Amruthadhaare: ಅಮೃತಧಾರೆಯಲ್ಲಿ ಬಿಗ್ ಟ್ವಿಸ್ಟ್: ಭೂಮಿಕಾ - ಗೌತಮ್ ದಾಂಪತ್ಯದಲ್ಲಿ ಬಿರುಕು!
Amruthadhaare: ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾಗಿರುವ ಅಮೃತಧಾರೆ ರೋಚಕ ತಿರುವುಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನೇನು ಈ ಸೀರಿಯಲ್‌ನಲ್ಲಿ ವಿಲನ್‌ಗಳ ಬಣ್ಣ ಬಯಲಾಗಲಿದೆ ಅವರಿಗೆ ಶಿಕ್ಷೆ ಆಗಲಿದೆ ಎನ್ನುವ ಸಂದರ್ಭದಲ್ಲಿಯೇ ಕಥೆ ರೋಚಕ ತಿರುವು ಪಡೆದುಕೊಂಡಿದೆ. ಕಳೆದ ಒಂದೂವರೆ ತಿಂಗಳಿನಿಂದಲೂ ಅಮೃತಧಾರೆ ಸಖತ್ ಟ್ವಿಸ್ಟ್‌ಗೆ ಕಾರಣವಾಗಿದೆ. ಜಯದೇವ್ ಹಾಗೂ ಶಕುಂತಲಾ ಅವರ ಕಳ್ಳಾಟಗಳು ಮತ್ತು ಅವರು ಮಾಡುವ ಕುತಂತ್ರಗಳು ಭೂಮಿಕ ಮುಂದೆ ಬಯಲಾಗಿದೆ. ಇದರ ಬೆನ್ನಲ್ಲೇ ಗೌತಮ್ ದೀವಾನ್ ಹಾಗೂ ಭೂಮಿಕಾ ದಾಂಪತ್ಯದಲ್ಲಿ ಬಿರುಕು ಮೂಡುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡಲಾಗಿದೆ.
Zee Kannadaದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಇದೀಗ ಶಾಂಕುತಲಾ ಮೊದಲೇ ಇದಕ್ಕೊಂದು ಪ್ಲ್ಯಾನ್ ಮಾಡಿಕೊಂಡಿದ್ದು. ಈ ಜಗಳದಲ್ಲಿ ಮಜಾ ತೆಗೆದುಕೊಳ್ಳಬಹುದು ಅಂತಾ ಪ್ರಮೋದಲ್ಲಿ ತೋರಿಸಲಾಗಿದೆ. ಗೌತಮ್ ದೀವಾನ್ ಮತ್ತು ಭೂಮಿಕಾ ಅವರ ಸಂಸಾರದಲ್ಲಿ ಬಿರುಕು ಮೂಡುತ್ತಿರುವಂತೆ ತೋರಿಸಲಾಗಿದ್ದು. ಇದು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಭೂಮಿಕಾ - ಜಯದೇವ್ ಹಾಗೂ ಶಕುಂತಲಾ ಬಣ್ಣ ಬಯಲು ಮಾಡುವುದಕ್ಕೆ ಮುಂದಾಗಿದ್ದರೆ, ಮತ್ತೊಂದು ಕಡೆ ಜಯದೇವ್ ಹಾಗೂ ಶಕುಂತಲಾ ಬೇರೆ ಪ್ಲ್ಯಾನ್ ಮಾಡಿಕೊಂಡಿದ್ದರು. ಭೂಮಿಕಾ ಹಾಗೂ ಗೌತಮ್ ಸಂಸಾರದಲ್ಲಿ ಹುಳಿ ಹಿಂಡಬೇಕು ಎನ್ನುವುದು ವಿಲನ್‌ಗಳ ಲೆಕ್ಕಾಚಾರವಾಗಿತ್ತು.

