗಳಿಗೆ ಸ್ಪೂರ್ತಿಯಾದ ಈ ಜೋಡಿ ಇನ್ನೂ ಕೂಡ ಮದುವೆ ಆಗಿಲ್ಲ. ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಮಾತ್ರ 'ಅತೀ ಶೀಘ್ರದಲ್ಲಿ' ಅನ್ನೋ ಉತ್ತರವನ್ನು ನೀಡುತ್ತಿದ್ದಾರೆ. ಈ ನಡುವೆ ಅರವಿಂದ್ ದಿವ್ಯಾ ಬಗ್ಗೆ ಹೇಳಿದ ಕೆಲ ಮಾತುಗಳು ವೈರಲ್ ಆಗಿವೆ.

ಹೌದು ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ದಿವ್ಯಾ ಉರುಡುಗ ಹಾಗೂ ಅರವಿಂದ ಕೆಪಿ ಮದುವೆ ಆಗುತ್ತಾರೆ ಎಂದು ಎಲ್ಲರೂ ಕೂಡ ಭಾವಿಸಿದ್ದರು. ಆದರೆ ಈ ಜೋಡಿ ಮದುವೆ ಮಾಡಿಕೊಂಡಿಲ್ಲ. ಹಾಗಂತ ಇಬ್ಬರು ದೂರ ಕೂಡ ಆಗಿಲ್ಲ. ಅರವಿಂದ ಹಾಗೂ ದಿವ್ಯಾ ಇಂದಿಗೂ ಕೂಡ ಪ್ರೀತಿಸುತ್ತಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಇನ್ನೇನು ಮದುವೆ ಆಗುವುದೊಂದೇ ಬಾಕಿ ಇದೆ. ಈ ವೇಳೆ ಖಾಸಗಿ ಯೂಟ್ಯೂಬ್ ಚಾನಲ್‌ಗೆ ಮಾತನಾಡಿದ ಅರವಿಂದ್ ವಿದ್ಯಾ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ದಿವ್ಯಾ ಹೇಗೆ ಇರುತ್ತಾರೆ? ಹೇಗೆ ಹೊಂದಿಕೊಂಡಿದ್ದಾರೆ? ಅರವಿಂದ್ ಅವರಿಗೆ ದಿವ್ಯಾ ಮಾಡುವ ಅಡುಗೆ ಇಷ್ಟನಾ ಇಲ್ವಾ ಇದೆಲ್ಲಾದರ ಬಗ್ಗೆ ಅರವಿಂದ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಗಾದರೆ ದಿವ್ಯಾ ಉರುಡುಗ ಬಗ್ಗೆ ಅರವಿಂದ್ ಕೆಪಿ ಹೇಳಿದ್ದೇನು?

'ದಿವ್ಯಾ ಉರುಡುಗ ಅವರು ಚೆಂದದ ಹುಡುಗಿ ಪಾಪದವರು. ಚೆನ್ನಾಗಿ ಕುಕ್ ಮಾಡುತ್ತಾರೆ. ಅಡುಗೆ ಮಾಡಿದರೆ ತಿನ್ನಲು ಆಗಲ್ಲ. ಕುಳ್ಳಕೆ ಇದ್ದರೂ ಕೂಡ ಚೆನ್ನಾಗಿ ಇದ್ದಾಳೆ. ಬೈಯೋದು ಕ್ಯೂಟ್ ಆಗಿ ಬೈಯುತ್ತಾಳೆ. ಆಕ್ಟ್ ಮಾಡುತ್ತಾಳೆ ಕೆಲವೊಂದು ಬಾರಿ ಏನು ಅಂತಲೇ ಅರ್ಥ ಆಗಲ್ಲ. ಬಟ್ಟೆಗಳನ್ನು ಅಲ್ಲಲ್ಲೇ ಬೀಸಾಡುತ್ತಾಳೆ. ಉಪ್ಪಿಟ್ಟು ಚೆನ್ನಾಗಿ ಮಾಡಲು ಬರೋದಿಲ್ಲ. ತುಂಬಾ ತಲೆ ತಿನ್ನುತ್ತಾಳೆ' ಹೀಗೆ ಅರವಿಂದ್ ದಿವ್ಯಾ ಬಗ್ಗೆ ಹೇಳಿ ಕಾಲೆಳಿದಿದ್ದಾರೆ.
ಆದರೆ ಅರವಿಂದ್ ಅವರು ಹೇಳುವ ಮಾತುಗಳಲ್ಲಿ ದಿವ್ಯಾ ಮೇಲಿನ ಪ್ರೀತಿ ಎದ್ದು ಕಾಣುತ್ತಿತ್ತು. ಇದಕ್ಕೆ ದಿವ್ಯಾ ಕೂಡ ತುಂಬಾ ಚೆನ್ನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅರವಿಂದ್ ತಮ್ಮ ಮೇಲೆ ಕಂಪ್ಲೆಂಟ್ ಹೇಳ್ತಾಯಿದ್ದರೆ ದಿವ್ಯಾ ಅದೆಲ್ಲಾ ಸುಳ್ಳು ಅಂತ ಹೇಳುತ್ತಲೇ ನಗುತ್ತಾರೆ. ಇವರಿಬ್ಬರ ನಡುವಿನ ಅನ್ಯೂನ್ಯತೆ, ಪ್ರೀತಿ ಅದೆಷ್ಟಿದೆ ಅನ್ನೋದು ವೈರಲ್ ವಿಡಿಯೋದಲ್ಲಿ ಎದ್ದು ಕಾಣಿಸುತ್ತಿದೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವಿನ ಪ್ರೀತಿ ಆಳವಾಗಿದ್ದು ಅವರ ಅಭಿಮಾನಿಗಳಿಗೆ ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಮಾತ್ರ ನಿಖರವಾದ ಉತ್ತರ ಸಿಕ್ಕಿಲ್ಲ.












Click it and Unblock the Notifications