Aishwarya Rai Divorce: ಐಶ್ವರ್ಯ ರೈ ಮುಂದಿದ್ದ ಬಚ್ಚನ್ ಸರ್ ನೇಮ್ ಮಂಗಮಾಯ: ಡಿವೋರ್ಸ್ ನಿಜವೇ?
ಬಾಲಿವುಡ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಕಳೆದ ಕೆಲ ತಿಂಗಳಿಂದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ವಿಚಾರ ಸುದ್ದಿಯಲ್ಲಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವು ಘಟನೆಗಳು ನಡೆದರೂ ಸಹ ಅಭಿಷೇಕ್ ಬಚ್ಚನ್ ಆಗಲೀ, ಐಶ್ವರ್ಯ ರೈ ಆಗಲೀ ಅಥವಾ ಅವರ ಕುಟುಂಬದ ಮೂಲಗಳು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ಹೀಗಾಗಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ವಿಚಾರ ಎಲ್ಲಿಯೂ ಅಧಿಕೃತವಾಗಿಲ್ಲ. ಆದರೆ ಇಬ್ಬರೂ ದೂರಾಗಿದ್ದಾರೆ ಎನ್ನುವ ಸುದ್ದಿ ಮಾತ್ರ ಪ್ರಚಾರದಲ್ಲೇ ಇದೆ. ಇದಕ್ಕೆ ಮಹತ್ವದ ಸಾಕ್ಷಿ ಎನ್ನುವಂತೆ ಮತ್ತೊಂದು ಸುಳಿವು ಈಗ ಹೊರ ಬಿದ್ದಿದ್ದು. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ಎನ್ನುವ ಗಾಳಿ ಸುದ್ದಿ ಬಹುತೇಕ ಖಚಿತವಾದಂತಿದೆ.

ಐಶ್ವರ್ಯ ರೈ ಇದೀಗ ತಮ್ಮ ಹೆಸರಿನಿಂದ ಬಚ್ಚನ್ ಸರ್ನೇಮ್ ಅನ್ನು ತೆಗೆದು ಹಾಕಿದ್ದಾರೆ. ಐಶ್ವರ್ಯ ರೈ ಎಂದಿದ್ದ ಹೆಸರನ್ನು ಮದುವೆಯಾದ ಮೇಲೆ ಐಶ್ವರ್ಯ ರೈ ಬಚ್ಚನ್ ಎಂದು ಬದಲಿಸಿಕೊಂಡಿದ್ದರು. ಹಲವು ವರ್ಷಗಳಿಂದ ಅದೇ ಹೆಸರಿನಿಂದ ಗುರುತಿಸಿಕೊಂಡಿದ್ದ ಐಶ್ವರ್ಯ ಇದೀಗ ತಮ್ಮ ಸರ್ನೇಮ್ ಅನ್ನು ತೆಗೆದು ಹಾಕಿದ್ದಾರೆ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ವಿಚ್ಛೇಧನ ವಿಚಾರಕ್ಕೆ ಪುಷ್ಠಿ ಕೊಡುವಂತಿದೆ.

ನಿನ್ನೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೋರ್ಡ್ ಮೇಲೆ ಐಶ್ವರ್ಯ ರೈ ಬಚ್ಚನ್ ಹೆಸರು ಬದಲು ಅಂತರಾಷ್ಟ್ರೀಯ ತಾರೆ ಐಶ್ವರ್ಯ ರೈ ಎಂದು ಮಾತ್ರ ಬರೆಯಲಾಗಿದೆ. ಐಶ್ವರ್ಯಾ ರೈ ಅವರ ಫೋಟೋ ಸ್ಕ್ರೀನ್ ಮೇಲೆ ಹಾಕಲಾಗಿತ್ತು. ಈ ವೇಳೆ ಐಶ್ವರ್ಯ ರೈ ಬಚ್ಚನ್ ಬದಲು ಕೇವಲ ಐಶ್ವರ್ಯ ರೈ ಎಂಬ ನಾಮಪಲಕವನ್ನು ಹಾಕಲಾಗಿತ್ತು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ಪಡೆದಿದ್ದಾರೆ ಅಥವಾ ಪಡೆಯುತ್ತಾರೆ ಎನ್ನುವುದು ಬಹುತೇಖ ಖಚಿತವಾಗಿದೆ.












Click it and Unblock the Notifications