Anchor Anushree: ಮದುವೆಯಾದ ಬಳಿಕ ಮೊದಲ ಬಾರಿಗೆ ಜೀ ಕನ್ನಡ ವೇದಿಕೆಗೆ ಬಂದ ಅನುಶ್ರೀ: ಭಾವುಕರಾಗಿದ್ಯಾಕೆ?

ಕರಾವಳಿ ಚಲುವೆ, ಕೊಡಗು ಸೊಸೆ , ನಟಿ ಹಾಗೂ ನಿರೂಪಕಿ ಅನುಶ್ರೀ ಅವರು ತಮ್ಮ ಬಹುವರ್ಷದ ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರಿ ಮದುವೆಯಾದ ಬೆನ್ನಲ್ಲೇ ಇದೀಗ ಮತ್ತೇ ತಮ್ಮ ಕೆಲಸದಲ್ಲಿ ಬ್ಯುಸಿ ಯಾಗಿದ್ದು, ಮತ್ತೆ ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಜೀ ಕನ್ನಡ ಮಹಾನಟಿ ವೇದಿಕೆಯಲ್ಲೂ ಕೂಡ ಅನುಶ್ರೀ ಮದುವೆ ಸಂಭ್ರಮಾಚರಣೆ ಜೋರಾಗಿದ್ದು, ಜೀ ಕನ್ನಡ ವಾಹಿನಿ ತವರು ಮನೆಯ ಪ್ರೀತಿ ನೀಡಿದೆ. ಮದುವೆಯಾದ ಬಳಿಕ ಮೊದಲ ಬಾರಿಗೆ ಜೀ ಕನ್ನಡ ವೇದಿಕೆಗೆ ಬಂದ ಅನುಶ್ರೀ ಭಾವುಕರಾಗಿದ್ದಾರೆ.

ಗೆಳೆಯ ರೋಷನ್ ಜೊತೆ ನಟಿ, ನಿರೂಪಣೆ ಅನುಶ್ರೀ ಆಗಸ್ಟ್ 28ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಬಹಳ ಅದ್ಧೂರಿಯಾಗಿ ಇಬ್ಬರ ಮದುವೆ ನೆರವೇರಿತ್ತು. ಸಾಕಷ್ಟು ಸಿನಿಮಾ ತಾರೆಯರು ಕಲ್ಯಾಣೋತ್ಸವದಲ್ಲಿ ಭಾಗಿ ಆಗಿ ಶುಭ ಕೋರಿದ್ದರು. ಅನುಶ್ರೀ ಮತ್ತೆ ನಿರೂಪಣೆ ಕಾಯಕಕ್ಕೆ ಮರಳಿದ್ದಾರೆ. ಜೀ ಕನ್ನಡ ಮಹಾನಟಿ ವೇದಿಕೆಯಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಅನುಶ್ರೀ ಅವರು ವಿವಾಹ ಆದ ಬಳಿಕ ಮೊದಲ ಬಾರಿಗೆ ಅವರು ಜೀ ಕನ್ನಡ ವೇದಿಕೆ ಏರಿದ್ದಾರೆ. ಈ ವೇಳೆ ತಾರಾ ಅವರು ಭಾವುಕರಾದರು. ಇಷ್ಟು ದಿನ ಮಗಳಾಗಿದ್ದವರು, ಪತಿ ಮನೆಗೆ ಹೋದ ಭಾವನೆ ಅವರಿಗೆ ಕಾಡಿದೆ. ಈ ಕಾರಣದಿಂದ ಜೀ ಕನ್ನಡ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಅವರ ಮಡಿಲನ್ನು ತುಂಬಿದ್ದಾರೆ.

Anchor Anushree Spoke Emotionally About Her Husband Roshan

ಅನುಶ್ರೀ ಅವರು ಜೀ ಕನ್ನಡ ವೇದಿಕೆಗೆ ಬಂದ ಅನುಶ್ರೀ ಅವರಿಗೆ ಬಿಗ್‌ ಸರ್ಪ್ರೈಸ್ ಕಾದಿತ್ತು. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಶ್ರೀ ಅವರಿಗೆ ಜೀ ಕನ್ನಡ ತವರು ಮನೆಯ ಪ್ರೀತಿ ನೀಡಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಈಗ ಬಿಡುಗಡೆಯಾಗಿದೆ. ಇತ್ತೀಚೆಗೆ ಜೀ ಕನ್ನಡ ಸಿಬ್ಬಂದಿಗೆ ಶೋಗಳ ಸ್ಪರ್ಧಿಗಳಿಗೆ, ತೀರ್ಪುಗಾರರಿಗೆ ಅನುಶ್ರೀ ಮದುವೆ ಊಟ ಕೂಡ ಹಾಕಿಸಿದ್ದರು. ಅನುಶ್ರೀ ಮಹಾನಟಿ ವೇದಿಕೆಗೆ ಎಂಟ್ರಿ ಆಗುತ್ತಿದ್ದರೆ ಎಲ್ಲರೂ ಮುದುವೆಯ ಶುಭಾಶಯ ಕೋರಿದ್ದಾರೆ.

ಈ ಸಂದರ್ಭದಲ್ಲಿ ರಮೇಶ್ ಅರವಿಂದ್, ತಾರಾ, ತರುಣ್ ಸುಧೀರ್, ಪ್ರೇಮಾ, ಶರಣ್, ನಿಶ್ವಿಕಾ ನಾಯ್ಡು ಎಲ್ಲರೂ ಸಾಥ್ ಕೊಟ್ಟಿದ್ದಾರೆ. ತಾಳಿದವನು ಬಾಳಿಯಾನು ಎನ್ನುವಂತೆ ತಾಳ್ಮೆಯಿಂದ ಕಾದಿದ್ದಕ್ಕೆ ಬಹಳ ಅರ್ಥಪೂರ್ಣವಾದ ತಾಳಿ ಕೊರಳಿಗೆ ಬಿದ್ದಿದೆ ಎಂದು ಅನುಶ್ರೀ ಹೇಳಿದ್ದಾರೆ. ನಮ್ಮ ಮನೆಯ ಮಗಳಿಗೆ ತವರು ಮನೆ ಮಡಿಲು ತುಂಬಿಸಬೇಕು ಎಂದು ತಾರಾ ಮಡಿಲು ತುಂಬಿಸುವ ಶಾಸ್ತ್ರ ಮಾಡಿದ್ದಾರೆ. ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ, ಆ ಜೀವನಕ್ಕೆ ಅರ್ಥ ಕೊಟ್ಟಿದ್ದು ರೋಷನ್ ಎಂದು ಅನುಶ್ರೀ ಹೇಳಿರುವುದು ಪ್ರೋಮೊದಲ್ಲಿ ಹೈಲೆಟ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+