'ಟೇಕ್ ಇಟ್ ಈಸಿ ಊರ್ವಶಿ' ಹಿಟ್ ಸಾಂಗ್ ಹುಟ್ಟಿದ್ದು ಹೇಗೆ? ಅಚ್ಚರಿ ಸಂಗತಿ ಬಿಚ್ಚಿಟ್ಟ ನಟಿ ಊರ್ವಶಿ
1994ರಲ್ಲಿ ತೆರೆಕಂಡಿದ್ದ ಕಾದಲನ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ಹಾಡಿದ್ದ "ಊರ್ವಶಿ, ಊರ್ವಶಿ, ಟೇಕ್ ಇಟ್ ಈಸಿ ಊರ್ವಶಿ" ಹಾಡು ಇಂದಿಗೂ ಎವರ್‌ಗ್ರೀನ್ ಹಿಟ್. ಈ ಸಿನಿಮಾವನ್ನು ಎಸ್.ಶಂಕರ್ ಡೈರೆಕ್ಟ್ ಮಾಡಿದ್ದರು. ಆದರೆ ಈ ಹಾಡಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಚ್ಚರಿ ವಿಚಾರವನ್ನು ದಕ್ಷಿಣ ಭಾರತದ ಹೆಸರಾಂತ ಹಿರಿಯ ನಟಿ ಊರ್ವಶಿ 20 ವರ್ಷಗಳ ಬಳಿಕ ರಿವೀಲ್ ಮಾಡಿದ್ದಾರೆ. ಅಸಲಿಗೆ ಈ ಹಾಡು ಹುಟ್ಟಿಕೊಂಡಿದ್ದು ಹೇಗೆ? ಎಂಬ ಕುತೂಹಲಕಾರಿ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.
ಗೀತ ರಚನೆಕಾರರಾದ ವಾಲಿ ಅವರು 1994ರಲ್ಲಿ ತೆರೆಕಂಡ "ಮಗಳಿರ್ ಮತ್ತುಮ್" ಚಿತ್ರಕ್ಕಾಗಿ "ಕರವೈ ಮಾಡು ಮೂರು" (ಮೂರು ಹಾಲು ಹಸುಗಳು) ಎಂಬ ಹಾಡನ್ನು ಬರೆದಿದ್ದರು. ರೇವತಿ, ರೋಹಿಣಿ ಮತ್ತು ನನಗೆ ಈ ಸಾಲುಗಳನ್ನು ಹಾಡಲು ಕೇಳಿದ್ದರು. ನಾನು ಅವರಿಗೆ ʼಅಯ್ಯೋ, ನಾನು ಆ ಪದವನ್ನು ಹೇಳುವುದಿಲ್ಲʼ ಎಂದಿದ್ದೆ. ಮಹಿಳೆಯರು ತಮ್ಮನ್ನು ತಾವು ಹಾಲು ಹಸುಗಳು ಎಂದು ಕರೆಯುತ್ತಾರೆಯೇ? ಎಂದು ವಿರೋಧಿಸಿದ್ದೆ. ಆದ ನಿರ್ದೇಶಕರು ಸಮಸ್ಯೆ ಏನು? ಎಂದು ಕೇಳಿದರು. ಅವರು ತೆಲುಗು ಅವರಾಗಿದ್ದ ಕಾರಣ ಮಹಿಳೆಯರು ತಮ್ಮನ್ನು ಕರವೈ ಮಾಡು ಎಂದು ಕರೆಯುವುದು ತುಂಬಾ ಕೆಟ್ಟ ಅರ್ಥ ಕೊಡುತ್ತೆ ಎಂದು ತಿಳಿಸಿದ್ದೆ ಎಂದು ಊರ್ವಶಿ ಆ ಘಟನೆ ನೆನೆದಿದ್ದಾರೆ.

