Amruthadhare serial: ಜೈದೇವ್‌ನ ಮನೆಗೆ ಕರೆತರಲು ಶಕುಂತಲಾ ಪ್ಲ್ಯಾನ್: ಇನ್ನೊಂದು ಮಗು ಬಗ್ಗೆ ಭೂಮಿಕಾಗೆ ಗೊತ್ತಾಯ್ತಾ?

ಅಮೃತಧಾರೆ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವು ತೀವ್ರ ಕುತೂಹಲವನ್ನ ಮೂಡಿಸುತ್ತಿದೆ. ಒಂದು ಕಡೆ ಭೂಮಿಕಾ ಎಲ್ಲಾ ಸಮಸ್ಯೆಗಳನ್ನ ಮೀರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹುಟ್ಟಿದ ಕೆಲ ಕ್ಷಣದಲ್ಲೇ ಹೆಣ್ಣು ಮಗು ಪಿಡ್ನಾಪ್‌ ಆಗಿದ್ದು, ಹುಟ್ಟಿರುವುದು ಒಂದೇ ಮಗು ಎಂದು ಗೌತಮ್‌ ಮನೆ ಮಂದಿ ಎಲ್ಲಾರಿಗೂ ಹೇಳಿದ್ದಾರೆ. ಆದರೆ, ಇನ್ನೊಂದು ಮಗು ಯಾವ ಸಿಗುತ್ತೋ ಎಂದು ಗೌತಮ್‌ ಹುಡುಕಾಟವನ್ನ ನಡೆಸಿದ್ದಾರೆ. ಆದರೆ, ಗೌತಮ್‌ಗೆ ಇನ್ನೊಂದು ಸಮಸ್ಯೆ ಎದುರಾಗಿದೆ.

ಹೌದು, ಮಗುವನ್ನ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದ ಭೂಮಿಕಾಳ ನಡವಳಿಕೆ ನೋಡಿ ಡಾಕ್ಟರ್‌ ಗೌತಮ್‌ ಗೆ ಎಚ್ಚರಿಕೆಯನ್ನ ನೀಡಿದ್ದಾರೆ. ಸಹಜವಾಗಿಯೇ ಮಗು ಎಂದರೇ ತಾಯಿಗೆ ಪೊಸೆಸ್ಸಿವ್‌ನೆಸ್‌ ಇರುತ್ತದೆ. ಆದರೆ ವಯಸ್ಸಾದ ಬಳಿಕ ಮಗು ಆಗಿರೋದಿಕ್ಕೋ ಏನೋ ಭೂಮಿಕಾ ತುಂಬಾನೇ ಪೊಸೆಸ್ಸಿವ್‌ ಆಗಿದ್ದಾರೆ, ವ್ಯಾಕ್ಸಿನೇಶನ್‌ ಸಮಯದಲ್ಲಿಯೂ ತುಂಬಾ ಹೆದರಿದರು, ಮೆಂಟಲಿ ವೀಕ್‌ ಆಗಿದ್ದಾರೆ, ಶಾಕಿಂಗ್‌ ನ್ಯೂಸ್‌ ಹೇಳಿದರೆ ಭೂಮಿಕಾ ಪ್ರಾಣಕ್ಕೆ ಅಪಾಯ ಆಗಬಹುದು ಎಂದು ಡಾಕ್ಟರ್‌ ಎಚ್ಚರಿಕೆ ನೀಡಿದ್ದಾರೆ. ಭೂಮಿಕಾಳ ಈ ಪರಿಸ್ಥಿತಿಯಲ್ಲಿ ಇನ್ನೊಂದು ಮಗುವಿನ ವಿಚಾರ ಮುಚ್ಚಿಟ್ಟಿರುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗುತ್ತಾ ಎಂದು ಗೌತಮ್‌ ಆತಂಕದಲ್ಲಿದ್ದಾನೆ.

Amruthadhare Serial Doctors Advise Gautham Not To Tell Bhumika About The Kidnapped Child

