300 ಪ್ರಪೋಸಲ್ ಬಂದ್ರು ನನಗೆ ಅನುಕೂಲ್ ಮಿಶ್ರಾ ಇಷ್ಟ ಆದ್ರು- ವೈಷ್ಣವಿ ಗೌಡ
ನಿಶ್ಚಿತಾರ್ಥ ಆದ ಬಳಿಕ ವೈಷ್ಣವಿ ಗೌಡ ತಮ್ಮ ಭಾವಿ ಪತಿ ಅನುಕೂಲ್ ಮಿಶ್ರಾ ಬಗ್ಗೆ ಮೊದಲ ಬಾರಿಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಹಾಗಾದರೆ ವೈಷ್ಣವಿ ಗೌಡ ಅವರದ್ದು ಪ್ರೇಮ ವಿವಾಹನಾ? ಮದುವೆ ಬಳಿಕ ವೈಷ್ಣವಿ ಸೀರಿಯಲ್ ಮಾಡಲ್ವಾ? ಅನುಕೂಲ್ ಮಿಶ್ರಾ ಅವರು ಯಾರು? ಇದೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ನಟಿ ವೈಷ್ಣವಿ ಗೌಡ ಅವರು ಏಪ್ರಿಲ್ 14ರಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಅವರು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೀಗ ಈ ಪ್ರಶ್ನೆಗಳಿಗೆ ವೈಷ್ಣವಿ ಗೌಡ ಅವರೇ ಖುದ್ದಾಗಿ ಮಾತನಾಡಿ ಉತ್ತರ ಕೊಟ್ಟಿದ್ದಾರೆ.

ಅನುಕೂಲ್ ಮಿಶ್ರಾ ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂಲತ: ಛತ್ತೀಸ್‌ಘಡದವರು. ಮ್ಯಾಟ್ರಿಮೋನಿಯಲ್ಲಿ ಕೂಡಿ ಬಂದ ಸಂಬಂಧ ಆಗಿದೆ ಎಂದು ವೈಷ್ಣವಿ ಗೌಡ ಅವರು ಹೇಳಿಕೊಂಡಿದ್ದಾರೆ. ಮೊದಲಿಗೆ ಇಬ್ಬರು ಫ್ಯಾಮಿಲಿ ಮೀಟ್ ಆಗಿದ್ದರು. ಫ್ಯಾಮಿಲಿ ಮ್ಯಾಚ್ ಆದ ಬಳಿಕ ಒಂದು ದೇವಸ್ಥಾನದಲ್ಲಿ ಅನುಕೂಲ್ ಮಿಶ್ರಾ ಹಾಗೂ ವೈಷ್ಣವಿ ಗೌಡ ಇಬ್ಬರು ಭೇಟಿ ಮಾಡಿದ್ದರಂತೆ.
ಕಂಪ್ಲೀಟ್ ಅರೆಂಜ್ ಮ್ಯಾರೇಜ್
ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದ ಬಳಿಕ ವೈಷ್ಣವಿ ಅನುಕೂಲ್ ಅವರೊಂದಿಗೆ ಮಾತನಾಡಲು ಶುರು ಮಾಡಿದರು. ಕುಟುಂಬದವರು ಹೊಂದಿಕೊಂಡಂತೆ ಅನುಕೂಲ್ ಅವರು ಕೂಡ ತಮಗೆ ಮ್ಯಾಚ್ ಆಗ್ತಾರೆ ಅನಿಸಿದಾಗ ವೈಷ್ಣವಿ ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ನಮ್ಮಿಬ್ಬರದ್ದು ಪ್ರೇಮ ವಿವಾಹ ಅಲ್ಲ ಕಂಪ್ಲೀಟ್ ಅರೆಂಜ್ ಮ್ಯಾರೇಜ್ ಎಂದು ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ.

