Darshan Thoogudeepa: ಜಾಮೀನು ಪಡೆದು ರಿಲೀಫ್ ಆಗಿದ್ದ ದರ್ಶನ್‌ಗೆ ಡಬಲ್ ಶಾಕ್!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗಷ್ಟೇ ಜಾಮೀನು ಪಡೆದು ರಿಲೀಫ್ ಪಡೆದುಕೊಂಡಿರುವ ನಟ ದರ್ಶನ್ ತೂಗುದೀಪ ಅವರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಇತ್ತೀಚೆಗಷ್ಟೇ ಗೃಹ ಸಚಿವ ಪರಮೇಶ್ವರ್ ಅವರು ಈ ಕೊಲೆ ಕೇಸ್‌ನಲ್ಲಿ ಹೆಚ್ಚು ಸಾಕ್ಷ್ಯ ಸಿಕ್ಕಿದ್ದು, ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವುದಾಗಿ ಸುಳಿವು ನೀಡಿದ್ದರು.
ಇದರ ಬೆನ್ನಲ್ಲೇ ನಟ ದರ್ಶನ್ ಅವರ ಕೇಸ್ ಸಂಬಂಧ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು 1,300 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಹಾಗೂ ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಡಿಜಿಟಲ್ ಸಾಕ್ಷಿಗಳನ್ನು ಒಳಗೊಂಡಿರುವ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರಂತೆ.
ಈ ಹಿಂದೆ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಮಾರು 3,991 ಪುಟಗಳ ಚಾರ್ಜ್‌ಶೀಟ್ ಅನ್ನು ಸೆಪ್ಟೆಂಬರ್‌ನಲ್ಲಿ ಕೋರ್ಟ್‌ಗೆ ಸಲ್ಲಿಸಿದ್ದರು. ಈಗ ಮತ್ತೆ 1,300 ಪುಟಗಳ ಹೆಚ್ಚುವರಿ ಆರೋಪಪಟ್ಟಿಯನ್ನು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ವರದಿಯಾಗಿದೆ.
ಇನ್ನು ಈ ಎರಡನೇ ಚಾರ್ಜ್‌ಶೀಟ್‌ನಲ್ಲಿ ಪ್ರಕರಣದ ಆರೋಪಿಗಳ ವಿರುದ್ಧ ಅದರಲ್ಲೂ ಎ2 ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಹಲವು ಮಹತ್ವದ ತಾಂತ್ರಿಕ ಮತ್ತು ವಿಧಿವಿಜ್ಞಾನ ಸಾಕ್ಷಿಗಳು ಉಲ್ಲೇಖವಾಗಿವೆ ಎಂದು ಹೇಳಲಾಗಿದೆ.

ಇದೇ ಕೇಸ್ ವಿಚಾರವಾಗಿ ಗೃಹಸಚಿವ ಜಿ.ಪರಮೇಶ್ವರ್ ಅವರೂ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದ ಜಾಗದಲ್ಲಿ ನಟ ದರ್ಶನ್ ಫೋಟೋ ಸಿಕ್ಕಿರುವ ಬಗ್ಗೆ ಸುಳಿವು ನೀಡಿದ್ದಾರೆ. ಕೊಲೆಯಾದ ಜಾಗದಲ್ಲಿ ದರ್ಶನ್ ಇರೋ ಫೋಟೋ ಪೊಲೀಸರಿಗೆ ಸಿಕ್ಕಿದೆ. ಅದರ ಬಗ್ಗೆ ನಾವು ವರದಿ ಪಡೆಯಲು ಹೈದರಾಬಾದ್‌ಗೆ ಎಫ್ಎಸ್‌ಎಲ್‌ಗೆ ಕಳಿಸಿದ್ದೆವು.
ಇನ್ನು ಆ ತಂತ್ರಜ್ಞಾನ ನಮ್ಮ ಬಳಿ ಇಲ್ಲದಿರುವುದರಿಂದ ಹೈದರಾಬಾದ್‌ಗೆ ಕಳಿಸಬೇಕಾಯಿತು. ಈ ಪೋಟೋದಲ್ಲಿ ದರ್ಶನ್ ಇರುವುದು ದೃಢಪಟ್ಟಿದೆ. ಯಾರೋ ಜೊತೆಯಲ್ಲಿದ್ದವರು ವಿಡಿಯೋ ಶೂಟ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ ಎಂದಿದ್ದಾರೆ.
ಆ ಎಫ್ಎಸ್‌ಎಲ್ ರಿಪೋರ್ಟ್ ಅನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿ, ದರ್ಶನ್‌ಗೆ ಜಾಮೀನು ರದ್ದಯ ಮಾಡುವಂತೆ ಮನವಿ ಮಾಡಲಿದ್ದೇವೆ. ಇಷ್ಟು ದಿನ ಎಫ್ಎಸ್‌ಎಲ್ ವರದಿಗಾಗಿಯೇ ಕಾಯುತ್ತಿದ್ದೆವು. ಈಗ ಅದು ಲಭ್ಯವಾಗಿದ್ದು, ಕೋರ್ಟ್‌ಗೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಶೀಘ್ರವಾಗಿ ದರ್ಶನ್ ಅವರಿಗೆ ಆಪರೇಷನ್ ಮಾಡಿಲ್ಲ ಅಂದ್ರೆ ಬೆನ್ನುಮೂಳೆ ಮುರಿದು ಹೋಗುತ್ತೆ ಎಂದು ಹೇಳಿದ್ರು. ನೋಡಿದ್ರೆ ಇಲ್ಲಿವರೆಗೂ ಆಪರೇಷನ್ ಆಗೇ ಇಲ್ಲ. ಅವರಿಗೆ ಆಪರೇಷನ್‌ನ ಅಗತ್ಯವಿಲ್ಲ ಎನ್ನುವುದು ಇದರಿಂದಲೇ ಗೊತ್ತಾಗುತ್ತೆ. ಜಾಮೀನು ಸಿಕ್ಕಿ ಇಷ್ಟು ದಿನಗಳಾದರೂ ವೈದ್ಯರು ಆಪರೇಷನ್‌ಗೆ ಮುಂದಾಗಿಲ್ಲ. ಈ ಬಗ್ಗೆಯೂ ಕೋರ್ಟ್‌ನಲ್ಲಿ ತೀರ್ಮಾನವಾಗುವ ಅಗತ್ಯವಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿರುವುದು ಸಂಚಲನ ಮೂಡಿಸಿದೆ.
ಈ ಹಿಂದೆಯೂ ಮಾತನಾಡಿದ್ದ ಜಿ.ಪರಮೇಶ್ವರ್ ಅವರು ದರ್ಶನ್ ಅವರಿಗೆ ಚಿಕಿತ್ಸೆ ಮುಗಿದ ನಂತರ ಮತ್ತೆ ಜೈಲಿಗೆ ಹೋಗಬೇಕು ಎಂದಿದ್ದರು. ಅಲ್ಲದೆ ದರ್ಶನ್ ಕೂಡ ಜಾಮೀನು ಅವಧಿ ವಿಸ್ತರಿಸುವಂತೆ ಕೋರ್ಟ್ ಮೊರೆ ಹೋಗಿದ್ದು, ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದು ಮಾಡುವಂತೆ ಮನವಿ ಮಾಡುತ್ತೇವೆ ಎಂದೇ ಹೇಳಿದ್ದರು. ಇದರಿಂದ ದರ್ಶನ್ ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.












Click it and Unblock the Notifications