Allu Arjun: ರಶ್ಮಿಕಾ ಮಂದಣ್ಣ ‘ಶ್ರೀವಲ್ಲಿ’ ಗಂಡನಿಗೆ ರಾತ್ರಿ ಪೂರ್ತಿ ಜೈಲಿನಲ್ಲಿ ನರಳಾಟ!
ರಶ್ಮಿಕಾ ಮಂದಣ್ಣ ಅವರ ಜೋಡಿಯಾಗಿ, ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಗಂಡನಾಗಿ ನಟಿಸಿದ್ದ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಕಂಟಕ ಎದುರಾಗಿದೆ. ಅಭಿಮಾನಿ ಸಾವು ಇದೀಗ ನಟ ಅಲ್ಲು ಅರ್ಜುನ್ ಅವರ ಸಿನಿಮಾ ಜೀವನಕ್ಕೆ ದೊಡ್ಡ ಕಂಟಕ ತಂದಿದೆ. ಅದರಲ್ಲೂ 'ಶ್ರೀವಲ್ಲಿ' ಗಂಡನಿಗೆ ರಾತ್ರಿ ಪೂರ್ತಿ ಜೈಲಿನಲ್ಲಿ ನರಳಾಟ ಎದುರಾಗಿ ವಿಲವಿಲ ಒದ್ದಾಡಿ ಬಿಟ್ಟರು. ಇಂತಹ ಸಮದಯಲ್ಲೇ ಮತ್ತೊಂದು ಪ್ರಮುಖ ಘಟನೆ ಅಲ್ಲು ಅರ್ಜುನ್ ಜೀವನದಲ್ಲಿ ನಡೆದು ಹೋಗಿದೆ....
ಅಲ್ಲು ಅರ್ಜುನ್ ದೊಡ್ಡ ಸಿನಿಮಾ ಸ್ಟಾರ್, ಹಾಗೇ ಅಲ್ಲು ಅರ್ಜುನ್ ಅವರ ಕುಟುಂಬದ ಬಹುತೇಕ ಸದಸ್ಯರು ಕೂಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗಿದ್ದಾಗ ಅಲ್ಲು ಅರ್ಜುನ್ ಅವರು ತಾವು ಮಾಡಿಕೊಂಡ ಎಡವಟ್ಟಿನ ಪರಿಣಾಮ ಇದೀಗ ಜೈಲಿಗೂ ಹೋಗುವ ಪರಿಸ್ಥಿತಿ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಅಭಿಮಾನಿ ಸಾವಿಗೆ ಅರ್ಜುನ್ ಅವರನ್ನೇ ಹೊಣೆ ಮಾಡುತ್ತಿರುವ ಆರೋಪ ಬಂದಿದೆ. ಹೀಗಿದ್ದಾಗಲೇ...

ದಿಢೀರ್ ಅರೆಸ್ಟ್ ಆಗಿದ್ದ ಅಲ್ಲು!
ಅಲ್ಲು ಅರ್ಜುನ್ ಅಭಿನಯದ 'ಪುಷ್ಪ-2' ಸಿನಿಮಾ ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಹೀಗೆ 'ಪುಷ್ಪ-2' ರಿಲಿಸ್ ಆಗ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಜನ ಥಿಯೇಟರ್‌ಗೂ ನುಗ್ಗಿ ಬಿಟ್ಟರು. ಈ ರೀತಿ ಸಿನಿಮಾ ಪ್ರದರ್ಶನ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಜೀವ ಬಲಿಯಾಗಿತ್ತು. ಇದೇ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿ ಅಲ್ಲು ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೂಡ ಮಾಡಲಾಗಿತ್ತು. ಹೀಗಿದ್ದಾಗಲೇ, ನಿನ್ನೆ ಮಧ್ಯಾಹ್ನ ಹೊತ್ತಿಗೆ ಅಲ್ಲು ಅರ್ಜುನ್ ಅವರನ್ನ ಅರೆಸ್ಟ್ ಮಾಡಲಾಗಿತ್ತು.
ಅಲ್ಲು ಅರೆಸ್ಟ್ & ರಿಲೀಸ್ ಕಹಾನಿ!
ಹೀಗೆ ಅಲ್ಲು ಅರ್ಜುನ್ ಅರೆಸ್ಟ್ ಆದ ನಂತರ ಆಂಧ್ರ & ತೆಲಂಗಾಣ ರಾಜ್ಯದಲ್ಲಿ ಸೂಕ್ಷ್ಮವಾದ ವಾತಾವರಣ ನಿರ್ಮಾಣ ಆಗಿತ್ತು. ಮತ್ತೊಂದು ಕಡೆ ಈ ಕೇಸ್ ಬಗ್ಗೆ ಮೊದಲೇ ಅಲರ್ಟ್ ಆಗಿದ್ದ ಅಲ್ಲು ಅರ್ಜುನ್, ತೆಲಂಗಾಣ ಹೈಕೋರ್ಟ್‌ಗೆ ಈ ಕುರಿತು ಮಧ್ಯಂತರ ಜಾಮೀನು ಅರ್ಜಿಯ ಸಲ್ಲಿಸಿದ್ದರು.
ಹೀಗಿದ್ದಾಗಲೇ ಅಲ್ಲು ಅರ್ಜುನ್ ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ತೆಲಂಗಾಣದ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಮೂಲಕ ನಿನ್ನೆಯೇ ಅಲ್ಲು ಅರ್ಜುನ್ ರಿಲೀಸ್ ಆಗಲಿದ್ದಾರೆ ಎನ್ನಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಪೂರ್ತಿ ಅಲ್ಲು ಅರ್ಜುನ್ ಜೈಲಿನಲ್ಲೇ ಪರದಾಡಿ ಇದೀಗ ರಿಲೀಸ್ ಆಗಿದ್ದಾರೆ. ಈ ಮೂಲಕ ಅಲ್ಲು ಅರ್ಜುನ್ ಅಭಿಮಾನಿಗಳು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications