Anupama Gowda: 5ನೇ ಕ್ಲಾಸ್‌ಯಿಂದನೇ ನಾನು ಶರ್ಟ್ ಹೊಲಿಯೋದು ಕಲಿತುಕೊಂಡೆ- ಅನುಪಮಾ ಗೌಡ

ಅನುಪಮಾ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಜೊತೆಗೆ ಅದ್ಭುತ ನಿರೂಪಕಿ ಕೂಡ ಹೌದು. ಇವರು ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಬಡತನದಿಂದ ಬಂದ ಹುಡುಗಿ. ಆದರೆ ಇವರ ಬಾಲ್ಯ ಜೀವನ ಎಲ್ಲರಂತೆ ಇರಲಿಲ್ಲ. ಆರ್ಥಿಕವಾಗಿ ಹಿಂದುಳಿದಿದ್ದ ಇವರ ಕುಟುಂಬ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಮುಳ್ಳು ತುಂಬಿದ ಹಾದಿಯಲ್ಲಿ ಅನುಪಮಾ ಬಾಲ್ಯ ಜೀವನ ಸುಗಮವಾಗಿರಲಿಲ್ಲ. ಇದೀಗ ಅವರು ಮೊದಲ ಪ್ರೀತಿ, ಅವರ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಹೀಗೆ ಅವರ ಜೀವನದಲ್ಲಿ ಕಳೆದು ಹೋದ ಕೆಲ ಕಹಿ ಘಟನೆಗಳ ಬಗ್ಗೆ ಅನುಪಮಾ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ರಾಜೇಶ್ ರಿವೀಲ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಅನುಪಮಾ ಗೌಡ ಅವರ ಜೀವನದಲ್ಲಿ ಮರೆಯದ ಕೆಲ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಅವರ ಬಾಲ್ಯ ಎಲ್ಲರಂತೆ ಇರಲಿಲ್ಲ. ಬೇಸಿಗೆ ರಜೆ ಬಂದರೆ ಪೋಷಕರೊಂದಿಗೆ ಪ್ರವಾಸ ಹೋಗುವುದು, ಅಜ್ಜಿ ತಾತನ ಮನೆಗೆ ಹೋಗುವುದು ಇದ್ಯಾವುದು ಅನುಪಮಾ ಮಾಡೇ ಇಲ್ಲ. ಯಾಕೆಂದರೆ ಮನೆ ಇತ್ತು ಆದರೆ ತಂದೆಗೆ ದುಡಿಮೆ ಇರಲಿಲ್ಲ. ತಂದೆಯಿಂದ ಯಾವುದೇ ಹಣದ ಸಹಾಯ ಇರಲಿಲ್ಲ. ಹೀಗಾಗಿ ಅನುಪಮಾ ತಾಯಿ ಮನೆಯ ಜವಬ್ದಾರಿ ತೆಗೆದುಕೊಂಡರು. ಗಾರ್ಮೆಂಟ್ಸ್‌ಗೆ ಹೋಗಿ ಅನುಪಮಾ ಹಾಗೂ ಅವರ ತಂಗಿಯನ್ನು ನೋಡಿಕೊಳ್ಳುತ್ತಿದ್ದರು.

