Amruthadhaare Serial: ಕೊನೆಗೂ ಒಂದಾದ ಭೂಮಿಕಾ-ದೀಪಿಕಾ; ಜೈದೇವ್-ಶಕುಂತಲಾ ಕುತಂತ್ರಕ್ಕೆ ಬ್ರೇಕ್!
Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಹಾಗೂ ದೀಪಿಕಾ ಒಂದಾಗಿದ್ದು, ಕೊನೆಗೂ ಕೇಡಿ ಜೈದೇವ್ ಹಾಗೂ ಶಕುಂತಲಾ ದೇವಿ ಕುತಂತ್ರಗಳಿಗೆ ಬ್ರೇಕ್ ಬಿದ್ದಂತೆ ಆಗಿದೆ. ಕೇಡಿ ಜೈದೇವ್ ಹಾಗೂ ಶಕುಂತಲಾ ದೇವಿ ಇಬ್ಬರೂ ಪ್ಲ್ಯಾನ್ ಮಾಡಿ ಭೂಮಿಕಾಳಂತೆಯೇ ಇರುವ ದೀಪಿಕಾಳನ್ನು ಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ದೀಪಿಕಾ ಸಹ ಕೇಡಿಗಳ ಕುತಂತ್ರವನ್ನು ತಿಳಿಯದೆ ಅವರಿಗೆ ಸಹಾಯ ಮಾಡಿದ್ದಳು.
ಕೇಡಿ ಜೈದೇವ್ ಮತ್ತೆ ಮನೆ ಸೇರುವಂತೆಯೂ ಮಾಡಿದ್ದಳು ಇದೀಗ ಕೊನೆಗೂ ಕೇಡಿಗಳ ತಂತ್ರಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಕೇಡಿ ಜೈದೇವ್ ಮುಂದೇನು ಮಾಡಲಿದ್ದಾನೆ ಎನ್ನುವ ಕುತೂಹಲ ಇದೀಗ ಹೆಚ್ಚಾಗಿದೆ. ಈ ನಡುವೆ ಭೂಮಿಕಾ ಹಾಗೂ ದೀಪಿಕಾ ನಡುವಿನ ಸಂಭಾಷಣೆಯು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರೊಂದಿಗೆ ಅಮೃತಧಾರೆ ಸೀರಿಯಲ್ ಯಾವಾಗ ಮುಕ್ತಾಯವಾಗಲಿದೆ ಎನ್ನುವ ಪ್ರಶ್ನೆಯನ್ನೂ ವೀಕ್ಷಕರು ಕೇಳುತ್ತಿದ್ದಾರೆ.

ಭೂಮಿಕಾ ಮತ್ತು ದೀಪಿಕಾ ಇಬ್ಬರೂ ಅವಳಿ - ಜವಳಿ ಮಕ್ಕಳು ಅಂತ ತಿಳಿಯುವುದಕ್ಕೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಭೂಮಿಕಾ ಹಾಗೂ ದೀಪಿಕಾ ನಡುವಿನ ಸಂಭಾಷಣೆಯು ಚಂದವಾಗಿ ಮೂಡಿ ಬಂದಿದೆ. ಆ ಆಂಟಿ ನನ್ನ ಬಳಿ ನಿಮ್ಮ ತರ ಸೈನ್ ಮಾಡಿ ಎಂದು ಒಂದು ಪತ್ರವನ್ನು ಕೊಟ್ಟಿದ್ದರು. ಅದನ್ನು ಹುಡುಕುವಾಗ ನೀವು ಬರೆದ ಡೈರಿ ಸಿಕ್ತು. ಅದನ್ನು ಓದಿಕೊಂಡು ಕೂತಿದ್ದೆ ನಾನು ಡೈರಿ ಓದುವುದಕ್ಕೆ ಪ್ರಾರಂಭಿಸಿದಾಗ ಎಲ್ಲಿ ಕೂತಿದ್ದೆನೋ ಪೂರ್ತಿ ಮುಗಿಯುವ ವರೆಗೂ ನಾನು ಅಲ್ಲೇ ಕೂತಿದ್ದೆ ಅಂತ ಅಂತ ದೀಪಿಕಾ ಹೇಳಿದ್ದಾಳೆ.