ಇಬ್ಬರನ್ನೂ ದೂರ ಮಾಡಬೇಕು ಎನ್ನುವ ಶಕುಂತಾಲ ಪ್ಲ್ಯಾನ್ ಒಂದು ಹಂತಕ್ಕೆ ವರ್ಕ್ ಆಗುತ್ತಿರುವಂತೆ ಇದೆ. ಗೌತಮ್ ದೀವಾನ್ ಇಂಪಾರ್ಟೆಂಟ್ ಮೀಟಿಂಗ್‌ಗಾಗಿ ವಿದೇಶಕ್ಕೆ ಹೋಗುವಾಗ ಪಾಸ್‌ಪೋರ್ಟ್ ಮಿಸ್ ಆಗಿರುವಂತೆ ಅದನ್ನೂ ಭೂಮಿಕಾ ಮಾಡಿರುವಂತೆ ಕಥೆ ಕಟ್ಟುವ ಕೆಲಸ ಆಗಿದೆ. ಬಿಸ್ನೆಸ್ ಮೀಟಿಂಗ್ ಕಾರಣಕ್ಕೆ ಗೌತಮ್ ವಿದೇಶಕ್ಕೆ ಹೋಗಬೇಕಿತ್ತು. ಆದರೆ, ಇದಕ್ಕೆ ಭೂಮಿಕಾ ಬೇಡ ಹೋಗಬೇಡಿ ಎಂದು ಒತ್ತಾಯ ಮಾಡಿದ್ದರು. ಪ್ಲೀಸ್ ಹೋಗಬೇಡಿ ಎಂದಿದ್ದ ಭೂಮಿಕಾ, ಗೌತಮ್ ಬಳಿ ರಿಕ್ವೆಸ್ಟ್ ಮಾಡಿದ್ದರು. ಇದು ಸಾಧ್ಯವಿಲ್ಲ ಎಂದು ಗೌತಮ್ ಹೇಳಿದಾಗ, ಭೂಮಿಕಾ, ನಿಮ್ಮ ಪಾಸ್‌ಪೋರ್ಟ್ ಅನ್ನ ಕದ್ದಿಟ್ಟರೆ ಹೇಗೆ ಹೋಗ್ತೀರಾ ಅಂತಾ ಹೇಳಿ ನಕ್ಕಿದ್ದರು.
ಇದಾಗಿ ಏರ್‌ಪೋರ್ಟ್‌ಗೆ ಹೋಗುವಾಗ ಕಾರ್‌ನಲ್ಲಿ ಗೌತಮ್ ಪಾಸ್ ಪೋರ್ಟ್ ಚೆಕ್ ಮಾಡಿದ್ದು ಬ್ಯಾಗ್‌ನಲ್ಲಿ ಪಾಸ್‌ಪೋರ್ಟ್ ಇಲ್ಲದೆ ಇರುವುದು ಗೊತ್ತಾಗಿದೆ. ಹೋಗುತ್ತಿರುವ ದಾರಿಯಿಂದಲೇ ಕೋಪದಿಂದಲೇ ಮನೆಗೆ ವಾಪಸ್ ಬಂದಿರುವ ಗೌತಮ್, ಭೂಮಿಕಾ ಬಳಿ ಪಾಸ್‌ಪೋರ್ಟ್ ಎಲ್ಲಿ ಅಂತಾ ಕೇಳಿದ್ದಾರೆ. ಆದರೆ, ಪಾಸ್‌ಪೋರ್ಟ್ ಇಲ್ಲ ಎಂದು ಎಂದು ಭೂಮಿಕಾ ನೇರವಾಗಿ ಹೇಳುತ್ತಾಳೆ. ನಾನು ಅದನ್ನು ಯಾಕೆ ತೆಗೆದುಕೊಂಡು ಇಡಲಿ ನಿಮ್ಮ ಬ್ಯಾಗ್ನಲ್ಲೇ ಇಟ್ಟಿದ್ದೇನೆ ಎಂದು ಭೂಮಿಕಾ ಹೇಳಿರುವುದು ಗೌತಮ್ ಕೋಪಕ್ಕೆ ಕಾರಣವಾಗಿದೆ.
ನಿಮಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಅದಕ್ಕೇ ಈ ರೀತಿ ಮಾಡುತ್ತಿದ್ದೀರಾ ಎಂದು ಗೌತಮ್ ಕೇಳಿದ್ದು, ನಾನು ಅದನ್ನು ಎತ್ತಿಟ್ಟಿಲ್ಲ. ಇದೇ ಸತ್ಯ ನೀವು ನಂಬೋದಾದರೆ ನಂಬಿ, ಬಿಡೋದಾದರೆ ಬಿಡಿ ಅಂತಾ ಭೂಮಿಕಾ ಸಹ ಕೋಪದಲ್ಲೇ ಹೊರನಡೆದಿರುವುದು ಇದೆ. ಇದನ್ನು ನೋಡುತ್ತಿರುವ ಶಕುಂತಲಾ, ಜೋರಾಗಿಯೇ ಬೆಂಕಿ ಬಿದ್ದಿದ್ದೆ.. ಈ ಬೆಂಕಿಯಲ್ಲಿ ಆಯಾಗಿ ಚಳಿ ಕಾಯಿಸೋಣ ಅಂತಾ ಹೇಳಿರುವುದು ಇದೆ.












Click it and Unblock the Notifications