ನಟಿ ಶ್ರೀಲೀಲಾ ಮದುವೆ ಶಾಸ್ತ್ರಗಳು ಆಗಲೇ ಶುರು? ಫೋಟೋಗಳು ವೈರಲ್‌, ಹುಡುಗ ಯಾರು?

ಕನ್ನಡದ ಕಿಸ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ಟಾಲಿವುಡ್‌ನ ಟಾಪ್‌ ನಟಿಯಾಗಿ ಮಿಂಚುತ್ತಿರುವ ಶ್ರೀಲೀಲಾ (Sreeleela) ದೊಡ್ಡ ಶಾಕ್‌ ಕೊಟ್ಟಿದ್ದಾರೆ. ಈಗಷ್ಟೇ ಬಾಲಿವುಡ್‌ ಅಂಗಳಕ್ಕೆ ಎಂಟ್ರಿ ನೀಡಿರುವ ಅವರು ನಟರೊಬ್ಬರ ಜೊತೆ ಎಂಗೇಜ್‌ ಆಗಿದ್ದಾರೆ ಎನ್ನುವ ಗಾಸಿಪ್‌ ಇರುವಾಗಲೇ ಎರಡು ಫೋಟೋಗಳನ್ನು ಹಂಚಿಕೊಂಡು ಶ್ರೀಲೀಲಾ ಕುತೂಹಲ ಮೂಡಿಸಿದ್ದಾರೆ. ಸದ್ದಿಲ್ಲದೆ ಶ್ರೀಲೀಲಾ ಅವರ ಮದುವೆ ಕಾರ್ಯಗಳು ನಡೆಯುತ್ತಿದೆಯಾ? ಎಂದು ಎಲ್ಲೆಡೆ ಚರ್ಚೆಯೂ ನಡೆಯುತ್ತಿದೆ.

ಹೌದು, ಶ್ರೀಲೀಲಾ ಅವರು ಇತ್ತೀಚೆಗಷ್ಟೇ ಪುಷ್ಪ ಸಿನಿಮಾದಲ್ಲಿ ಸೊಂಟ ಬಳುಕಿಸುವ ಮೂಲಕ ಕಿಸಿಕ್‌ ಬೆಡಗಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಟಾಲಿವುಡ್‌ನ ಬಹುತೇಕ ಟಾಪ್‌ ನಟರೊಂದಿಗೆ ನಟಿಸಿರುವ ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಕೈಯಲ್ಲಿವೆ. ಅವರ ವಯಸ್ಸು ನೋಡಿದ್ರೆ ಇನ್ನೂ ಮದುವೆ ಎಲ್ಲ ನೋ ಚಾನ್ಸ್‌ ಎಂದುಕೊಂಡಿದ್ರು ಫ್ಯಾನ್ಸ್‌. ಆದ್ರೆ ಶಾಸ್ತ್ರಗಳ ಫೋಟೋ ಹಂಚಿಕೊಂಡು ಶ್ರೀಲೀಲಾ ಶಾಕ್‌ ಕೊಟ್ಟಿದ್ದಾರೆ. ಫೋಟೋಗಳೊಂದಿಗೆ ಕಮಿಂಗ್‌ ಸೂನ್‌ ಎಂದೂ ಶ್ರೀಲೀಲಾ ಬರೆದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ಇದನ್ನು ನಿಶ್ಚಿತಾರ್ಥ ಎನ್ನುತ್ತಿದ್ದರೆ, ಹಲವರು ಆಗಲೇ ಹರಿಶಿನ ಶಾಸ್ತ್ರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.

