Amruthadhare Serial: ಜೈದೇವ್ ಬೆಂಬಲಕ್ಕೆ ಬಂದ ವಿಲನ್: ನಮ್ಮ ತಾಳ್ಮೆಯ ಪರೀಕ್ಷೆ ಎಂದ ವೀಕ್ಷಕರು!

Amruthadhare Serial: ಅಮೃತಧಾರೆ ಸೀರಿಯಲ್‌ನ ಹೊಸ ತಿರುವು ವೀಕ್ಷಕರ ತಾಳ್ಮೆ ಪರೀಕ್ಷಿಸಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ವಿಲನ್‌ಗಳು ಬದಲಾಗುತ್ತಿರುವಂತೆ ತೋರಿಸಲಾಗಿತ್ತು. ಇದನ್ನು ನೋಡಿ ಪ್ರೇಕ್ಷಕರು ಸಹ ಖುಷಿಯಾಗಿದ್ದರು. ಹೊಸ ಎಪಿಸೋಡ್‌ಗಳನ್ನು ನೋಡಿರುವ ವೀಕ್ಷಕರು ನಮ್ಮ ಸಹನೆಯನ್ನು ಪರೀಕ್ಷೆ ಮಾಡಬೇಡಿ ಅಂತ ಹೇಳಿದ್ದಾರೆ. ಇಷ್ಟಕ್ಕೂ ಅಮೃತಧಾರೆ ಸೀರಿಯಲ್‌ನಲ್ಲಿ ಬಂದಿರುವ ಹೊಸ ಟ್ವಿಸ್ಟ್‌ ಏನು, ಇದಕ್ಕೆ ವೀಕ್ಷಕರು ಗರಂ ಆಗಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಅಮೃತಧಾರೆಯಲ್ಲಿ ಯಾರ ಮುಖವಾಡ ಕಳಚಲಿದೆ ಎನ್ನುವ ವೀಕ್ಷಕರ ಅನುಮಾನಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಆದರೆ ಹೊಸ ತಿರುವಿಗೆ ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಶಕುನಿ ಮಾವನೇ ಕಳ್ಳಾಟವಾಡುತ್ತಿದ್ದಾನೆ. ಶಕುನಿ ಮಾವನೇ ಮತ್ತೆ ಯೂಟರ್ನ್ ತೆಗೆದುಕೊಳ್ಳಬಹುದೇ ಎಂದೇ ಅಂದುಕೊಳ್ಳಲಾಗಿತ್ತು. ಆದರೆ, ಕಥೆಯಲ್ಲಿ ಯಾರೂ ನಿರೀಕ್ಷಿಸಲಾಗದ ತಿರುವು ಎದುರಾಗಿದೆ.

ಕನ್ನಡದ ಪ್ರಮುಖ ಸೀರಿಯಲ್ ಅಮೃತಧಾರೆಯಲ್ಲಿ ಕೇಡಿ ಜೈದೇವ್ ಬಿಟ್ಟು ಬಹುತೇಕ ಎಲ್ಲ ವಿಲನ್‌ಗಳು ಸಹ ಬದಲಾಗಿದ್ದರು. ಮೊದಲು ಎಲ್ಲ ವಿಲನ್‌ಗಳ ಮುಖವಾಡ ಕಳಚುವುದಕ್ಕೆ ತುಂಬಾ ದಿನಗಳೇ ಆಗಿತ್ತು. ಆದರೆ, ಕೇಡಿ ಜೈದೇವ್‌ನೊಂದಿಗೆ ಶಾಕುಂತಲಾ ಕೈಜೋಡಿಸಿದ್ದಾಳೆ. ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದೆ. ಮಿಂಚು - ಆಕಾಶ್ ಹುಟ್ಟುಹಬ್ಬದ ಸಂಭ್ರಮಾಚರಣೆಯ ದಿನವೇ ಜೈದೇವ್ ಮಕ್ಕಳ ಕೇಕ್‌ನಲ್ಲಿ ಬಾಂಬ್ ಇರಿಸಿದ್ದ, ಇದರಿಂದ ಮನೆಯವರೆಲ್ಲರು ಕಂಗಾಲಾಗಿದ್ದರು. ಜೈದೇವ್ ಅನ್ನು ಶಾಕುಂತಲಾಳೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಳು. ಆದರೆ ಈಗ ಪರೋಕ್ಷವಾಗಿ ಶಾಕುಂತಲಾಳೇ ಜೈದೇವ್ ಅನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದಾಳೆ. ಈ ಮೂಲಕ ಶಾಕುಂತಲಾ ಸಂಪೂರ್ಣ ಬದಲಾಗಿಲ್ಲ ಎನ್ನುವುದು ರಿವೀಲ್ ಆಗಿದೆ.

