ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಅನುಪಮಾ ಗೌಡ ಹೀಗಂದ್ಬಿಟ್ರು
Anupama Gowda: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಬ್ಬರನ್ನೊರು ಇಷ್ಟಪಟ್ಟೇ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಇತ್ತೀಚೆಗಷ್ಟೇ ಅವರು ಪರಸ್ಪರ ವಿಚ್ಚೇದನ ಪಡೆದು ದೂರವಾಗಿದ್ಧಾರೆ. ಇನ್ನು ಈ ಬಗ್ಗೆ ಅನುಪಮಾಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೀತಿಯ ವಿಚಾರವಂತೂ ಸಖತ್ ಸುದ್ದಿಯಾಗಿತ್ತು. ಇವರಿಬ್ಬರ ಪ್ರೀತಿಯ ಪಯಣ ಬಿಗ್ ಬಾಸ್ ಮನೆಯಿಂದಲೇ ಪ್ರಾರಂಭವಾಗಿತ್ತು. ಕೊನೆಗೂ ಪ್ರೀತಿಸಿ ವಿವಾಹವೂ ಆದರು. ಆದರೆ ಯಾಕೋ ಏನೋ ಗೊತ್ತಿಲ್ಲ, ಬಳಿಕ ಪರಸ್ಪರ ಇಬ್ಬರ ನಡುವೆ ಬಿರುಕು ಉಂಟಾಗಿ ವಿಚ್ಚೇದನವನ್ನು ಕೂಡ ಪಡೆದರು. ಇನ್ನು ಈ ಬಗ್ಗೆ ಇದೀಗ ಚಂದನ್ ಶೆಟ್ಟಿ ಸ್ನೇಹಿತೆ ಅನುಪಮಾ ಗೌಡ ಪ್ರತಿಕ್ರಿಯಿಸಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿರುವ ಅನುಪಮಾ ಗೌಡ, ಅದು ಅವರ ವೈಯಕ್ತಿಕ ನಿರ್ಧಾರ. ಆದ್ದರಿಂದ ಅದನ್ನು ತಪ್ಪು, ಸರಿ ಅಂತಾ ಜಡ್ಜ್ ಮಾಡುವುದು ತಪ್ಪಾಗುತ್ತದೆ. ಇವತ್ತು ದೂರ ಆಗಿದ್ದು ಸಹ ಒಂದು ಕಾರಣಕ್ಕಾಗಿ ಎಂದು ಅನಿಸುತ್ತದೆ. ಆದರೆ ಯಾವ ಕಾರಣಕ್ಕೆ ದೂರ ಆಗಿದ್ದಾರೆ ಎಂಬುದನ್ನು ಗೊತ್ತಿಲ್ಲದೆ ಹೇಳುವುದಕ್ಕೆ ಆಗುವುದಿಲ್ಲ ಎಂದು ಅನುಪಮಾ ಗೌಡ ಹೇಳಿದ್ದಾರೆ.
ನನಗೆ ನಿವೇದಿತಾ ಗೌಡ ಜೊತೆ ಅಷ್ಟೊಂದು ಸಂಪರ್ಕ ಇರಲಿಲ್ಲ. ಆದ್ದರಿಂದ ಅವರ ಬಗ್ಗೆ ಗೊತ್ತಿಲ್ಲದೆ, ಕಾಮೆಂಟ್ ಮಾಡುವುದು ತಪ್ಪಾಗುತ್ತದೆ. ಅವರ ಸಂಬಂಧದ ಬಗ್ಗೆ ಕಾಮೆಂಟ್ ಮಾಡುವುದು ನನ್ನ ಕೆಲಸವಲ್ಲ. ಚಂದನ್ ಮತ್ತು ನಾನು ಬಿಗ್ ಬಾಸ್ ಮನೆಯಿಂದ ಬಂದ ಮೇಲೆಯೂ ಸ್ನೇಹಿತರಾಗೇ ಇದ್ದೆವು. ತುಂಬಾ ಚೆನ್ನಾಗಿ ಡಿಫರೆಂಟ್ ಆದ ಬಾಂಡ್ ನಮ್ಮ ನಡುವೆ ಇತ್ತು ಎಂದು ಹೇಳಿದ್ದಾರೆ. ಎಂದಿದ್ದಾರೆ.
ಈ ಘಟನೆ ನಡೆದಾಗಲೂ ಚಂದನ್‌ಗೆ ಕುಗ್ಗಬೇಡ ಮನಸ್ಸು ಗಟ್ಟಿ ಮಾಡಿಕೋ ಎಂದು ಹೇಳಿದ್ದೀನಿ. ಅದನ್ನು ಬಿಟ್ಟರೆ ನಾನು ಯಾಕೆ ಏನು ಅಂತಾ ಕೇಳಲಿಲ್ಲ. ಅದು ಅವಶ್ಯಕತೆ ಇಲ್ಲ ಎಂದು ಅನಿಸುತ್ತದೆ. ಒಬ್ಬ ಸ್ನೇಹಿತನಾಗಿ ಅವನು ಚೆನ್ನಾಗಿರಬೇಕಷ್ಟೇ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೊತೆ ಅನುಪಮಾ ಗೌಡ ಕೂಡ ಬಿಗ್ ಬಾಸ್ ಮನೆಗೆ ಹೋಗಿದ್ದರು. ಈ ಮೂವರು ಒಂದೇ ಸೀಸನ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಅಲ್ಲದೆ, ಚಂದನ್ ಶೆಟ್ಟಿ ಮತ್ತು ಅನುಪಮಾ ಗೌಡ ಉತ್ತಮ ಸ್ನೇಹಿತರು ಕೂಡ ಹೌದು. ಆದ್ದರಿಂದ ಅನುಪಮಾ ನೀಡಿರುವ ಈ ಹೇಳಿಕೆ ಭಾರೀ ವೈರಲ್ ಆಗುತ್ತಿದೆ.
ಮತ್ತೊಂದೆಡೆ ವಿಚ್ಚೇದನ ಪಡೆದ ಬಳಿಕ ಚಂದನ್ ಶೆಟ್ಟಿ ಹೊಸ ಹಾಡುಗಳನ್ನು ಮಾಡುವತ್ತ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಕಾಟನ್ ಕ್ಯಾಂಡಿ ಸಾಂಗ್ ಮೂಲಕ ಚಂದನ್ ಶೆಟ್ಟಿ ಮಿಂಚಿದ್ದಾರೆ. ಅಲ್ಲದೆ, ಇನ್ಮುಂದೆಯೂ ಸಹ ಹೆಚ್ಚೆಚ್ಚು ಹಾಡುಗಳನ್ನು ಮಾಡುವುದಾಗಿ ಹೇಳಿದ್ದಾರೆ. ಹೀಗೆ ಡಿವೋರ್ಸ್ ಅದ ಬಳಿಕ ಮತ್ತೆ ಹಳೇ ಗುಂಗಿಗೆ ಅಂದರೆ ಉತ್ತಮ ಹಾಡುಗಳನ್ನು ಕೊಡುವತ್ತ ಗಮನ ಹರಿಸಿದ್ದಾರೆ.












Click it and Unblock the Notifications