D Boss: ದರ್ಶನ್‌ ಬಳಿಕ ಮತ್ತೊಬ್ಬ ನಟನಿಗೆ ಡಿ-ಬಾಸ್‌ ಪಟ್ಟ!

ನಟ ದರ್ಶನ್‌ ತೂಗುದೀಪ ಅವರನ್ನು ಅವರ ಅಭಿಮಾನಿಗಳು ಡಿಬಾಸ್‌ ಎಂದೇ ಕರೆಯುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಡಿ ಬಾಸ್‌ ಎನ್ನುವ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ದರ್ಶನ್‌ ಕಂಡಲ್ಲೆಲ್ಲ ಡಿ ಬಾಸ್‌....ಡಿ ಬಾಸ್‌...ಎನ್ನುವ ಘೋಷಣೆಗಳು ಕೇಳಿಬರುತ್ತವೆ.

ಕೊಲೆ ಕೇಸ್‌ನಲ್ಲಿ ದರ್ಶನ್‌ ಅವರು ಜೈಲಿಗೆ ಹೋದಾಗ ಅಭಿಮಾನ ಕುಂದಲಿಲ್ಲ. ಜೈಲಿನಿಂದ ಹೊರಬಂದ ನಂತರವೂ ದರ್ಶನ್‌ ಅವರನ್ನು ಬಾಸ್‌ ಎಂದೇ ಅದ್ಧೂರಿಯಾಗಿ ಫ್ಯಾನ್ಸ್‌ ವೆಲ್‌ಕಮ್‌ ಮಾಡಿದ್ದಾರೆ. ಇದೇ ವೇಳೆ ಮತ್ತೊಬ್ಬ ಡಿ-ಬಾಸ್‌ ಕೂಡ ಹುಟ್ಟಿಕೊಂಡಿದ್ದು, ಈಗ ಎಲ್ಲೆಡೆ ಹೊಸ ಡಿ ಬಾಸ್‌ ಬಗ್ಗೆಯೇ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

After Kannada Actor Darshan Thoogudeep actor Dhanveer gets D-boss title

ನಟ ದರ್ಶನ್‌ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್‌ ಈಗ ಡಿಬಾಸ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ದರ್ಶನ್‌ ಗರಡಿಯಿಂದಲೇ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಧನ್ವೀರ್‌, ಈಗಲೂ ದರ್ಶನ್‌ ಅವರ ಪ್ರತಿ ಹೆಜ್ಜೆಗೆ ಜೊತೆಯಾಗಿರುವುದನ್ನು ಕಂಡು ಅಭಿಮಾನಿಗಳು ಖುಷ್‌ ಆಗಿದ್ದಾರೆ.

ನಟ ಧನ್ವೀರ್‌ ಮಾಡಿದ್ದೇನು?

ದರ್ಶನ್‌ ಅವರ ಪ್ರತಿ ಕಷ್ಟದಲ್ಲೂ ಧನ್ವೀರ್‌ ಸಾಥ್‌ ಕೊಟ್ಟಿದ್ದಾರೆ. ಎಂತಹ ಪರಿಸ್ಥಿತಿ ಬಂದರೂ ಅವರು ನಮ್ಮ ಡಿಬಾಸ್‌ ಜೊತೆಯಲ್ಲೇ ಇದ್ದಾರೆ ಎಂದೆಲ್ಲ ಕೊಂಡಾಡುತ್ತಿದ್ದಾರೆ. ಅಲ್ಲದೆ, ಧನ್ವೀರ್‌ ಹೆಸರು ಕೂಡ ಡಿ ಇಂಗ್ಲಿಷ್‌ ಅಕ್ಷರದಿಂದಲೇ ಇರುವುದರಿಂದ ಇವರನ್ನೂ ದರ್ಶನ್‌ ಫ್ಯಾನ್ಸ್‌ ಡಿ-ಬಾಸ್‌ ಎಂದು ಕರೆಯಲಾರಂಭಿಸಿದ್ದಾರೆ.

