Amruthadhare Serial: ಮನದರಸಿ ಭೂಮಿಯನ್ನರಸಿ ಹೊರಟಾಯ್ತು ಗೌತಮ್ ದಿವಾನ್: ಆದರೆ ಆಗಿದ್ದೇ ಬೇರೆ?

''ಅಮೃತ ಧಾರೆ'' ಧಾರಾವಾಹಿಯಲ್ಲಿ ಎರಡು ಮಕ್ಕಳ ಸತ್ಯ ಗೊತ್ತಾಗಿದ್ದಕ್ಕೆ ಹಾಗೂ ಇರುವ ಒಬ್ಬ ಮಗನನ್ನ ಕಾಪಾಡಿಕೊಳ್ಳಲು ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ. ಇತ್ತ ಆಸ್ತಿಗಾಗಿ ಶಕುಂತಲಾ ಹಾಗೂ ಜೈದೇವ್‌ ಮಾಡಿದ ಸಂಚು ಗೌತಮ್‌ ಗೆ ಗೊತ್ತಾಗಿದ್ದು, ಸರ್ವಸ್ವವನ್ನೂ ತ್ಯಾಗ ಮಾಡಿ..ಮನದರಸಿ ಭೂಮಿಯನ್ನರಸಿ ಗೌತಮ್ ದಿವಾನ್ ಮನೆ ಬಿಟ್ಟು ಹೊಸ ಜೀವನ ಆರಂಭಿಸಿದ್ದಾನೆ. ತನ್ನ ಮಲತಾಯಿ ಶಕುಂತಲಾಳ ಎಲ್ಲ ಷಡ್ಯಂತ್ರ ತಿಳಿದ ನಂತರ ಗೌತಮ್ ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು.. ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಎಂದು ಮನೆಯಿಂದ ಹೊರನಡೆಯುತ್ತಾನೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ನಂತರದ ಕಥೆ ಶುರುವಾಗಿದೆ. ಕೋಟ್ಯಾಧಿಪತಿ ಗೌತಮ್‌ ದಿವಾನ್‌ ಹೆಂಡತಿ ಮಗುಗಾಗಿ ಎಲ್ಲಾ ಆಸ್ತಿ, ಮನೆಯನ್ನ ಬಿಟ್ಟು ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಇದೀಗ ಅಮೃತಧಾರೆ ಧಾರಾವಾಹಿಯ ಒಂದೊಂದು ಎಪಿಸೋಡ್ ರೋಚಕತೆ ಸೃಷ್ಟಿಸುತ್ತಿದೆ. ಕ್ಯಾಬ್ ಡ್ರೈವರ್ ಆಗಿ ಸಾಮಾನ್ಯ ಜೀವನ ನಡೆಸುತ್ತಿರುವ ಗೌತಮ್ ಹಾಗೂ ಭೂಮಿಕಾ ಭೇಟಿ ಯಾವಾಗ ಆಗುತ್ತೊ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಕ್ಯಾಬ್‌ ಡ್ರೈವರ್‌ ಆಗಿ ಕುಶಲನಗರದ ಕಡೆ ಗೌತಮ್‌ ಪ್ರಯಾಣ ಬೆಳೆಸಿದ್ದು, ಭೂಮಿಕಾ ನಿರೀಕ್ಷೆಯಲ್ಲಿರುವ ಗೌತಮ್‌ ಗೆ ಮಗನ ಅನಿರೀಕ್ಷಿತ ಭೇಟಿ ಆಗಿದೆ.

Amruthadhare Kannada Serial September 13th Episode

ಗೌತಮ್ ತನ್ನ ಹೆಂಡತಿ ಭೂಮಿಕಾಳನ್ನು ಹುಡುಕುತ್ತ ಅಲೆದೂ ಅಲೆದೂ ಸುಸ್ತಾಗಿದ್ದಾನೆ. ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿಲ್ಲ. ಅದರ ನಡುವೆಯೇ ಡ್ರೈವರ್​ ಕೆಲಸದ ನಿಮಿತ್ತ ಗೌತಮ್​ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಬೇಕಾಗಿ ಬಂದಿದೆ. ವಿಶೇಷ ಎಂದರೆ ಕುಶಾಲನಗರದಲ್ಲಿಯೇ ಭೂಮಿಕಾ, ಮಲ್ಲಿ ಹಾಗೂ ಮಗನ ಜೊತೆ ವಾಸ ಮಾಡುತ್ತ ಇರುತ್ತಾಳೆ. ಐದು ವರ್ಷಗಳ ಕಾಲ ಭೂಮಿಕಾಗಾಗಿ ಹುಡುಕಾಟ ನಡೆಸಿದ್ದ ಗೌತಮ್‌ ದಿವಾನ್‌ ಭೂಮಿಕಾಗು ಮುನ್ನ ಗೌತಮ್ ಹಾಗೂ ಮಗನ ಅನಿರೀಕ್ಷಿತ ಭೇಟಿ ಆಗಿದ್ದಾನೆ.

