Anchor Anushree: ಬಿಗ್‌ಬಾಸ್ ಸ್ಪರ್ಧಿಗೆ ಕರೆ ಮಾಡಿದ ಆ್ಯಂಕರ್ ಅನುಶ್ರೀ
ಆ್ಯಂಕರ್ ಅನುಶ್ರೀ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋನಿಂದ ಅನುಶ್ರೀ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ಅನುಶ್ರೀ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಮಹಾ ಕುಂಭ ಮೇಳದಲ್ಲಿ ಅನುಶ್ರೀ ಭಾಗಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೇ ವೇಳೆ ಅನುಶ್ರೀ ಬಿಗ್‌ಬಾಸ್ ಸ್ಪರ್ಧಿಯೊಬ್ಬರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಹಾಗಾದರೆ ಆ ಸ್ಪರ್ಧಿ ಯಾರು? ಅನುಶ್ರೀ ಹೇಳಿದ್ದೇನು?
ಹೌದು... ಆ್ಯಂಕರ್ ಅನುಶ್ರೀ 'ಸರಿಗಮಪ' ರಿಯಾಲಿಟಿ ಶೋನಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವಾಗ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ಬಗ್ಗೆ ಹನುಮಂತ ಮಾಹಿತಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ವಿಜೇತರಾಗಿದ್ದಕ್ಕೆ ಅನುಶ್ರೀ ಹನುಮಂತನಿಗೆ ಶುಭ ಕೋರಿದ್ದಾರೆ. ಹಾಗಾದರೆ ಅನುಶ್ರೀ ಹನುಮಂತನಿಗೆ ಕರೆ ಮಾಡಿ ಹೇಳಿದ್ದೇನು?

ಬಿಗ್‌ಬಾಸ್ ಸ್ಪರ್ಧಿಗೆ ಕರೆ ಮಾಡಿದ ಆ್ಯಂಕರ್ ಅನುಶ್ರೀ
ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿಜೇತರಾದ ಹನುಮಂತನಿಗೆ ಆ್ಯಂಕರ್ ಅನುಶ್ರೀ ಕರೆ ಮಾಡಿ ಶುಭ ಕೋರಿದ್ದಾರೆ. ಕುಂಭ ಮೇಳದಿಂದ ಬಂದ ಬಳಿಕ ಭೇಟಿ ಮಾಡೋಣ ಎಂದು ಹೇಳಿದ್ದಾರೆ. ಅಲ್ಲದೆ ಹನುಮಂತನ ಗುಣಗಾನ ಮಾಡಿದ್ದಾರಂತೆ ಅನುಶ್ರೀ. 'ಬಿಗ್‌ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಡಿದಿರಾ. ನನಗೆ ನಿಮ್ಮ ಆಟ ತುಂಬಾ ಇಷ್ಟ ಆಯ್ತು. ಬಿಡುವಾದಾಗ ಸಿಗೋಣ. ಎಲ್ಲರು ಸೇರಿ ಒಂದೆಡೆ ಸೇರಿ ಊಟಕ್ಕೆ ಹೋಗೋಣ' ಎಂದು ಅನುಶ್ರೀ ಹೇಳಿದ್ದಾರೆ. 'ಸರಿಗಮಪ' ರಿಯಾಲಿಟಿ ಶೋ ತಂಡದವರು ಕೂಡ ಕರೆ ಮಾಡಿ ಹನುಮಂತನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರಿಂದ ಹನುಮಂತ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಅನುಶ್ರೀ ನಿರೂಪಣೆಯಲ್ಲಿ ವೀಕ್ಷಕರನ್ನು ರಂಜಿಸುವಲ್ಲಿ ಸಿಕ್ಕಾಪಟ್ಟೆ ಎಕ್ಸ್‌ಪರ್ಟ್. ಹೀಗಿದ್ದ ಅನುಶ್ರೀ ಕಳೆದ ಬಾರಿ ಸರಿಗಮಪ ನಿರೂಪಣೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದಾಗಿ ಅನುಶ್ರೀ ನಿರೂಪಣೆಯಿಂದ ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಅನುಶ್ರೀ ಹುಟ್ಟುಹಬ್ಬ ಇದ್ದರಿಂದ ಅವರು ನಿರೂಪಣೆಗೆ ಹಾಜರಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಜೊತೆಗೆ ಅನುಶ್ರೀ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದು ನಿಜವಾಗಲೂ ಅನುಶ್ರೀ ನಿರೂಪಣೆಗೆ ಬ್ರೇಕ್ ಹಾಕಿದ್ರಾ ಅಥವಾ ವಾಪಾಸ್ ಬರುತ್ತಾರಾ ಎನ್ನುವುದು ಸ್ಪಷ್ಟವಾಗಿಲ್ಲ. ಕೆಲವರು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಅವರು ಇನ್ನುಮುಂದೆ ನಿರೂಪಣೆ ಮಾಡಲ್ಲ ಎಂದು ಹೇಳುತ್ತಿದ್ದಾರೆ.
ಇದೆಲ್ಲದಕ್ಕೂ ಈ ವಾರ ಉತ್ತರ ಸಿಗಲಿದೆ. ಈ ವಾರವೂ ಅನುಶ್ರೀ ನಿರೂಪಣೆ ಮಾಡದೇ ಇದ್ದಲ್ಲಿ ಅವರು ನಿಜವಾಗಲೂ ನಿರೂಪಣೆಯಿಂದ ದೂರ ಉಳಿದಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು. ಆದರೆ ಈ ಬಗ್ಗೆ ಅನುಶ್ರೀ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ವಾಹಿನಿ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಅನುಶ್ರೀ ಮತ್ತೆ ನಿರೂಪಣೆಗೆ ಬರಲಿದ್ದಾರೆ ಎನ್ನುವ ಮಾತುಗಳೂ ಇವೆ. ಒಟ್ಟಿನಲ್ಲಿ ಅನುಶ್ರೀ ಬಗ್ಗೆ ಕೆಲ ಚರ್ಚೆಗಳು ಸೋಶಿಯಲ್ ಮೀಡಿಯಾಲ್ಲಿ ನಡೆಯುತ್ತಿದ್ದು ಇದಕ್ಕೆಲ್ಲಾ ಉತ್ತರ ಈ ವಾರಾಂತ್ಯಕ್ಕೆ ಸಿಗಲಿದೆ.












Click it and Unblock the Notifications