ನೀವು ಬರೆದ ಡೈರಿ ತುಂಬಾ ಚೆನ್ನಾಗಿತ್ತು. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ ಅಂತ ದೀಪಿಕಾ, ಭೂಮಿಕಾಳಿಗೆ ಹೇಳಿದ್ದಾಳೆ. ನನ್ನ ಡೈರಿ ಓದಿದ್ರಾ ಅದರಲ್ಲಿ ನಾನು ಏನೇನೋ ಬರೆದಿದ್ದೆ, ಅದನ್ನ ಯಾಕೆ ಓದಿದ್ರಿ ಅಂತ ಭೂಮಿಕಾ ಕೇಳಿದ್ದಾಳೆ. ಇದಕ್ಕೆ ದೀಪಿಕಾ ಪರವಾಗಿಲ್ಲ ಬಿಡಿ ಅದನ್ನು ಓದಿದ್ದರಿಂದ ನಿಮ್ಮ ಬಗ್ಗೆ ನನಗೆ ಈಗ ಸಂಪೂರ್ಣವಾಗಿ ತಿಳಿಯಿತು.
ನೀವು ಆವೊತ್ತು ಹೇಳಿದ್ರಲ್ಲ ನಾನು ಯಾವುದೋ ಜನ್ಮದಲ್ಲಿ ನಾವಿಬ್ಬರು ಅಕ್ಕ - ತಂಗಿ ಆಗಿದ್ವಿ ಅಂತ ಹಂಗೆಯಾ ಅಕ್ಕನ ಡೈರಿಯನ್ನ ತಂಗಿ ಓದಿದ್ರೆ ತಪ್ಪೇನು ಇಲ್ಲ, ನೀವು ಗಾಬರಿ ಮಾಡಿ ನಾನು ಯಾರಿಗೂ ಹೇಳಲ್ಲ ಅಂತಲೂ ದೀಪಿಕಾ - ಭೂಮಿಕಾಗೆ ನಗುತ್ತಲ್ಲೇ ಹೇಳಿದ್ದಾಳೆ. ಆದ್ರೂ ನಾನು ಓದಿದ್ದು ಒಳ್ಳೆಯದೇ ಆಯ್ತು ಬುಡಿ ನಿಮ್ಮ ಬಗ್ಗೆ ಎಲ್ಲ ಗೊತ್ತಾಯ್ತು ಅಂತ ಹೇಳಿದ್ದಾಳೆ.
ಡೈರಿ ಓದಿದ ಮೇಲೆ ತುಂಬಾ ಖುಷಿ ಆಯ್ತಲ್ಲ ನಿಮ್ಮನ್ನು ನೋಡಬೇಕು ಅನಿಸ್ತು ಅದಕ್ಕೆ ಕೂಡಲೇ ಫೋನ್ ಮಾಡ್ದೆ ಅಂತ ದೀಪಿಕಾ ಹೇಳಿದ್ದಾಳೆ. ಪರವಾಗಿಲ್ಲ ಬಿಡಿ ನೀವು ನನ್ನ ಅಕ್ಕ ಅಂತ ಒಪ್ಪಿಕೊಂಡ್ರಲ್ಲ ಅದಕ್ಕೆ ಥ್ಯಾಂಕ್ಸ್ ಅಂತ ಭೂಮಿಕಾ ಹೇಳಿದ್ದಾಳೆ. ಆ ಇದು ಮಾತಂದ್ರೆ ಏನೇ ಹೇಳಿ ನಿಮ್ಮ ಡೈರಿ ಓದಿ ಎಷ್ಟು ಖುಷಿ ಆಯ್ತೋ ನಿಮ್ಮನ್ನು ನೋಡಿನೂ ಅಷ್ಟೇ ಖುಷಿ ಆಯ್ತು. ಅಷ್ಟೇ ಹೊಟ್ಟೆ ಕಿಚ್ಚು ಆಯ್ತು ಅಂತ ಹೇಳಿದ್ದಾಳೆ.
https://www.facebook.com/share/v/19z1vca72W/


Click it and Unblock the Notifications
