Anchor Anushree: ಸರಿಗಮಪದಲ್ಲಿ ಕಾಣೆಯಾದ ಆ್ಯಂಕರ್ ಅನುಶ್ರೀ ಮಹಾ ಕುಂಭಮೇಳದಲ್ಲಿ ರಾಜ್ ಬಿ.ಶೆಟ್ಟಿ ಜೊತೆ.. ವೈರಲ್
Anchor Anushree: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತವ ಸರಿಗಮಪ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಏನೆಂಬುದಕ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿಹಂಚಿಕೊಂಡಿರುವ ಈ ಫೋಟೋವೇ ಸಾಕ್ಷಿ. ಹಾಗಾದರೆ ಅವರು ಯಾವ ಕಡೆ ಪ್ರಯಾಣ ಬೆಳೆಸಿದ್ದರು ಹಾಗೂ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅದರಲ್ಲೂ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿದ್ದವು. ಈ ಪ್ರಶ್ನೆಗಳಿಗೆ ಸ್ವತಃ ಅನುಶ್ರೀ ಅವರೇ ಕಳೆದ 2024ರ ವರ್ಷ ಮುಂದಿನ ವರ್ಷ ಅಂದರೆ 2025ರಲ್ಲಿ ನನ್ನ ಮದುವೆ ಎಂದು ಬಾಯ್ಬಿಟ್ಟು ಗಮನ ಸೆಳೆದಿದ್ದರು. ಇನ್ನು ಕಳೆದ ವಾರ ಅನುಶ್ರೀ ಸರಿಗಮಪ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಅವರು ಮದುವೆಗೆ ಏನಾದ್ರೂ ತಯಾರಿ ಮಾಡಿಕೊಳ್ಳುತ್ತಿರಬಹುದು ಎನ್ನುವ ಚರ್ಚೆಗಳು ನಡೆಯುತ್ತಿದ್ದವು.

ಇದೀಗ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದು, ಈ ಫೋಟೋ ಅಂತೂ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ, ಅಲ್ಲಿನ ತಮ್ಮ ದೈವಿಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪುಣ್ಯ ನದಿಯಲ್ಲಿ ಮುಳುಗಿ ಏಳುವಾಗ ತುಂಬಾ ಭಾವುಕ ಅನುಭವವನ್ನು ನಾನು ಅನುಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಲ್ಲಿನ ದೈವಿಕ ಅನುಭವ ಕುಂಭ ಮೇಳದಲ್ಲಿ ಭಾಗಿ ಆದವರರಿಗೆ ಮಾತ್ರ ಸಿಗುತ್ತದೆ. ಒಂದು ಬಿಸಿ ವಸ್ತುವನ್ನು ಮುಟ್ಟಿದವರಿಗೆ ಹೇಗೆ ತಿಳಿಯುತ್ತದೆಯೋ ಈ ಅನುಭವ ಕೂಡ ಅಂತಹದ್ದೇ ಆಗಿದೆ. ಆ ಅದ್ಭುತ ಅನುಭವವನ್ನ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. ಹರಹರ ಮಹಾದೇವ ಎಂದು ಹೇಳುತ್ತಾ ತೆರಳುವಾಗ ಅಲ್ಲಿನ ದೀಪಾಲಂಕಾರಗಳಲ್ಲಿ ಶಿವನೇ ಆಶೀರ್ವಾದ ಮಾಡುವಂತೆ ಕಾಣುತ್ತದೆ. ನಾನಂತೂ ನೀರಿನಲ್ಲಿ ಮುಳುಗಿದಾಗೆಲ್ಲ ಕಣ್ಣೀರು ಹಾಕಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ ಅಂತಾ ಪಬ್ಲಿಕ್ ಟಿವಿ ವರದಿ ಮಾಡಿದೆ.
ಮಹಾ ಕುಂಭಮೇಳೆ ನಡೆಯುವುದು 144 ವರ್ಷಕ್ಕೆ ಒಮ್ಮೆ. ಎಷ್ಟು ಜನರಿಗೆ ಈ ಅವಕಾಶ ಸಿಗುತ್ತದೆ ಹೇಳಿ. ಇದು ಕಲಿಗಾಲ, ಎಲ್ಲಾ ಪಾಪ ಮಾಡಿದವರು ಎಂದು ತುಂಬಾ ಜನರು ಹೇಳುತ್ತಾರೆ. ಆದರೆ ನನಗೆ ಅನ್ನಿಸಿದ್ದು ಮಾತ್ರ ಈ ಭಾಗ್ಯ ನಮಗೆ ಸಿಕ್ಕಿದೆ. ನಾವು ಪುಣ್ಯವಂತರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಇಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆ. ಇಂತಹ ವ್ಯವಸ್ಥೆ ಬಗ್ಗೆ ಹೆಮ್ಮೆ ಇದೆ. ಪೊಲೀಸ್ ಸಿಬ್ಬಂದಿ ಸಹ ತುಂಬಾ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ನಾವು 5 ದಿನಗಳ ಕಾಲ ಯೋಜನೆ ಮಾಡಿಕೊಂಡಿದ್ದೇವೆ. ಇನ್ನೂ ನಾವು ವಾರಣಾಸಿಗೆ ಹೋಗಬೇಕು. ಅಯೋಧ್ಯೆಯ ಬಾಲ ರಾಮನ ದರ್ಶನಕ್ಕೆ ಹೋಗಲು ಪ್ರಯತ್ನಿಸುತ್ತೇವೆ. ಇಂದು ಅಖಾಡಕ್ಕೆ ಹೋಗಿ ಸಾಧುಗಳ ಆಶೀರ್ವಾದ ಪಡೆಯಲು ತೆರಳುತ್ತಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಡಿದ್ದಾರೆ. ಇದು ಭಾರೀ ವೈರಲ್ ಆಗುತ್ತಿದೆ.
ಅನುಶ್ರೀ ಇನ್ಸ್ಟಾ ಪೋಸ್ಟ್ ವೈರಲ್: "ಸಂಗಮದಲ್ಲಿ ಮಿಂದು... ಕಣ್ಣುಗಳು ನೆಂದು .. ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು ... ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು !!!ಕೋಟಿ ಜನ ಸೇರೋ ಜಾಗ..ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ, 29/01/2025 ಮೌನಿ ಅಮಾವಾಸ್ಯ .... ಹರ ಹರ ಮಹದೇವ್," ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ. ಮತ್ತೊಂದೆಡೆ ನೆಟ್ಟಿಗರು ಅನುಶ್ರೀ ಅವರು ಹೇಳಿದಂತೆ ಇದೇ ವರ್ಷ ಮದುವೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅಂತಲೂ ಹೇಳುತ್ತಿದ್ದಾರೆ.












Click it and Unblock the Notifications