ʼಕಮಲ್ ಹಾಸನ್ ಸರ್ ಈ ಸಿನಿಮಾದ ನಿರ್ಮಾಪಕರಾಗಿದ್ದರು. ಶೀಘ್ರದಲ್ಲೇ ಅವರಿಗೆ ಕರೆ ಮಾಡಿ ಊರ್ವಶಿ ಆ ಸಾಲನ್ನು ಹಾಡಲು ಸಿದ್ಧರಿಲ್ಲ ಎಂದು ಹೇಳಿದರು. ಅದಕ್ಕೆ ಅವರು ʼಊರ್ವಶಿ ಅದನ್ನು ಹಾಡುತ್ತಾರೆ, ವಾಲಿ ಸರ್ ಜೊತೆ ಸಂಪರ್ಕಿಸಿʼ ಎಂದು ಉತ್ತರಿಸಿದ್ದರು. ಹಾಗಾಗಿ ನಾನು ವಾಲಿ ಸರ್ ಜೊತೆ ಮಾತನಾಡಿ ಅಂತಹ ಕೆಟ್ಟ ಪದಗಳನ್ನು ಏಕೆ ಬಳಸಲಾಗುತ್ತಿದೆ ಎಂದು ಕೇಳಿದ್ದೆ. ನಂತರ ಅವರು ಕಥೆಯಲ್ಲಿನ ಪರಿಸ್ಥಿತಿಯನ್ನ ನನಗೆ ವಿವರಿಸಿದರು. ಅದರ ಅರ್ಥ ನಾನು ಊಹಿಸಿದಂತೆ ಇಲ್ಲವೆಂದು ವಿವರಿಸಿದರು. ಆಗ ಅವರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನಾನು ಬರೆದ ಸಾಲನ್ನು ಹಾಡಲು ನಿರಾಕಿರಿಸಿದ್ದು ನೀವೇ ಎಂದಿದ್ದರಂತೆ.
ನಂತರ ನಾನು ಅವರನ್ನು ಒಂದು ಸಮಾರಂಭದಲ್ಲಿ ಭೇಟಿಯಾದೆ. ಅವರು ನನ್ನನ್ನು ಅವರ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಬಗ್ಗೆ ಒಂದು ಹಾಡು ಬರೆಯಲು ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ರು. ʼನಿಮ್ಮ ಬಗ್ಗೆ ಒಂದು ಹಾಡು ಬರುತ್ತಿದೆ. ಟೇಕ್ ಇಟ್ ಈಸಿ ಊರ್ವಸಿ, ಇದು ಒಳ್ಳೆಯ ಹಾಡು ಅದನ್ನ ಕೇಳಿ ಎಂದಿದ್ದರು. ಈ ಹಾಡನ್ನು ವೈರಮುತ್ತು ಬರೆದಿದ್ದರು, ಈ ಹಾಡಿನಿಂದಲೇ ಸಿನಿಮಾ ಹಿಟ್ ಕಂಡಿತ್ತು ಎಂದಿದ್ದಾರೆ.

ನಾನು ಆ ಹಾಡನ್ನು ಕೇಳಿದಾಗ ಮತ್ತು ಪ್ರಭುದೇವ ಅವರ ನೃತ್ಯವನ್ನು ನೋಡಿದಾಗ, ಅದು ಆ ಜನರೇಷನ್ ಡ್ಯಾನ್ಸ್‌ಗಿಂತ ವಿಭಿನ್ನವಾಗಿತ್ತು. ಆಗ ನನ್ನನ್ನು ಅಣಕಿಸಿ ಆ ಹಾಡನ್ನು ಬರೆದಿದ್ದಾರೆಯೇ ಎಂದು ಕೇಳಿದ್ದೆ. ಅದಕ್ಕೆ ಅವರು ಇಲ್ಲ, ಒಳ್ಳೆಯ ರೀತಿಯಲ್ಲೇ ಬರೆದಿದ್ದೇನೆ ಎಂದಿದ್ದರು. ಹಲವು ನಟರು ಈಗಾಗಲೇ ತಮ್ಮ ಹೆಸರಿನಲ್ಲಿ ಹಾಡುಗಳನ್ನು ಸ್ವೀಕರಿಸಿದ್ದಾರೆ. ನಿಮಗೂ ಒಂದು ಬೇಡವೇ? ನೀವು ಮೇಲಿನಿಂದ ಬಂದವರಲ್ಲವೇ? ನೀವು ದೇವರ ಲೋಕದಿಂದ ಬಂದವರಲ್ಲವೇ? ಎಂದು ಕಾಲೆಳೆದಿದ್ದರು ಎಂದು ನಟಿ ಊರ್ವಶಿ ಅವರು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.












Click it and Unblock the Notifications