ಹೈಟ್ ಮ್ಯಾಚ್ ಆಗ್ತಿಲ್ಲ ಹಾರ್ಟ್ ಮ್ಯಾಚ್ ಆಗ್ತಿದೆ
ಆದರೆ ಅನುಕೂಲ್ ಮಿಶ್ರಾ ವೈಷ್ಣವಿ ಗೌಡ ಅವರಿಗೆ ಹೋಲಿಸಿದರೆ ಸ್ವಲ್ಪ ಎತ್ತವಾಗಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ವೈಷ್ಣವಿ ನಮ್ಮಿಬ್ಬರದ್ದು ಹೈಟ್ ಮ್ಯಾಚ್ ಆಗ್ತಾಯಿಲ್ಲ. ಅದರೆ ಹಾರ್ಟ್ ಮ್ಯಾಚ್ ಆಯ್ತು. ಹೀಗಾಗಿ ನಾನು ಒಪ್ಪಿಕೊಂಡೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಇದರಿಂದ ವೈಷ್ಣವಿ ಹಾಗೂ ಅನುಕೂಲ್ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತದೆ.
ನನ್ನ ವೃತ್ತಿ ಬಗ್ಗೆ ಅನುಕೂಲ್‌ಗೆ ಕಾಳಜಿ ಜಾಸ್ತಿ
ಇನ್ನೂ ವೈಷ್ಣವಿ ಗೌಡ ಮದುವೆ ಆದ ಬಳಿಕ ಕರ್ನಾಟಕದಲ್ಲಿ ಇರುವುದಿಲ್ಲ, ಸಿನಿಮಾ ಸೀರಿಯಲ್‌ನಲ್ಲಿ ನಟಿಸುವುದಿಲ್ಲ ಎಂದೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಆದರೆ ವೈಷ್ಣವಿ ಗೌಡ ಅವರು ನಾನು ಮದುವೆ ಆದ ಬಳಿಕ ಒಳ್ಳೆಯ ಆಫರ್ ಬಂದರೆ ಹಾಗೂ ಕತೆ ಇಷ್ಟ ಆದರೆ ಖಂಡಿತಾ ಪಾತ್ರ ಮಾಡುತ್ತೇನೆ. ಸಿನಿಮಾ ಹಾಗೂ ಧಾರಾವಾಹಿ ಬಿಡುವ ಮಾತೇ ಇಲ್ಲ. ನನಗಿಂತ ಅನುಕೂಲ್ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದಿದ್ದಾರೆ.

ಅವರು ನನ್ನು ಭೇಟಿ ಆದ ಮೊದಲ ದಿನವೇ ಅವರು ನನಗೆ ವೃತ್ತಿ ಬಗ್ಗೆ ಮಾತನಾಡಿದರು. ನೀವು ಕೂಡ ಶ್ರಮಪಟ್ಟು ಇಷ್ಟು ಮುಂದೆ ಬಂದಿರುತ್ತೀರಾ, ಮದುವೆ ಮಕ್ಕಳು ಅಂತೆಲ್ಲಾ ಕೆಲಸ ಬಿಟ್ಟು ನಿಮ್ಮ ಆಸೆಗಳಿಗೆ ಕಲ್ಲು ಹಾಕಲು ನನಗೆ ಇಷ್ಟ ಇಲ್ಲ ಎಂದು ಅನುಕೂಲ್ ಹೇಳಿದ್ದರಂತೆ. ಹೀಗಾಗಿ ವೈಷ್ಣವಿ ಅವರಿಗೆ ಅನುಕೂಲ್ ಫಸ್ಟ್ ಮೀಟ್ ಅಲ್ಲೇ ಇಷ್ಟ ಆಗಿದ್ದಾರೆ.
