Ashwini Puneeth Rajkumar: 'ನಮ್ಮ ಮೇಡಂ ದೇವತೆ'; ಅಪ್ಪು ಪತ್ನಿ ಪರ ಧ್ವನಿ ಎತ್ತಿದ ಅಭಿಮಾನಿಗಳು
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಗೆಗಿನ ಪೋಸ್ಟ್‌ಗಳು ಹರಿದಾಡುತ್ತಿದೆ. ಈ ಸಲದ ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲಲು ಅಶ್ವಿನಿ ಪುನೀತ್ ಅವರೇ ಕಾರಣ, ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ಗೆ ಅವರನ್ನು ಕರೆಸಿದ್ದಕ್ಕೇ ತಂಡ ಸೋಲಿನ ಸುಳಿಗೆ ಸಿಲುಕಿದೆ ಎಂದು ಗಜಪಡೆ ಎನ್ನುವ ಹೆಸರಿನ ಟ್ವಿಟರ್ ಖಾತೆಯಿಂದ ಪೋಸ್ಟ್‌ವೊಂದನ್ನು ಮಾಡಲಾಗಿತ್ತು.
ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ಗಜಪಡೆ ಖಾತೆಯನ್ನು ಬಳಸುತ್ತಿದ್ದ ವ್ಯಕ್ತಿಯ ವಿರುದ್ಧ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯಾರ ಖಾತೆ, ಈ ಖಾತೆಯ ರೂವಾರಿ ಯಾರು..? ಈ ಪೋಸ್ಟ್ ಹಿಂದಿನ ವ್ಯಕ್ತಿ ಯಾರು ಎನ್ನುವುದನ್ನು ಪತ್ತೆ ಹಚ್ಚಲೇಬೇಕು ಎಂದು ಅಪ್ಪು ಅಭಿಮಾನಿಗಳು ದೂರು ನೀಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ವ್ಯಕ್ತಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ನಿಂದಿಸಿ ಹಾಕಿದ ಪೋಸ್ಟ್ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಸೆಲೆಬ್ರೆಟಿಗಳು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದು, ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಂತೂ ತೀವ್ರ ಆಕ್ರೋಶಗೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪರ We stands with ashwini ma'am ಎನ್ನುವ ಅಭಿಯಾನ ಆರಂಭಿಸಿದ್ದಾರೆ.
" ನಮ್ಮ ಮೇಡಂ ದೇವತೆ..ಅವರ ಬಗ್ಗೆ ಸಲ್ಲದ ಮಾತನಾಡಬೇಡಿ, ಏನು ಇಷ್ಟು ವರ್ಷ ಆರ್‌ಸಿಬಿ ಅವರು ಕಪ್ ಗೆದ್ದಿದ್ದಾರೆಯೇ..? ಅದು ಆರ್‌ಸಿಬಿ ತಂಡದ ಆಟಗಾರರು ಹಾಗೂ ಮ್ಯಾನೆಜ್‌ಮೆಂಟ್ ವೈಫಲ್ಯ, ಸುಮ್ಮನೆ ಈ ತಾಯಿಯನ್ನು ಎಳೆಯಬೇಡಿ. ಅವರ ಧೈರ್ಯ, ಸ್ವಭಾವ ನಮಗೆಲ್ಲ ಸ್ಫೂರ್ತಿ ಎಂದು" ಅಭಿಮಾನಿಗಳು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪರ ಅಭಿಮಾನಿಗಳು ಧ್ವನಿ ಎತ್ತಿದ್ದಾರೆ. ಇನ್ನು ಅನೇಕ ಪೋಸ್ಟ್‌ಗಳಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಅಭಿಮಾನಿಗಳು ಹೃದಯ ತುಂಬಿ ಹೇಳುತ್ತಿದ್ದಾರೆ. ಅಲ್ಲದೇ ಇಂತಹ ಪೋಸ್ಟ್ ಹರಿಬಿಟ್ಟ ಕಿಡಿಗೇಡಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಭಿಯಾನಕ್ಕೆ ಕರೆಕೊಟ್ಟ ಒಳ್ಳೆ ಹುಡುಗ ಪ್ರಥಮ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧದ ಕೀಳುಮಟ್ಟದ ಪೋಸ್ಟ್ ವಿರುದ್ಧ ನಟ ಪ್ರಥಮ್ ಕಿಡಿಕಾರಿದ್ದಾರೆ. ಅದ್ಭುತ ವ್ಯಕ್ತಿತ್ವದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಡಂಗೆ ನಮ್ಮ ಬೆಂಬಲ. ನೀವೇ ನಿಮ್ಮ ಸ್ಫೂರ್ತಿ, ಗುರುತು ಇಲ್ಲದೇ ಇರೋರು ನಿಮ್ಮ ವ್ಯಕ್ತಿತ್ವವನ್ನು ಅವಮಾನಿಸಿದರೆ ಯಾರನ್ನು ಕೇಳುವುದು? ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮಾತಾಡಿದರೂ ಏನೂ ಮಾಡದ ಕಾನೂನಿನ ವ್ಯವಸ್ಥೆಯ ವಿರುದ್ಧ ಮೌನ ಪ್ರತಿಭಟನೆ. ಎಲ್ಲರೂ ಅಶ್ವಿನಿ ಮೇಡಂ ಫೋಟೋ ಹಾಕಿ ಅವರಿಗೆ ಬೆಂಬಲ ಸೂಚಿಸೋಣ ಎಂದಿದ್ದಾರೆ.












Click it and Unblock the Notifications