ಈಗಾಗಲೇ ಅವಳ ಮಕ್ಕಳ ವಿಚಾರ ಡಾಕ್ಟರ್‌ ಕರ್ಣ ಹಾಗೂ ಪಾರುಗೆ ಮಾತ್ರ ಗೊತ್ತಿತ್ತು. ಇದೀಗ ಆಸ್ಪತ್ರೆಯಲ್ಲಿ ಲೇಡಿ ಡಾಕ್ಟರ್‌ ಗೆ ಗೌತಮ್‌ ಅವಳಿ ಮಕ್ಕಳ ವಿಚಾರ ಹೇಳಿದ್ದಾರೆ. ಈ ವೇಳೆ ಡಾಕ್ಟರ್‌ ಗಾಬರಿಯಾಗುವ ವಿಚಾರ ಹೇಳಬೇಡಿ. ಒಂದು ವೇಳೆ ಮಗು ವಿಚಾರ ಅವರಿಗೆ ಗೊತ್ತಾದರೆ ಬೇರೆ ತರಹನೇ ಆಗಿ ಬಿಡುತ್ತೆ, ನಿಮ್ಮ ಕಂಟ್ರೋಲ್ ಮೀರಿ ಹೋಗುತ್ತೆ, ಅವರ ಪ್ರಾಣಕ್ಕೂ ಕೂಡ ಅಪಾಯವಾಗಬಹುದು ಎಂದು ಹೇಳಿದ್ದಾರೆ. ಡಾಕ್ಟರ್ ಮಾತು ಕೇಳಿ ಗೌತಮ್ ಆತಂಕಕ್ಕೀಡಾಗಿದ್ದು, ಆ ಮಗು ಕುರಿತು ನೀವು ಕೂಡ ಜಾಸ್ತಿ ಯೋಚನೆ ಮಾಡಬೇಡಿ ಎಂದು ಡಾಕ್ಟರ್ ಕೂಡ ಸಲಹೆ ನೀಡುತ್ತಾರೆ.

ಡಾಕ್ಟರ್‌ನ ಭೇಟಿಯಾಗಿ ಗೌತಮ್ ಮತ್ತು ಆನಂದ್ ಹೊರ ಬರುತ್ತಿದ್ದಂತೆ ಭೂಮಿಕಾ ಮತ್ತೆ ಕೈಯಲ್ಲಿರುವ ಪೇಪರ್‌ಗೆ ವಿಚಾರಿಸಲು ಶುರು ಮಾಡುತ್ತಾಳೆ. ಅದು ಕೇವಲ ಡಿಸ್ಚಾರ್ಜ್ ಪೇಪರಾ ? ನಿಜಾನಾ ? ಎಂದು ಸಾಲು ಸಾಲು ಪ್ರಶ್ನೆಗಳನ್ನ ಕೇಳುತ್ತಾಳೆ. ಆಗ ಗೌತಮ್ ಚಿಕ್ಕ ಪುಟ್ಟ ವಿಚಾರಕ್ಕೆ ಯಾಕೆ ಈ ತರ ಹೈಪರ್ ಆಗ್ತಿದ್ದೀರಾ ಮಗುಗೆ ಏನಾಗಿಲ್ಲ ಎಂದು ಗದರುತ್ತಾನೆ. ಡಾಕ್ಟರ್ ವ್ಯಾಕ್ಸಿನೇಷನ್ ಚಾರ್ಟ್ ಕೊಟ್ಟಿದ್ದಾರೆ ಇಲ್ಲಿ ಬಂದಿದ್ದು ಒಳ್ಳೆಯದೇ ಆಯ್ತು ಎಂದು ಗೌತಮ್ ಹೇಳಿದ್ದು ಭೂಮಿಕಾ ನಾನು ಕೂಡ ಕರ್ಣ ಅವರಿಗೆ ಥ್ಯಾಂಕ್ಸ್ ಹೇಳಬೇಕು ಎನ್ನುತ್ತಾಳೆ. ಆಗ ಗೌತಮ್ ಇಲ್ಲ ಅವರು ಆಪರೇಷನ್ ಥಿಯೇಟರ್‌ನಲ್ಲಿದ್ದಾರೆ ಆಮೇಲೆ ಫೋನ್‌ನಲ್ಲಿಯೇ ಥ್ಯಾಂಕ್ಸ್ ಹೇಳಿದ್ರೆ ಆಯ್ತು ಬನ್ನಿ ಹೊರಡೋಣ ಎಂದು ಅಲ್ಲಿಂದ ಕರೆದೊಯ್ಯುತ್ತಾನೆ. ದಿನದಿಂದ ದಿನಕ್ಕೆ ಭೂಮಿಕಾ ನಡವಳಿಕೆ ನೋಡಿ ಗೌತಮ್‌ ಗೆ ತೀವ್ರ ಆತಂಕಕ್ಕೆ ಒಳಗಾಗಿದ್ದಾನೆ.

ಇನ್ನೊಂದು ಮಗು ಬಗ್ಗೆ ಭೂಮಿಕಾಗೆ ಗೊತ್ತಾಯ್ತ?

