ಅನಿರುದ್ಧ್ ರವಿಚಂದರ್‌ಗೆ ‘ಟಾಕ್ಸಿಕ್’ ಚಿತ್ರಕ್ಕಾಗಿ 15,00,00,000 ಕೋಟಿ ಸಂಭಾವನೆ...!
Toxic Update: ಪ್ಯಾನ್ ವರ್ಲ್ಡ್ ಸಿನಿಮಾ Toxic (ಟಾಕ್ಸಿಕ್) ಸಿನಿಮಾದ ಬಿಗ್ ಅಪ್ಡೇಟ್ ಸಿಕ್ಕಿದೆ. ಸಿನಿಮಾ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುವುದ ಬಾಕಿ ಇದೆ. ಅದಾದ ಮೇಲೆ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಇನ್ನಿತರ ಕೆಲಸಗಳು ನಡೆಯುತ್ತವೆ. ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲು 'ಟಾಕ್ಸಿಕ್' ಸಜ್ಜಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್‌ಸ್ಟಾರ್ ಮೈಂಡ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಬಂಡವಾಳ ಹೂಡಿವೆ. ಇದೀಗ 'ಟಾಕ್ಸಿಕ್' ಚಿತ್ರದ ಸಂಗೀತ ನಿರ್ದೇಶಕರ ಸಂಭಾವನೆ ಕನ್ನಡದ ಹಿಟ್ ಸಿನಿಮಾದ ಬಂಡವಾಳದಷ್ಟಿದೆ! ಎಂದು ಹೇಳಲಾಗುತ್ತಿದೆ. ಈ ವಿಚಾರ ಸಖತ್ ಚರ್ಚೆ ಆಗುತ್ತಿದ್ದು, ಯಾಕೆ ಇಷ್ಟೊಂದು ಸಂಭಾವನೆ? ಎಂಬ ವಿವರ ಇಲ್ಲಿದೆ.
ಸಣ್ಣ ಪುಟ್ಟ ಸಿನಿಮಾ ಮಾಡುವ ಬದಲಿಗೆ ಬಹುಕೋಟಿ ಬಂಡವಾಳ ಹೂಡಿಕೆ ಮಾಡಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವತ್ತ ಅನೇಕ ಸ್ಟಾರ್ ನಟರು ಗಮನ ಹರಿಸಿದ್ದಾರೆ. ಅಂತಹ ಸಿನಿಮಾಗಳು ಎಂದ ಮೇಲೆ ಅವುಗಳ ಗಳಿಕೆಯ ಮೇಲೂ ಸಾಕಷ್ಟು ನಿರೀಕ್ಷೆ ಇರುತ್ತದೆ. ಇದೇ ಸಾಲಿಗೆ ಸೇರುವ 'ಟಾಕ್ಸಿಕ್' ಸಿನಿಮಾ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಹಾಗೂ ಪ್ಯಾನ್ ವರ್ಡ್ಡ್ ಸಿನಿಮಾ.

ಇದರಲ್ಲಿ ಕನ್ನಡದ ಸ್ಟಾರ್ ನಟ ಯಶ್ (Yash Toxic update) ಮಾತ್ರವಲ್ಲದೇ ಹಾಲಿವುಡ್ ತಂತ್ರಜ್ಞರು, ನುರಿತ ಕಲಾವಿದರು ಇದ್ದಾರೆ. ಸಿನಿಮಾಗೆ ತಕ್ಕಂತೆ ಕಲಾವಿದರು, ನಿಪುಣರು 'ಟಾಕ್ಸಿಕ್' ಚಿತ್ರತಂಡ ಸೇರಿಕೊಂಡಿದ್ದಾರೆ. ಇದೇ ರೀತಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು 'ಟಾಕ್ಸಿಕ್' ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾಗಿತ್ತು. ಅವರೇ ಸಂಗೀತ ನಿರ್ದೇಶಕ ಎನ್ನಲಾಗಿತ್ತು. ಆದರೆ ಸದ್ಯ 'ಅನಿರುದ್ಧ್' ಎಂಬ ಖ್ಯಾತ ಸಂಗೀತ ನಿರ್ದೇಶಕರ ಹೆಸರು ಕೇಳಿ ಬಂದಿದೆ. ಸಂಗೀತ ನಿರ್ದೇಶನದಿಂದಲೇ ರಾಕ್‌ಸ್ಟಾರ್ ಎಂದು ಕರೆಸಿಕೊಳ್ಳುವ 'ಅನಿರುದ್ಧ ರವಿಚಂದರ್' (Anirudh Ravichander) ಅವರು 'ಟಾಕ್ಸಿಕ್' ಅಡ್ಡಾ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರವಿ ಬಸ್ರೂರು ಅವರೇ 'ಟಾಕ್ಸಿಕ್' ಗೆ ಸಂಗೀತ ನಿರ್ದೇಶಕಾರಿಗದ್ದರೆ ಚೆನ್ನ ಎಂದವರು ಇದ್ದಾರೆ. ಈ 'ಅನಿರುದ್ಧ್' ಆಯ್ಕೆ ಸೂಪರ್ ಎಂದು ಹೇಳುವವರು ಇದ್ದಾರೆ. ಈ ಅನಿರುದ್ಧ್ ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲ. ಸ್ಟಾರ್‌ಗಳು ಸಿನಿಮಾದಿಂದ ಸಿನಿಮಾಗೆ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಂತೆ ಅನಿರುದ್ಧ್ ಅವರು ಸಹ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಹೆಚ್ಚಿಸಿಕೊಂಡು ಸುದ್ದಿಯಲ್ಲಿದ್ದಾರೆ.