ಕುಶಾಲನಗರದಲ್ಲಿ ಗೌತಮ್ ಕಾರಿನಲ್ಲಿ ಹೋಗುತ್ತಿರುವಾಗ ಅವನ ಕಾರಿಗೆ ತನ್ನ ಮಗ ಆಕಾಶ್​ ಅಡ್ಡ ಬಂದಿದ್ದಾನೆ. ಆದರೆ, ಇಲ್ಲಿ ಗೌತಮ್​ಗೆ ಆತನೇ ತನ್ನ ಮಗ ಎಂದು ಹಾಗೂ ಆಕಾಶ್​ಗೆ ಇವರೇ ನನ್ನ ಅಪ್ಪ ಎಂದು ತಿಳಿದಿಲ್ಲ. ಚಿಕ್ಕ ಬಾಲಕ ಕಾರಿಗೆ ಅಡ್ಡ ಬಂದಿದ್ದನ್ನು ಕಂಡು ಕೋಪಗೊಂಡ ಗೌತಮ್ ಕಾರಿನಿಂದ ಇಳಿದು ಗದರಿದಾಗ, ಆಕಾಶ್​ ನಾನೇನೋ ಚಿಕ್ಕ ಬಾಲಕ, ನೀವು ನೋಡಿ ಗಾಡಿ ಓಡಿಸಬಾರದೆ ಎಂದು ಪ್ರಶ್ನಿಸಿದ್ದಾನೆ. ಭೂಮಿಕಾ ಹುಡುಕಿ ಹೊರಟ ಗೌತಮ್‌ ಗೆ ಅನಿರೀಕ್ಷಿತವಾಗಿ ಅಪ್ಪ-ಮಗನ ಮಿಲನ ಆಗಿದೆ.

ಅಪ್ಪ ಮಗನ ನಡುವೆ ಮಾತುಕಥೆ ನಡೆಯುವಾಗಲೇ ಇದ್ದಕ್ಕಿದ್ದಂತೆ ಆ ಬಾಲಕ ಗೌತಮ್ ಕಾರಿನಲ್ಲಿ ಬಂದು ಕೂರುತ್ತಾರೆ.​ ತನ್ನ ಮಗ ಎನ್ನುವುದನ್ನು ಅರಿಯದೇ ಆತನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ಹೋಗುವಾಗ ಗೌತಮ್ ಹೆಸರು ಕೇಳಿದ್ದಾನೆ. ಆಗ ಆಕಾಶ್​, ತನ್ನ ನಿಜವಾದ ಹೆಸರನ್ನು ಹೇಳದೇ ಮನೆಯಲ್ಲಿ ನನ್ನನ್ನು‌ ಅಮ್ಮ ಅಪ್ಪು ಎಂದು ಕರೆಯುತ್ತಾರೆ ಎಂದಿದ್ದಾನೆ. ಅಸಲಿ ಹೆಸರು ಹೇಳಿದ್ದರೆ ಗೌತಮ್​ಗೆ ಅನುಮಾನ ಬರಬಹುದಿತ್ತು. ಆದರೆ, ಇಲ್ಲಿ ಆರೀತಿ ಆಗಿಲ್ಲ. ಇಲ್ಲೂ ಸಹ ತಿರುವು ಸಿಕ್ಕಿದೆ. ಭೂಮಿಕಾ ಹುಡುಕಿ ಹೊರಟ ಗೌಡಮ್‌ ಗೆ ಮಗನ ಭೇಟಿಯಾಗಿದ್ದು, ಭೂಮಿಕಾ ಯಾವಾಗ ಗೌತಮ್‌ ಗೆ ಎದುರಾಗುತ್ತಾಳೆ ಎಂದು ಪ್ರೇಕ್ಷಕರು ಕಾದುಕುಳಿತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+