ಚಂದನ್ -ನಿವೇದಿತಾ ಡಿವೋರ್ಸ್‌: ಸೃಜನ್‌ ಲೋಕೇಶ್‌ ಹೆಸರು ಫುಲ್‌ ಟ್ರೋಲ್‌ ಯಾಕೆ?

ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ವಿಚಾರದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದೆ.

ಮಗು ವಿಚಾರಕ್ಕೆ, ರೀಲ್ಸ್‌ ವಿಚಾರಕ್ಕೆ, ವಿದೇಶದಲ್ಲಿ ನೆಲಸಬೇಕು ಎನ್ನುವ ವಿಚಾರಕ್ಕೆ ಹೀಗೆ ಅನೇಕ ವಿಚಾರಗಳು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣಗಳು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಮಧ್ಯ ಇದೀಗ ಈ ಪ್ರಕರಣದಲ್ಲಿ ಸೃಜನ್‌ ಲೋಕೇಶ್‌ ಹೆಸರು ತಳುಕು ಹಾಕಿಕೊಂಡಿದೆ.

Anchor Srujan Lokesh Name Troll In Chandan Shetty And Niveditha Gowda Divorce Case

ಇನ್ನು ಚಂದನ್- ನಿವೇದಿತಾ ಡಿವೋರ್ಸ್ ವಿಚಾರದಲ್ಲಿ ನಟ, ನಿರೂಪಕ ಸೃಜನ್ ಲೋಕೇಶ್ ಹೆಸರು ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದೆ. ಸೃಜನ್ ಲೋಕೇಶ್‌ ಅವರಿಂದ ಈ ಮುದ್ದಾದ ದಂಪತಿ ದೂರಾದರು ಎನ್ನುವ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವೀಡಿಯೋ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜೊತೆಗಿನ ಒಂದಷ್ಟು ಫೋಟೊಗಳನ್ನು ವಿಡಿಯೋ ಮಾಡಿ ಹಾಕಿದ್ದರು.

ಒಂದು ಚಂದದ ಕ್ಯಾಪ್ಷನ್‌ ಕೊಟ್ಟು ಸೋಶಿಯಲ್‌ ಮೀಡಿಯಾದಲ್ಲಿ ನಿವೇದಿತಾ ಗೌಡ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ವಿಡಿಯೋ ಶೇರ್‌ ಮಾಡಿದ್ದರು. ಈ ವಿಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದ್ದು, ಜೊತೆಗೆ ಟ್ರೋಲ್‌ ಕೂಡ ಮಾಡಲಾಗುತ್ತಿದೆ. ನಿನ್ನೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ವಿಚ್ಛೇದನ ಬಗ್ಗೆ ಅಧೀಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೂ ಸಹ ಕಮೆಂಟ್ ಬಾಕ್ಸ್‌ನಲ್ಲಿ ಕೆಲವರು ಸೃಜನ್ ಲೋಕೇಶ್ ಹೆಸರು ತೆಗೆದು ಕಾಮೆಂಟ್ ಹಾಕುತ್ತಿದ್ದಾರೆ.

Anchor Srujan Lokesh Name Troll In Chandan Shetty And Niveditha Gowda Divorce Case

ಅಂದಹಾಗೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿಗೆ ಸೃಜನ್ ಲೋಕೇಶ್ ಆಪ್ತರಾಗಿದ್ದರು. ಯಾಕೆಂದರೆ ಬಿಗ್‌ಬಾಸ್ ಬಳಿಕ ನಿವೇದಿತಾ ಗೌಡ ಕಿರುತೆರೆಯ ಅನೇಕ ಶೋಗಳಲ್ಲಿ ಕಾಣಿಸಿಕೊಂಡರು. ಸೃಜನ್ ಲೋಕೇಶ್ ತೀರ್ಪುಗಾರರಾದ ರಾಜಾ ರಾಣಿ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲದೇ ಗಿಚ್ಚಿ ಗಿಲಿಗಿಲಿ ಶೋ ಮೂಲಕವೂ ಸಖತ್‌ ಜನಪ್ರಿಯತೆ ಪಡೆದಿದ್ದರು. ಹೀಗಾಗಿ ಈ ಶೋಗಳ ಮೂಲಕ ಸೃಜನ್ ಲೋಕೇಶ್ ಹಾಗೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿಯ ನಡುವೆ ಒಳ್ಳೆ ಸ್ನೇಹವಿತ್ತು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಟ್ರೋಲ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+