ಕೊಲೆ ಕೇಸ್‌ನಲ್ಲಿ ದರ್ಶನ್‌ ಅವರು ಜೈಲಿನಲ್ಲಿದ್ದಾಗಲೂ ನಟ ಧನ್ವೀರ್‌ ಹಲವು ಬಾರಿ ಹೋಗಿ ದರ್ಶನ್‌ ಅವರನ್ನು ಭೇಟಿಯಾಗಿ, ಕುಶಲೋಪರಿ ವಿಚಾರಿಸಿದ್ದರು. ದರ್ಶನ್‌ ಅವರ ಜಾಮೀನಿಗೂ ಧನ್ವೀರ್‌ ಶ್ಯೂರಿಟಿ ಕೊಟ್ಟಿದ್ದಾರೆ. ಮೊನ್ನೆ ಬಳ್ಳಾರಿ ಜೈಲಿನಿಂದ ದರ್ಶನ್‌ ಜಾಮೀನು ಪಡೆದು ಹೊರಬಂದಾಗಲೂ ಧನ್ವೀರ್‌ ಜೊತೆಯಲ್ಲಿದ್ದರು. ಕೊನೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಧನ್ವೀರ್‌ ಅವರೇ ಕಾರು ಚಲಾಯಿಸಿಕೊಂಡು ದರ್ಶನ್‌ ಅವರನ್ನು ಕರೆತಂದಿದ್ದರು. ನಿನ್ನೆ ದರ್ಶನ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದಾಗಲೂ ಧನ್ವೀರ್‌ ಜೊತೆಯಲ್ಲೇ ಇದ್ದರು.

After Kannada Actor Darshan Thoogudeep actor Dhanveer gets D-boss title

ಇದರಿಂದ ಡಿಬಾಸ್‌ ಅಭಿಮಾನಿಗಳು ಧನ್ವೀರ್‌ ಅವರನ್ನು ಕೊಂಡಾಡುತ್ತಿದ್ದಾರೆ. ನಿಯತ್ತು ಅಂದ್ರೆ ಇದೇ ಧನ್ವೀರ್‌ ಬಾಸ್‌... ಇನ್ಮುಂದೆ ನೀವೂ ಕೂಡ ನಮಗೆ ಮತ್ತೊಬ್ಬ ಡಿಬಾಸ್‌ ಎಂದು ಸ್ಟೇಟಸ್‌ ಹಾಕಿಕೊಳ್ಳುತ್ತಿದ್ದಾರೆ. ದರ್ಶನ್‌ ಅವರ ಪಾಲಿಗೆ ಅತ್ತಿಗೆ ವಿಜಯಲಕ್ಷ್ಮಿ ಅವರನ್ನು ಬಿಟ್ಟರೆ ನೀವೇ ನಿಜವಾದ ಆಪತ್ಬಾಂಧವರು ಎಂದು ಕರೆಯುತ್ತಿದ್ದಾರೆ.

ಜೀವನದಲ್ಲಿ ಇದ್ರೆ ಧನ್ವೀರ್‌ ಅಣ್ಣನ ತರ ಒಬ್ಬ ಗೆಳೆಯ ಇರಬೇಕು ಅಷ್ಟೇ. ನಿಯತ್ತಿಗೆ ಇನ್ನೊಂದು ಹೆಸರೇ ಈ ಧನ್ವೀರ್‌.. ಒಂದು ಊರಲ್ಲಿ ಒಬ್ಬ ಯಜಮಾನ, ಯಜಮಾನನ ಬಂಟ ಇವನ ಕೈ ಎಂದೆಲ್ಲ ಮೆರೆಸುತ್ತಿದ್ದಾರೆ. ದರ್ಶನ್‌ ಬಾಸ್‌ ರಾಮನಾದರೆ, ಧನ್ವೀರ್‌ ಬಾಸ್‌ ಲಕ್ಷ್ಮಣ ಎಂದು ಹೋಲಿಕೆ ಮಾಡಿದ್ದಾರೆ.

ಧನ್ವೀರ್‌ ಅಣ್ಣ.. ನಿಂಗೆ ಧನ್ಯವಾದ ತಿಳಿಸಿಬಿಟ್ರೆ ಅದು ತುಂಬ ಚಿಕ್ಕ ಪದ ಆಗಿಬಿಡುತ್ತೆ ಬಿಡು. ಬಾಸ್ ಅಭಿಮಾನಿಗಳ ಮನಸಲ್ಲಿ ನೀನು ಶಾಶ್ವತವಾಗಿ ನೆಲಸಬಿಟ್ಟೆ. ಬಾಸ್ ಫ್ಯಾನ್ಸ್ ನಿನ್ನ ಯಾವತ್ತೂ ಕೈಬಿಡಲ್ಲ ಎಂದು ಅಭಯ ಕೂಡ ನೀಡಿದ್ದಾರೆ. ನಿಮ್ಮ ಗುರು ಶಿಷ್ಯರ ಸಂಬಂಧ ಸದಾ ಹೀಗೆಯೇ ಇರಲಿ ಎಂದು ಹರಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+