ಗುಟ್ಟಾಗಿ ಎಂಗೇಜ್‌ಮೆಂಟ್ ಆಗಿಲ್ಲ
ನಾನು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿಲ್ಲ. ನನಗೆ ಅರ್ಜೆಂಟ್ ಶೂಟಿಂಗ್ ಇದ್ದಾಗ ಅವರು ಪಿಕ್ ಅಪ್ ಡ್ರಾಪ್ ಮಾಡ್ತಾಯಿದ್ದರು. ಸುಮಾರು ತಿಂಗಳುಗಳ ಹಿಂದೆಯಿಂದ ಇದು ನಡೆದಿದ್ದರಿಂದ ಶೂಟಿಂಗ್ ಅಲ್ಲೂ ಎಲ್ಲರಿಗೂ ಗೊತ್ತಾಗಿತ್ತು. ಬಹುತೇಕ ನನ್ನ ಆಪ್ತಿ ಜನರಿಗೆ ನಾನು ಎಂಗೇಜ್ ಆಗಿದ್ದೇನೆ ಅನ್ನೋದು ಗೊತ್ತಾಗಿತ್ತು.
ಕೆಲಸಕ್ಕೆ ಅತ್ತೆಯಿಂದಲೂ ಸಪೋರ್ಟ್
ಅಲ್ಲದೆ ನಮ್ಮ ಅತ್ತೆ ಕೂಡ ಇಂದಿಗೂ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಕೂಡ ಹೆಣ್ಮಕ್ಕಳು ದುಡಿಬೇಕು ಅನ್ನೋ ಆಸೆ ಇದೆ. ಮದುವೆ ಆದರೂ ಮಕ್ಕಳು ಆದರೂ ಸರಿ ಕೆಲಸ ಮಾಡಬೇಕು ಅವರ ಕಾಲ ಮೇಲೆ ಅವರು ನಿಂತ್ಕೊಳ್ಬೇಕು ಅನ್ನೋದು ಅತ್ತೆಗೆ ಇದೆ. ಅತ್ತೆಗೆ ಹಾಡೋದು ಡ್ಯಾನ್ಸ್ ಮಾಡೋದು ತುಂಬಾ ಇಷ್ಟ. ಹೀಗಾಗಿ ನನ್ನ ಕರೀಯರ್‌ಗೆ ಅವರು ತುಂಬಾ ಸಪೋರ್ಟ್ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ ವೈಷ್ಣವಿ.
ನಾನು ಕರ್ನಾಟಕದಲ್ಲೇ ಇರ್ತೀನಿ
ಅಲ್ಲದೆ ವೈಷ್ಣವಿ ಮದುವೆ ಆದ ಬಳಿಕ ಕರ್ನಾಟಕದಲ್ಲಿ ಇರುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೂ ಕೂಡ ವೈಷ್ಣವಿ ಉತ್ತರ ನೀಡಿದ್ದಾರೆ. ನಾನು ಛತ್ತಿಸಘಡ್‌ದಲ್ಲಿ ಇರೋದಿಲ್ಲ. ಇಲ್ಲೇ ಇರ್ತೀನಿ. ಬೇರೆ ಕಡೆಗೆ ಪೋಸ್ಟ್ ಸಿಕ್ಕರೆ ಆಗ ಇಲ್ಲಿಗೆ ಬಂದು ನಾನು ನನ್ನ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ ವೈಷ್ಣವಿ ನೇರವಾಗಿ ಪಬ್ಲಿಕ್ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿ ಎಲ್ಲಾ ಅನುಮಾನಗಳಿಗೆ ತೆರೆ ಎಳಿದ್ದಾರೆ. ಅನುಕೂಲ್ ಅವರನ್ನು ಮೊದಲ ಬಾರಿಗೆ ದೇವಸ್ಥಾನದಲ್ಲಿ ಭೇಟಿ ಮಾಡಿದ್ದನ್ನು ನೋಡಿದರೆ ವೈಷ್ಣವಿ ಸಂಪ್ರದಾಯಸ್ತ ಹುಡುಗಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.












Click it and Unblock the Notifications