ಗೌತಮ್ ಮಗುನ ಕರೆದುಕೊಂಡು ರೂಮ್‌ ಹೊರಗೆ ಬಂದಿದ್ದು, ಶಕುಂತಲಾ ಈ ಸಮಯದಲ್ಲಿ ಕಳೆದುಹೋದ ಮಗು ಬಗ್ಗೆ ಗೌತಮ್ ಜೊತೆ ಮಾತನಾಡುತ್ತಾಳೆ. ಆ ಮಗು ಇಲ್ಲವಲ್ಲಾ ಎಂದು ಬೇಜಾರಾಗುತ್ತಿದೆ. ಈ ಮಗುನ ನೋಡಿ ಖುಷಿ ಪಡುವುದಾ ಅಥವಾ ಆ ಮಗು ಇಲ್ಲವಲ್ಲಾ ಎಂದು ದುಖ ಪಡುವುದಾ ಒಂದು ಗೊತ್ತಾಗುತ್ತಿಲ್ಲ ಎಂದು ಶಕುಂತಲಾ ಹೇಳುತ್ತಾಳೆ. ಇದಕ್ಕೆ ಗೌತಮ್ ಈ ವಿಚಾರ ಮನೆಯಲ್ಲಿ ಮಾತನಾಡುವುದು ಬೇಡ ಈ ವಿಚಾರ ಭೂಮಿಕಾಗೆ ಗೊತ್ತಾಗುವುದು ಬೇಡ, ಗೊತ್ತಾದರೆ ಏನಾಗುತ್ತೆ ಎನ್ನುವ ಆತಂಕ ನನಗೆ ಇದೆ ಎಂದು ಗೌತಮ್‌ ಹೇಳುತ್ತಾನೆ. ಅಪ್ಪಿ ತಪ್ಪಿ ಈ ವಿಚಾರ ಭೂಮಿಕಾ ಕಿವಿಗೆ ಬಿದ್ದರೆ ದೊಡ್ಡ ಪ್ರಾಬ್ಲಂ ಆಗುತ್ತೆ ಈ ವಿಚಾರ ಯಾರ ಹತ್ರ ಕೂಡ ಮಾತನಾಡಬೇಡಿ ಎಂದು ಗೌತಮ್‌ ಶಕುಂತಲಾ ಬಳಿ ಕೇಳಿಕೊಳ್ಳುತ್ತಾನೆ. ಆದರೆ, ಶಕುಂತಲಾ ಈ ವಿಚಾರ ಭೂಮಿಕಾಗೆ ಗೊತ್ತಾಗಬೇಕು ಎಂತ ಪ್ಲ್ಯಾನ್‌ ನಡೆಸುತ್ತಿದ್ದಾರೆ.

ಜೈದೇವ್‌ನ ಮನೆಗೆ ಕರೆತರಲು ಶಕುಂತಲಾ ಪ್ಲ್ಯಾನ್

ಇತ್ತ ಗೌತಮ್‌ ಹಾಗೂ ಭೂಮಿಕಾ ಮಗನ ನಾಮಕಾರಣ ಶಾಸ್ತ್ರದ ಸಂಭ್ರಮದಲ್ಲಿ ಜೈದೇವನ ಮರಳಿ ಮನೆಗೆ ಕರೆದಿರುವ ಶಕುಂತಲಾ ಪ್ಲ್ಯಾನ್‌ ನಡೆಸಿದ್ದಳು. ಮನೆಯಲ್ಲಿ ಮಗುವಿನ ಮೊದಲ ಶಾಸ್ತ್ರ ನಡೆಯುತ್ತಿದೆ. ಜೈದೇವ್‌ನ ಮನೆ ಕರೆಯೋಣ್ವಾ ಎಂದು ಗೌತಮ್‌ ಬಳಿ ಶಕುಂತಲಾ ಕೇಳುತ್ತಾಳೆ. ಆದರೆ, ಗೌತಮ್‌ ನಾನು ಮನೆಗೆ ಕರೆಯುವುದಿಲ್ಲ ಎಂದು ನೇರವಾಗಿ ಹೇಳುತ್ತಾನೆ. ಇತ್ತ ಮಲ್ಲಿ ಬ್ರೇನ್ ವಾಶ್ ಮಾಡಬೇಕು ಅವಳು ಒಪ್ಪಿದರೆ ಮಿಕ್ಕವರನ್ನು ಹೇಗೂ ಒಪ್ಪಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಾಳೆ. ಮಲ್ಲಿ ಬಳಿ ಮಾತನಾಡಲು ಮುಂದಾಗುತ್ತಾಳೆ. ನೀನು ಒಂಟಿಯಾಗಿರುವುದನ್ನು ನನ್ನಿಂದ ನೋಡೋಕೆ ಆಗ್ತಿಲ್ಲ. ಜೈದೇವನ ನಾನು ಬದಲಿಸ್ತೀನಿ ಅವಳನ್ನು ಬಿಟ್ಟು ಬರುವಂತೆ ಹೇಳುತ್ತೇನೆ ಎಂದು ಶಕುಂತಲಾ ಹೇಳುತ್ತಾಳೆ. ಇದಕ್ಕೆ ಮಲ್ಲಿ ಈ ಕೆಲಸ ಮಾತ್ರ ಮಾಡಬೇಡಿ. ನಾನು ಯಾವುದೇ ಕಾರಣಕ್ಕೂ ಜೈದೇವನ ಕ್ಷಮಿಸುವುದಿಲ್ಲ ಎನ್ನುತ್ತಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+