Kantara Chapter 1: "ಕಾಂತಾರ" ಸಿನಿಮಾ ನೋಡಿ "ಪುಷ್ಪ" ನಟ ಅಲ್ಲು ಅರ್ಜುನ್‌ ಏನಂದ್ರು?

ಕನ್ನಡ ಸಿನಿಮಾ ಅಂದ್ರೆ ಅಕ್ಕಪಕ್ಕದ ಚಿತ್ರರಂಗದವರು ಕೀಳಾಗಿ ನೋಡುವ ಕಾಲವೊಂದಿತ್ತು. ಬಜೆಟ್‌ ವಿಚಾರವಾಗಿಯೂ ಕೆಲವರು ಕನ್ನಡ ಸಿನಿಮಾಗಳನ್ನ ಅಣಕಿಸುತ್ತಿದ್ದರು. ಆದರೆ ಕಾಲ ಈಗ ಬದಲಾಗಿದೆ. ಕೆಜಿಎಫ್‌, ಕಾಂತಾರ ಸಿನಿಮಾಗಳು ಬೇರೆ ಚಿತ್ರರಂಗಗಳಿಗೆ ಮುಖಕ್ಕೆ ಹೊಡೆಯುವಂತೆ ದಾಖಲೆಗಳನ್ನು ನಿರ್ಮಿಸುವ ಮೂಲಕ ಕನ್ನಡ ಸಿನಿಮಾರಂಗವನ್ನ ಉತ್ತುಂಗಕೇರಿಸಿವೆ. ಈಗ ಬೇರೆ ಸಿನಿಮಾದ ನಟರೂ ಕನ್ನಡ ಸಿನಿಮಾ ನೋಡಿ ಹುಬ್ಬೇರಿಸುತ್ತಿದ್ದಾರೆ. ಇತ್ತೀಚೆಗೆ ಬಹುಭಾಷೆಗಳಲ್ಲಿ ಮಿಂಚಿದ್ದ ತೆಲುಗಿನ ಪುಷ್ಪ-2 ಸಿನಿಮಾದ ನಟ ಅಲ್ಲು ಅರ್ಜುನ್‌ ಕೂಡ ಕನ್ನಡ ಸಿನಿಮಾ ನೋಡಿ ಶಾಕ್‌ನಲ್ಲಿದ್ದಾರೆ.

ಹೌದು, ಪುಷ್ಪ ಸಿನಿಮಾ ಖ್ಯಾತಿಯ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಕನ್ನಡದ ಸಿನಿಮಾಗೆ ಫಿದಾ ಆಗಿದ್ದಾರೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌-1 ಸಿನಿಮಾವನ್ನು ಅಲ್ಲು ಅರ್ಜುನ್‌ ವೀಕ್ಷಿಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ. ನಿನ್ನೆ ರಾತ್ರಿ ಕಾಂತಾರ ಸಿನಿಮಾ ವೀಕ್ಷಿಸಿದೆ. ವಾವ್‌, ಎಂತಹ ಅದ್ಭುತ ಸಿನಿಮಾ. ನಾನು ಅದನ್ನು ನೋಡುತ್ತಾ ಮೂಕವಿಸ್ಮಿತನಾಗಿದ್ದೆ ಎಂದಿದ್ದಾರೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ ಒನ್‌ ಮ್ಯಾನ್‌ ಶೋ ಆಗಿರುವ ರಿಷಬ್‌ ಶೆಟ್ಟಿ ಅವರಿಗೆ ಅಭಿನಂದನೆಗಳು. ಅವರು ಪ್ರತಿಯೊಂದು ಕಲೆಯಲ್ಲೂ ಶ್ರೇಷ್ಠರು ಎಂದಿದ್ದಾರೆ.

Allu Arjun Praises Rishab Shetty Kantara Chapter 1 Lost For Words

ವಿವರಿಸಲು ಪದಗಳು ಸಾಲಲ್ಲ

ನಟಿ ರುಕ್ಮಿಣಿ ವಸಂತ್‌, ಜಯರಾಮ್ ಅವರು, ಗುಲ್ಶನ್‌ ದೇವಯ್ಯ ಅವರು ಅಭಿನಯ ಸೂಪರ್‌. ತಂಡದ ತಂತ್ರಜ್ಞರ ಅದ್ಭುತ ಕೆಲಸ, ವಿಶೇಷವಾಗಿ ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಅರವಿಂದ್‌ ಕಶ್ಯಪ್‌ ಅವರ ಛಾಯಾಗ್ರಹಣ, ಕಲಾ ನಿರ್ದೇಶನ ಹಾಗೂ ಸಾಹಸ ಎಲ್ಲವೂ ವರ್ಣಿಸಲು ಸಾಧ್ಯವಿಲ್ಲ ಎಂದು ಹೊಗಳಿದ್ದಾರೆ. ನಿರ್ಮಾಪಕ ವಿಜಯ್‌ ಕಿರಗಂದೂರು ಸೇರಿ ಇಡೀ ಹೊಂಬಾಳೆ ಫಿಲ್ಮ್ಸ್‌ ತಂಡಕ್ಕೆ ಅಭಿನಂದನೆಗಳು. ಪ್ರಾಮಾಣಿಕವಾಗಿ ಹೇಳುವುದಾದರೆ ಈ ಸಿನಿಮಾ ಅನುಭವವನ್ನು ವಿವರಿಸಲು ಪದಗಳು ಸಾಲಲ್ಲ ಎಂದು ಅಲ್ಲು ಅರ್ಜುನ್‌ ಟ್ವೀಟ್‌ ಮಾಡಿದ್ದಾರೆ.

ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು ಅಲ್ಲು ಅರ್ಜುನ್‌ ಅವರೇ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಿಜಕ್ಕೂ ಕೃತಜ್ಞತೆಗಳು. ನಿಮಗೆ ಯಾವಾಗಲೂ ಹೆಚ್ಚಿನ ಶಕ್ತಿ ಮತ್ತು ಯಶಸ್ಸು ಸಿಗಲಿ ಎಂದು ರಿಷಬ್‌ ಶೆಟ್ಟಿ ಕೂಡ ರಿಪ್ಲೈ ಮಾಡಿದ್ದಾರೆ.

ತೆಲುಗಿನಲ್ಲೇ 100 ಕೋಟಿ ಕಲೆಕ್ಷನ್‌

ರಿಷಬ್‌ ಶೆಟ್ಟಿ ಅವರ ಕಾಂತಾರ:1 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವು ಇತ್ತೀಚೆಗೆ ತೆಲುಗು ರಾಜ್ಯಗಳಲ್ಲೇ 100 ಕೋಟಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಕೆಜಿಎಫ್-2 ನಂತರ ಈ ಸಾಧನೆ ಮಾಡಿದ ಎರಡನೇ ಡಬ್ಬಿಂಗ್ ಚಿತ್ರವಾಗಿದೆ ಕಾಂತಾರ. ಈ ಸಿನಿಮಾದ ಸದ್ಯದ ಕಲೆಕ್ಷನ್‌ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬರೋಬ್ಬರಿ 110 ಕೋಟಿಗೂ ಮೀರಿದೆ ಎಂದು ವರದಿಯಾಗಿದೆ.

ಒಟ್ಟಾರೆ ಈ ಸಿನಿಮಾ 800 ಕೋಟಿ ರೂ.ಗಳನ್ನು ದಾಟುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ. ಈ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಜಾಗತಿಕವಾಗಿ 818 ಕೋಟಿ ರೂ.ಗಳನ್ನು ಗಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+