'ಇವನೇ ನನ್ನ ಪ್ರಪಂಚ' : ವೇದಿಕೆ ಮೇಲೆ ಬೆಸ್ಟ್​ ಫ್ರೆಂಡ್ ಪರಿಚಯಿಸಿ ಮುತ್ತಿನ ಮಳೆಗೈದ ಅನುಪಮಾ ಗೌಡ

ಕನ್ನಡ ಕಿರುತೆರೆಯ ನಟಿ, ನಿರೂಪಕಿ ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮೈಕ್‌ ಸಿಕ್ಕರೇ ಸಾಕು ಪಟ-ಪಟ ಮಾತು, ಸದಾ ನಗು, ಮುಖದಲ್ಲೊಂದು ಪಾಸಿಟಿವ್‌ ವೈಬ್‌, ಡಾನ್ಸ್‌, ಡ್ರೆಸ್ಸಿಂಗ್‌ ಸೆನ್ಸ್‌, ಜೀವನ ಶೈಲಿ ಹೀಗೆ ಪ್ರತಿಯೊಂದಕ್ಕೂ ಎಂಥವರಿಗೂ ಕೂಡ ಇಷ್ಟವಾಗುವ ವ್ಯಕ್ತಿತ್ವ ಅನುಪಮಾ ಗೌಡ ಅವರದು. ತಮ್ಮ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿರುವ ಅನುಪಮಾ ಗೌಡ ಕಷ್ಟದ ಹಾದಿಯಲ್ಲಿ ಸಾಗಿ ಬಂದು ಇದೀಗ ತಮ್ಮದೇ ಆದ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ.

ನಟಿಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಅನುಪಮಾ ಗೌಡ ಇದೀಗ ಎಲ್ಲರ ಮೆಚ್ಚಿನ ಬಹುಬೇಡಿಕೆಯ ನಿರೂಪಕಿ. ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಸದ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಶೋನಲ್ಲಿ ನಿರೂಪಕಿಯಾಗಿರುವ ಅನುಪಮಾ, ಇತ್ತೀಚಿಗೆ ಗಿಚ್ಚಿ ಗಿಲಿಗಿಲಿ-3 ಶೋನಲ್ಲಿ ಭಾಗಿಯಾಗಿದ್ದು, ಈ ವೇದಿಕೆಯಲ್ಲಿ ತಮ್ಮ ಜೀವನದ ಬಹಳ ಮುಖ್ಯವಾದವರನ್ನು ಪರಿಚಯಿಸಿದ್ದಾರೆ.

Anchor Anupama Gowda Introduced Her Best Friend In Gicchi GiliGili Show

ಆಗಸ್ಟ್‌ ತಿಂಗಳ ಮೊದಲ ಭಾನುವಾರ ಅಂದರೆ ಏಪ್ರಿಲ್ 4ರಂದು ಫ್ರೆಂಡ್​ಶಿಪ್ ಡೇ. ಈ ದಿನದ ವಿಶೇಷವಾಗಿ ಅನುಪಮಾ ಗೌಡ ವೇದಿಕೆ ಮೇಲೆ ತಮ್ಮ ಬೆಸ್ಟ್ ಫ್ರೆಂಡ್ ಅನ್ನು ಪರಿಚಯಿಸಿದ್ದಾರೆ. ಸದಾ ಸ್ನೇಹಿತರ ಜೊತೆಯಲ್ಲೇ ಇರುವ ಅನುಪಮಾ ಗೌಡ ಅವರ ಜೀವನದಲ್ಲಿ ಈತ ಎಲ್ಲರ ಸ್ಥಾನವನ್ನು ತುಂಬುತ್ತಿದ್ದಾನೆ ಎನ್ನುವುದನ್ನು ಅನುಪಮಾ ಹೇಳಿದ್ದಾರೆ.

ಅನುಪಮಾ ಗೌಡ ಅವರ ಬೆಸ್ಟ್​ ಫ್ರೆಂಡ್, ಫೇವರೇಟ್‌, ಪ್ರೀತಿ, ಅವರ ಪ್ರಪಂಚ ಮತ್ಯಾರೂ ಅಲ್ಲ ಅವರ ಪ್ರೀತಿಯ ಪುಟಾಣಿ ಶ್ವಾನ. ಅನುಪಮಾ ಗೌಡ ಅವರ ಯೂಟ್ಯೂಬ್‌ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಬೆಸ್ಟ್​ ಫ್ರೆಂಡ್ ಈ ಬಾರಿ ಗಿಚ್ಚಿ ಗಿಲಿಗಿಲಿ-3 ಶೋನ ವೇದಿಕೆಗೆ ಎಂಟ್ರಿಕೊಟ್ಟಿದ್ದಾನೆ.

Anchor Anupama Gowda Introduced Her Best Friend In Gicchi GiliGili Show

ವೇದಿಕೆ ಮೇಲೆ ತಮ್ಮ ಮುದ್ದಿನ ಶ್ವಾನ ಬರುತ್ತಿದ್ದಂತೆ ಅನುಪಮಾ ಗೌಡ ತಬ್ಬಿಕೊಂಡು ಮುದ್ದಾಡಿದ್ದಾರೆ. ಬಳಿಕ ಪ್ರೇಕ್ಷಕರಿಗೆ ಹಾಗೂ ಜೊತೆಯಲ್ಲಿದ್ದವರಿಗೆ ತಮ್ಮ ಗೆಳೆಯನನ್ನು ಪರಿಚಯ ಮಾಡಿಕೊಟ್ಟ ಅನುಪಮಾ ಗೌಡ, 'ಇವನೇ ನನ್ನ ಪ್ರಪಂಚ. ಸಾಮಾನ್ಯವಾಗಿ ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬರುತ್ತಾರೆ ಅಂತಾ ಹೇಳುತ್ತಾರೆ. ಇವನು ಆ ರೀತಿ ನನ್ನ ಜೀವನದಲ್ಲಿ ಬಂದಿದ್ದು. ಇವನು ಬಂದ ಮೇಲೆ ಒಬ್ಬಳು ತಾಯಿ ಆಗಿದ್ದೇನೆ. ನನಗೆ ಈತನೇ ಎಲ್ಲವೂ ಎಂದು ಅನುಪಮಾ ಗೌಡ ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+