anupama gowda talks about her childhood financial life love and career

ಹೀಗಿರುವಾಗ ಯಾರಿಗೋ ಸಹಾಯ ಮಾಡಲು ಹೋಗಿ ಅನುಪಮಾ ತಾಯಿ ಸಂಕಷ್ಟದಲ್ಲಿ ಸಿಲುಕುವಂತಾಯಿತು. ಯಾರಿಗೂ ಕೊಡಿಸಿದ ಒಂದು ಸಾಲವನ್ನು ತೀರಿಸಲು ಹೋಗಿ ನಾನಾ ಕಡೆ ಸಾಲ ಮಾಡಿಕೊಂಡರು. ಇದರಿಂದ ಸಾಲಗಾರರು ಮನೆಗೆ ಬರುವ ಭಯದಲ್ಲೇ ಜೀವನ ಕಳೆದರು ಅನುಪಮಾ. ಸಾಲಗಾರರ ಕಾಟ ಎಷ್ಟು ಹೆಚ್ಚಾಗಿತ್ತು ಅಂದರೆ ನೆರೆಹೊರೆಯವರಿಂದ ಮನೆಗೆ ಬೀಗ ಹಾಕಿಸಿ ಅನುಪಮಾ ಹಾಗೂ ಅವರ ತಾಯಿ ಮನೆಯಲ್ಲಿ ಅವಿತುಕೊಳ್ಳುವಷ್ಟು ಆತಂಕ ಸೃಷ್ಟಿಸಿತ್ತು. ತಂದೆ ಮನೆಯ ಕಿಟಿಕಿಯಿಂದ ಊಟ ಕೊಟ್ಟರೆ ಮಾತ್ರ ಅವತ್ತು ಅವರಿಬ್ಬರಿಗೆ ಊಟ. ಮನೆಯಲ್ಲಿ ಒಂದು ಹೊತ್ತು ಊಟಕ್ಕೂ ಸಾಕಷ್ಟು ಕಷ್ಟ ಇತ್ತು.

ಹೀಗಾಗಿ ಸಾಲ ತೀರಿಸುವುದು ಅನಿವಾರ್ಯವಾಗಿ ತಾಯಿ ಕೆಲಸದಲ್ಲಿ ಅನುಪಮಾ ಸಹಾಯ ಮಾಡಲು ಶುರು ಮಾಡಿದ್ರು. ಅನುಪಮಾ 5ನೇ ತರಗತಿಯಿಂದಲೇ ಶರ್ಟ್ ಹೊಲಿಯೋದು ಕಲಿತುಕೊಂಡರು. ಅಮ್ಮನಿಗೆ ಸಾಧ್ಯವಾದಷ್ಟು ಸಹಾಯ ಮಾಡ್ತಾಯಿದ್ರು. ಹೀಗಾಗಿ ಓದಿನಲ್ಲಿ ಆಸಕ್ತಿ ಇರಲಿಲ್ಲ. ಶಾಲೆ ಶುಲ್ಕ ಕಟ್ಟಲು ಆಗದೆ ಅನುಪಮಾ ಏಳನೇ ತರಗತಿಗಳಿಗೆ ಹೋಗಲು ಆಗಲೇ ಇಲ್ಲ. ಆದರೆ ಶಿಕ್ಷಕರು ಅನುಪಮಾ ಅವರಿಗೆ ಪರೀಕ್ಷೆ ಬರೆಸಿದರು. ಹತ್ತನೇ ತರಗತಿ ಕೂಡ ಹೇಗೋ ಕಳೆದು ಹೋಯ್ತು. ಅನುಪಮಾ ಅವರಿಗೆ ಹೆಚ್ಚಿನ ಅಭ್ಯಾಸ ಮಾಡಿಸಲು ತಾಯಿಗೆ ಇಷ್ಟ ಇರಲಿಲ್ಲ. ಯಾಕೆಂದರೆ ಶಾಲೆ ಶುಲ್ಕ ಕಟ್ಟುವುದು ಮನೆ ನಡೆಸುವುದು ತುಂಬಾ ಕಷ್ಟ ಆಗಿತ್ತು.

anupama gowda talks about her childhood financial life love and career

ಆದರೂ ಸಂಬಂಧಿಕರ ಮಾತಿಗೆ ಬೆಲೆ ಕೊಟ್ಟು ಓದುವಾಗ ದ್ವಿತೀಯ ಪಿಯುಸಿಯಲ್ಲಿ ಅನುಪಮಾ ಫೇಲ್ ಆದರು. ಆದರೆ ಆ ದೇವರು ಅನುಪಮಾ ಅವರ ವೃತ್ತಿ ಜೀವನವನ್ನು ಬೇರೆ ರೀತಿಯಲ್ಲಿ ಬರೆದಿದ್ದ ಅನಿಸುತ್ತೆ. ಹೀಗಾಗಿ ಅನುಪಮಾ ಸೀರಿಯಲ್ ನಟಿ ಆದರು, ನಿರೂಪಕಿ ಆದ್ರು, ಸಿನಿಮಾ ಕೂಡ ಮಾಡಿದ್ರು.

