ಆಂಕರ್ ಅನುಶ್ರೀ ಈ ವರ್ಷ ಮದುವೆಯಾಗೋದು ಡೌಟ್: ಕಾರಣ ಇಲ್ಲಿದೆ
ನಟಿ ಜೊತೆಗೆ ನಿರೂಪಕಿ ಆಗಿರುವ ಅನುಶ್ರೀಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ವರ್ಷವೇ ಮದುವೆ ಆಗ್ತೀನಿ ಅಂತ ಅನುಶ್ರೀ ಹೇಳಿದ್ದೇ ಹೇಳಿದ್ದು ಹುಡುಗ ಯಾರು ಅನ್ನೋ ಹುಡುಕಾಟ ಶುರುವಾಗಿದೆ. ಅನುಶ್ರೀಗೆ ಮೂವತ್ತೈದು ವರ್ಷ ದಾಟಿದೆ. ಆದರೂ ಕೂಡ ಮದುವೆ ಬಗ್ಗೆ ಅನುಶ್ರೀ ಎಲ್ಲಿಯೂ ಕೂಡ ಮಾತನಾಡಿರಲಿಲ್ಲ. ಇದೀಗ ಅವರು ಮದುವೆ ಆಗುವುದಾಗಿ ಹೇಳಿಕೊಂಡಿದ್ದೇ ತಡ ಹುಡುಗ ಯಾರು ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ. ಆದರೆ ಈ ವರ್ಷ ಅನುಶ್ರೀ ಮದುವೆ ಆಗುವುದಿಲ್ಲ ಅನ್ನೋದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹೌದು ಆಂಕರ್ ಅನುಶ್ರೀ ಮಾತಲ್ಲೇ ಮನೆ ಕಟ್ಟೋ ಮಾತಿನ ಮಲ್ಲಿ. ತುಟಿ ಅಂಚಲ್ಲಿ ನಗು, ಹರಳು ಹುರಿದಂತೆ ಮಾತು. ಮೈಕ್ ಹಿಡಿದು ನಿಂತರೆ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುವ ತಾಕತ್ತು ಈಕೆಗೆ ಇದೆ. ನಿರೂಪಣೆ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದ ಕರಾವಳಿ ಚಲುವೆ ಈಕೆ. ಆದರೆ ವಯಸ್ಸು 35 ದಾಟಿದರೂ ಕೂಡ ಇನ್ನೂ ಮದುವೆ ಆಗಿಲ್ಲ ಅನ್ನೋದೆ ಅವರ ಅಭಿಮಾನಿಗಳಿಗೆ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

ಮೇಡಂ ನಿಮ್ಮ ಮದುವೆ ಯಾವಾಗ ಅನ್ನೋ ಪ್ರಶ್ನೆಗಳನ್ನು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದರು. ಇನ್ನೂ ಶೂಟಿಂಗ್ ಸೆಟ್‌ನಲ್ಲಿ ಈ ಪ್ರಶ್ನೆ ಬಂದರೆ ಅನುಶ್ರೀ ಉತ್ತರ ನೀಡುವುದಕ್ಕಿಂತ ನುಣಚಿಕೊಳ್ಳುವುದೇ ಹೆಚ್ಚಾಗಿತ್ತು. ಆದರೆ ಇದಕ್ಕೆಲ್ಲಾ ಇತ್ತೀಚೆಗೆ ಅನುಶ್ರೀ ಅವರೇ ಉತ್ತರ ನೀಡಿದ್ದರು.
ಹೌದು ಕರಾವಳಿ ಕುವರಿ ಹಸಮಣೆ ಏರುವ ಸಂದೇಶ ಕೊಟ್ಟಿದ್ದೇ ಕೊಟ್ಟಿದ್ದು ಅವರ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ. ಸಿಂಗಲ್ ಆಗಿದ್ದ ಅನುಶ್ರೀ ಈಗ ಮಿಂಗಲ್ ಆಗೋ ಸೂಚನೆ ಕೊಟ್ಟಿದ್ದರು. ಡಾಲಿ ಧನಂಜಯ್ ನಿರ್ಮಾಣದ ವಿದ್ಯಾಪತಿ ಸಿನಿಮಾದ ಪ್ರಚಾರಕ್ಕಾಗಿ ಇನ್‌ಸ್ಟಾಗ್ರಾಮ್ ಲೈವ್ ಬಂದಿದ್ದ ಅನುಶ್ರೀ ತಮ್ಮ ಮದುವೆ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದರು.

ನಟಿ ಮಲೈಕಾ ಅಕ್ಕ ನಿಮ್ಮ ಮದುವೆ ಯಾವಾಗ? ನಿಮ್ಮ ಮದುವೆ ಆಗೋ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಅನುಶ್ರೀ, ಮದುವೆ ಆಗೋ ಹುಡುಗ ತುಂಬಾ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲದೇ ಇದ್ದರು ಅವನ ಲೈಫ್ ಬಗ್ಗೆ ಅವರು ರೆಸ್ಪಾನ್ಸಿಬಲ್ ಆಗಿ ಇರಬೇಕು. ಇದೇ ವರ್ಷ ನಾನು ಮದುವೆ ಆಗಬಹುದು ಎಂದು ಹೇಳಿಕೊಂಡಿದ್ದರು.
ಆದರೆ ಅನುಶ್ರೀ ಹೇಳಿದ ಮಾತು ಸುಳ್ಳಾಗುವ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಅನುಶ್ರೀ ಮದುವೆಯಾಗುವುದಾಗಿ ಹೇಳಿದ್ದು ನಿಜ ಆದರೆ ಹುಡುಗ ಯಾರು ಅನ್ನೋ ಗುಟ್ಟು ಬಿಟ್ಟುಕೊಟ್ಟಿಲ್ಲ. ಹುಡುಗನನ್ನು ಈಗಾಗಲೇ ನೋಡಲಾಗಿದಿಯೇ ಅಥವಾ ನೋಡಬೇಕಾ ಅನ್ನೋದು ಕೂಡ ಇನ್ನೂ ನಿಖರವಾಗಿ ತಿಳಿದಿಲ್ಲ.
ಹೀಗಿರುವಾಗ ಈ ವರ್ಷ ಅನುಶ್ರೀ ಮದುವೆ ಆಗೋದು ಡೌಟ್ ಎನ್ನಲಾಗುತ್ತಿದೆ. ಅನುಶ್ರೀ ಮದುವೆ ಆಗೋದು ನಿಜ. ಆದರೆ ಈ ವರ್ಷ ಅಲ್ಲ ಮುಂದಿನ ವರ್ಷ ಆಗಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಜೂನ್ ಜುಲೈ ಕಳೆದರೆ ಒಳ್ಳೆಯ ದಿನಗಳು ಇಲ್ಲ. ಹೀಗಾಗಿ ಅಷ್ಟೊರೊಳಗೆ ಮದುವೆ ಆಗಬೇಕು ಅಂದರೆ ಹುಡುಗ ಗೊತ್ತಾಗಿರಬೇಕು. ಆದರೆ ಅನುಶ್ರೀಗೆ ಯಾವುದೇ ಹುಡುಗ ಮದುವೆಗೆ ನಿಶ್ಚಯವಾದಂತೆ ಕಾಣಿಸುತ್ತಿಲ್ಲ. ಹೀಗಾಗಿ ಅನುಶ್ರೀ ಈ ವರ್ಷ ಮದುವೆ ಆಗೋದು ಅನುಮಾನ ಎನ್ನಲಾಗುತ್ತಿದೆ.












Click it and Unblock the Notifications