₹10 ಕೋಟಿ ಸಂಭಾವನೆ, ಮತ್ತೆ ₹3 ಕೊಟಿ ಹೆಚ್ಚಳ..!
ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ಬೇಡಿಕೆ ಹೊಂದಿರುವ ಸಂಗೀತ ನಿರ್ದೇಶಕ 'ಅನಿರುದ್ಧ್' ಅವರು, ಚಿತ್ರವೊಂದಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. 'ಜೈಲರ್' ಹಾಗೂ 'ಜವಾನ್' ಸಿನಿಮಾ ಹಿಟ್ ಬಳಿಕ ದಿಢೀರ್ ಸಂಭಾವನೆ ಹೆಚ್ಚಿಸಿಕೊಂಡಿರುವ ಅನಿರುದ್ಧ್ ಅವರು ತೆಲುಗಿನ 'ದಿ ಪ್ಯಾರಾಡೈಸ್' ಚಿತ್ರಕ್ಕೆ 12 ಕೋಟಿ ರೂಪಾಯಿ ಕೇಳಿದ್ದರು ಎನ್ನಲಾಗಿದೆ. ಇದೀಗ ಮತ್ತೆ 'ಟಾಕ್ಸಿಕ್' ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ಮತ್ತೆ ಅವರು 3 ಕೋಟಿ ರೂಪಾಯಿ ಹೆಚ್ಚಿಸಿಕೊಂಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಟಾಕ್ಸಿಕ್: 15 ಕೋಟಿ ರೂ.ಗೆ ಬೇಡಿಕೆ..? ಅನಿರುದ್ಧ್ ಸದ್ದು..
ಅಂದರೆ ಒಂದು ಸಿನಿಮಾ ಸಂಗೀತ ನಿರ್ದೇಶನ ಮಾಡಲು 15 ಕೋಟಿ ರೂಪಾಯಿ ಕೇಳುತ್ತಿದ್ದಾರೆ ಎನ್ನಲಾಗಿದೆ. ಇದು ಕನ್ನಡದಲ್ಲಿ ತಯಾರಾಗಿ ಭಾರತವೇ ತಿರುಗಿನೋಡುವಂತೆ ಮಾಡಿದ 'ರಿಷಬ್ ಶೆಟ್ಟಿ' ಅವರ ನಟನೆಯ 'ಕಾಂತಾರಾ' (Kantara) ಸಿನಿಮಾದ ಬಂಡವಾಳವೇ 15 ಕೋಟಿ ರೂಪಾಯಿ. ಇಲ್ಲಿ ಒಬ್ಬ ಸಂಗೀತ ನಿರ್ದೇಶಕರೇ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ ಎಂದರೆ 'ಟಾಕ್ಸಿನ್' ಸಿನಿಮಾದ ಸ್ಟಾರ್, ಸ್ಟಾರ್ ಕಾಸ್ಟ್, ತಂತ್ರಜ್ಞರ ಸಂಭಾವನೆ, ಚಿತ್ರದ ಬಂಡವಾಳ ಎಷ್ಟಿದೆ?. ಚಿತ್ರ ರಿಲೀಸ್ ಆದ ಮೇಲೆ ಅದು ಗಳಿಕೆ ಮಾಡಬಲ್ಲ ಹಣ ಮೇಲಿನ ಅಪಾರ ನಿರೀಕ್ಷೆ ಬಗ್ಗೆ ತಿಳಿಯುತ್ತದೆ. ಅಲ್ಲದೇ ಟಾಕ್ಸಿಕ್ ಸಿನಿಮಾ ರೇಂಜ್ ಎಂಥದ್ದು ಎಂದು ಗೊತ್ತಾಗುತ್ತಿದೆ. ಈ ವಿಚಾರದಿಂದ ಟಾಕ್ಸಿಕ್ ಬೇರೆ ಬೇರೆ ಚಿತ್ರರಂಗದಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ. ಸದ್ಯ ಅನಿರುದ್ಧ್ ಸುದ್ದಿಯಲ್ಲಿದ್ದಾರೆ.












Click it and Unblock the Notifications