ಹೀಗೆ ತಮ್ಮ ಆರ್ಥಿಕ ಜೀವನ ಸರಿ ಹೋಯ್ತು ಅನ್ನೋ ಹೊತ್ತಿಗೆ 2018ರಲ್ಲಿ ತಂದೆ ಅನಾರೋಗ್ಯಕ್ಕೆ ಒಳಗಾದರು. ಅನುಪಮಾ ಎಷ್ಟೇ ಕಷ್ಟಪಟ್ಟರು ಕೂಡ ತಂದೆಯನ್ನ ಉಳಿಸಿಕೊಳ್ಳಲು ಆಗಲೇ ಇಲ್ಲ. ಅನುಪಮಾ ಅವರ ಬಳಿ ಹಣ ಇತ್ತು ಆದರೆ ತಂದೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಷ್ಟೇ ಯಾಕೆ ತಂದೆ ಉಸಿರು ಚೆಲ್ಲುವ ಕೊನೆ ಗಳಿಯಲ್ಲೂ ಅನುಮಪಾ ಅವರ ಜೊತೆಗೆ ಇರಲಿಲ್ಲ. ಆ ಒಂದು ನೋವು ನನ್ನ ಮನಸ್ಸಿನಲ್ಲಿ ಈಗಲೂ ಹಾಗೇ ಇದೆ ಎಂದು ಅನುಮಪಾ ಭಾವುಕರಾದರು.

ಇನ್ನೂ ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡಿದ ಹುಡುಗ ಕೂಡ ಅನುಪಮಾ ಅವರಿಂದ ಹಲವಾರು ಮನಸ್ತಾಪಗಳಿಂದಾಗಿ ದೂರ ಆದರು. ಅನುಪಮಾ ಪ್ರೀತಿಸಿದ ಹುಡುಗ ಹಾಗೂ ಅನುಪಮಾ ಒಂದೇ ವೃತ್ತಿಯಲ್ಲಿ ಇದ್ದಾರೆ. ಅವರಿಬ್ಬರ ನಡುವೆ ಮನಸ್ತಾಪಗಳಾಗಿ ದೂರ ಆದರು. ಆದರೆ ಈಗಲೂ ನಾನು ಅವರ ಮೇಲಿಟ್ಟಿರುವ ಪ್ರೀತಿ ಹಾಗೇ ಇದೆ ಎಂದು ಅನುಪಮಾ ಹೇಳಿಕೊಂಡಿದ್ದಾರೆ. ನಾನು ಪ್ರೀತಿಸಿದವರನ್ನು ನಾನು ಸ್ನೇಹಿತನಂತೆ ನೋಡಲು ನನಗೆ ಆಗಲ್ಲ. ಆ ಪ್ರೀತಿ ಹಾಗೇ ಇರುತ್ತೆ ಎಂದಿದ್ದಾರೆ ಅನುಪಮಾ ಗೌಡ. ಬಾಲ್ಯದಲ್ಲಿ ಎಲ್ಲವನ್ನೂ ಕಳೆದುಕೊಂಡ ಅನುಪಮಾಗೆ ಇಂದು ಚಾನಲ್ ಎಲ್ಲವೂ ಆಗಿದೆ.

ಒಟ್ಟಿನಲ್ಲಿ ಸಾಕಷ್ಟು ಏಳು ಬೀಳುಗಳ ನಡುವೆ ಅನುಪಮಾ ಇಂದು ಒಂದು ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+