Are Actress Sreeleela Wedding Photos Real Viral Pics Spark Buzz

ಬಾಲಿವುಡ್‌ ನಟ ಕಾರ್ತಿಕ್ ಜೊತೆ ಡೇಟಿಂಗ್ ವದಂತಿಗಳ ನಡುವೆಯೇ ಶ್ರೀಲೀಲಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮನೆಯಲ್ಲಿ ನಡೆದ ಶಾಸ್ತ್ರಗಳ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಸದಸ್ಯರು ಶ್ರೀಲೀಲಾಗೆ ಹರಿಶಿನ ಹಚ್ಚುತ್ತಿರುವುದು ಫೋಟೋದಲ್ಲಿದೆ. ಸಾಮಾನ್ಯವಾಗಿ ಮದುವೆಯಂತಹ ಶುಭ ಸಮಾರಂಭಗಳ ಹೊತ್ತಲ್ಲಿ ಈ ರೀತಿ ಅರಿಶಿನ ಹಚ್ಚುವುದರಿಂದ ಆಗಲೇ ಶ್ರೀಲೀಲಾ ಮದುವೆ ಶಾಸ್ತ್ರಗಳು ಶುರುವಾಗಿದೆ ಎಂದು ಭಾವಿಸಿದ್ದಾರೆ.

ಈ ಚಿತ್ರಗಳು ರೆಡ್ಡಿಟ್ ಮತ್ತು ಫ್ಯಾನ್‌ ಪೇಜ್‌ಗಳಲ್ಲಿ ವೇಗವಾಗಿ ವೈರಲ್‌ ಆಗಿದ್ದು, ಶ್ರೀಲೀಲಾ ಮದುವೆಯಾಗುತ್ತಿದ್ದಾರೆಯೇ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳನ್ನು ಹುಟ್ಟುಹಾಕಿವೆ. ಆದರೆ ಇದು ಮದುವೆಗಿಂತ ಸಾಂಸ್ಕೃತಿಕ ಕಾರ್ಯಕ್ರಮವಾಗಿರಬಹುದು ಎಂದು ಕೆಲವರು ಹೇಳಿದ್ದಾರೆ. ಶ್ರೀಲೀಲಾ ಅವರ ವಯಸ್ಸು ಇನ್ನೂ 23. ಆದರೆ ಈ ಫೋಟೊಗಳು ಮದುವೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಲಾಗುತ್ತಿದೆ. ನಟಿ ತನ್ನ 'ಸ್ಟಾರ್ ಹುಟ್ಟುಹಬ್ಬ'ವನ್ನು ತನ್ನ ಪ್ರೀತಿಪಾತ್ರರೊಂದಿಗೆ ಈ ರೀತಿ ಆಚರಿಸಿಕೊಂಡಿದ್ದಾರೆ ಎಂದೂ ವರದಿಯಾಗಿದೆ. ಶ್ರೀಲೀಲಾ ಇಲ್ಲಿವರೆಗೆ ಈ ವದಂತಿಗಳ ಬಗ್ಗೆ ಎಲ್ಲಿಯೂ ಪ್ರತಿಕ್ರಿಯಿಸದೆ ಗುಟ್ಟು ಕಾಯ್ದುಕೊಂಡಿದ್ದಾರೆ.

ಬಾಲಿವುಡ್‌ಗೆ ಕಾಲಿಟ್ಟಿರುವ ಶ್ರೀಲೀಲಾ ಅವರು ಕಾರ್ತಿಕ್ ಆರ್ಯನ್ ಅವರ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಇದರ ನಡುವೆಯೇ ಇವರಿಬ್ಬರ ನಡುವೆ ಡೇಟಿಂಗ್‌ ನಡೆಯುತ್ತಿದೆ ಎಂಬ ಗಾಸಿಪ್‌ ಕೂಡ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಕೂಡ ಈ ಹಿಂದೆ ವೈರಲ್‌ ಆಗಿದ್ದವು. ಈ ಚಿತ್ರವು ಅನುರಾಗ್ ಬಸು ನಿರ್ದೇಶನದ ಆಶಿಕಿ 3 ಎಂದು ಊಹಿಸಲಾಗಿದೆ. ಆದರೆ ಚಿತ್ರದ ಹೆಸರು ಇನ್ನೂ ರಿವೀಲ್‌ ಆಗಿಲ್ಲ. ಇದರ ನಡುವೆ ಹುಟ್ಟಿಕೊಂಡಿರುವ ಶ್ರೀಲೀಲಾ ಮದುವೆ ವಿಚಾರಕ್ಕಂತೂ ಸದ್ಯಕ್ಕೆ ಬ್ರೇಕ್‌ ಬಿದ್ದಿಲ್ಲ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+