Amruthadhare Serial

ಯೂಟರ್ನ್ ತಗೊಂಡು ಬಿಟ್ಯಲ್ಲಮ್ಮ ಎಂದ ಜೈದೇವ್

ಜೈದೇವ್ ಜೈಲಿನಲ್ಲಿದ್ದು ಶಾಕುಂತಲಾ ಭೇಟಿ ಮಾಡಿದ್ದಾಳೆ. ಆಗ ಜೈದೇವ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾನೆ. ಹೆಂಗ್ ಅಮ್ಮ ಈ ತರ ಯೂರ್ಟನ್‌ ತಗೋಳಕ್ಕೆ ಆಗುತ್ತೆ. ಇದು ಬರೀ ಯೂಟರ್ನ್ ಅಲ್ಲ ಇದು ಯೂರ್ಟನ್‌ಕ ಬಾಪ್ ಅಂತ ಹೇಳಿದ್ದಾನೆ. ಇದಕ್ಕೆ ಶಾಕುಂತಲಾ ಇದು ನಿನಗೆ ಆಗಬೇಕಾಗಿತ್ತು. ಇದೆಲ್ಲವೂ ಆಗಿದ್ದು ನಿನ್ನಿಂದಲೇ ಅಂತ ಹೇಳಿದ್ದಾಳೆ. ನಿನ್ನಿಂದನೇ ಆಗಿದ್ದು, ನಾನು ಬದಲಾಗುವುದಕ್ಕೆ ನೀನೇ ಕಾರಣ ಅಂತ ಹೇಳಿದ್ದಾಳೆ. ಎಷ್ಟು ಸಲ ನಿನ್ನ ತಪ್ಪನ್ನೆಲ್ಲ ಮುಚ್ಚಿಟ್ಟಿದ್ದಿನಿ. ನೀನು ತಪ್ಪು ಮಾಡಿದ್ಯಾ ಅಂತ ಗೊತ್ತಾದರೂ ಸೇಫ್ ಮಾಡಿದ್ದೀನಿ. ತಾಯಿ ಅಂತ ನೋಡದೆ ನನ್ನನ್ನೇ ಕತ್ತು ಹಿಡಿದು ಹಾಕಿದ್ಯಲ್ಲ ಆದರೂ ನಾನು ನಿನ್ನ ಕ್ಷಮಿಸಿದ್ದೀನಿ. ಆದರೂ ನಾನು ಕ್ಷಮಿಸಿದ್ದೀನಿ ಅಂತ ಶಾಕುಂತಲಾ ಹೇಳಿದ್ದಾಳೆ. ಮಹಿಳೆಯೊಬ್ಬರ ಮೂಲಕ ಜೈದೇವ್‌ಗೆ ಶಾಕುಂತಲಾ ಜಾಮೀನು ಕೊಡಿಸಿದ್ದಾಳೆ. ಪೊಲೀಸ್ ಅವರು ಯಾರೊವೊಬ್ಬರು ನಿಮಗೆ ಜಾಮೀನು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಕೊನೆಗೆ ಪಾರ್ಕ್‌ನಲ್ಲಿ ಜಾಮೀನು ಕೊಡಿಸಿದ್ದು ಯಾರು ಅಂತ ಮಹಿಳೆ ಶಾಕುಂತಲಾ ಅವರನ್ನು ಪರಿಚಯಿಸಿದ್ದಾಳೆ. ಇದು ಪ್ರೇಕ್ಷಕರಲ್ಲಿ ಅಚ್ಚರಿಯನ್ನುಂಟು ಮಾಡಿದೆ.

Amruthadhaare Serial: ಭೂಮಿಕಾ - ಗೌತಮ್‌ಗೆ ಮಿಂಚು ಕೈ ತಪ್ಪುವ ಆತಂಕ, ಜೈದೇವ್‌ಗೆ ಬೇಬಿ ಹೊಸ ಶಾಕ್
Amruthadhaare Serial: ಭೂಮಿಕಾ - ಗೌತಮ್‌ಗೆ ಮಿಂಚು ಕೈ ತಪ್ಪುವ ಆತಂಕ, ಜೈದೇವ್‌ಗೆ ಬೇಬಿ ಹೊಸ ಶಾಕ್

ಪ್ರೇಕ್ಷಕರು ಹೇಳಿದ್ದೇನು

ವೀಕ್ಷಕರ ಸಹನೆಗೂ ಒಂದು ಮಿತಿ ಇದೆ. ಮತ್ತೆ ಮತ್ತೆ ಅದೇ ತಪ್ಪು ಮಾಡುವದು ಕ್ಷಮಿಸುವುದು ಇದಕ್ಕೇನಾದರೂ ಅರ್ಥವಿದೆಯೇ ? ನೋಡುವುದನ್ನು ನಾವೇ ಬಿಡಬೇಕು ಅಷ್ಟೇ ಅಂತ ಗರಂ ಆಗಿದ್ದಾರೆ. ಎಷ್ಟು ಬಾರಿ ಕ್ಷಮಿಸುತ್ತೀರಿ, ಯಾಕೆ ಮೊದಲಿನಿಂದ ಎಲ್ಲವನ್ನೂ ಶುರು ಮಾಡುತ್ತಿದ್ದೀರಿ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್: ಜಯಂತ್ - ವೆಂಕಿ ನಡುವಿನ ರಹಸ್ಯ ರಿವೀಲ್, ಸೈಕೋ ಸ್ಟೋರಿ
ಲಕ್ಷ್ಮೀ ನಿವಾಸ ಸೀರಿಯಲ್: ಜಯಂತ್ - ವೆಂಕಿ ನಡುವಿನ ರಹಸ್ಯ ರಿವೀಲ್, ಸೈಕೋ ಸ್ಟೋರಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+