Sonal: ಪ್ರೀತಿಯಲ್ಲಿ ಬ್ರೇಕಪ್ ಆಗಿದೆ : ನಟಿ ಸೊನಾಲ್‌ ವಿಡಿಯೋ ವೈರಲ್‌

ರಾರ್ಬಟ್‌, ಬನಾಸರ್‌ ಸೇರಿದಂತೆ ಹಿಟ್‌ ಚಿತ್ರಗಳಲ್ಲಿ ನಟಿಸಿದ ನಟಿ ಸೊನಾಲ್‌ ಮೊಂತೆರೊ ಮದುವೆ ಬಗ್ಗೆ ಗುಸು ಗುಸು ಜೋರಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕನ ಜೊತೆ ಸೊನಾಲ್‌ ಮದುವೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದ್ದೆ. ತೆರೆಮರೆಯಲ್ಲಿ ಮದುವೆ ಸಿದ್ಧತೆಗಳು ಕೂಡ ಶುರುವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ.

ನಟಿ ಸೊನಾಲ್‌ ಕೈ ಹಿಡಿಯುತ್ತಿರುವ ವರ ಮತ್ಯಾರು ಅಲ್ಲಾ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಹಾಗೂ ಮಾಲತಿ ಅವರ ಕಿರಿಯ ಪುತ್ರ ನಟ, ನಿರ್ದೇಶಕ ತರುಣ್ ಸುಧೀರ್ ಎನ್ನುವ ಸುದ್ದಿ ಹರಿದಾಡುತ್ತಿದೆ.

Actress Sonal Monteiro Said About Her Love Breakup Video Goes Viral In Social Media

ಇನ್ನು ತರುಣ್ ಸುಧೀರ್ ಹಾಗೂ ಸೋನಲ್ ಆಗಸ್ಟ್ 10ರಂದು ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಹೊರ ಬಿದ್ದಿಲ್ಲ. ತರುಣ್ ಸುಧೀರ್ ಆಗಲೀ, ನಟಿ ಸೋನಲ್ ಆಗಲೀ, ಈ ಬಗ್ಗೆ ಅಧೀಕೃತ ಮಾಹಿತಿ ನೀಡಿಲ್ಲ ಆದರೆ ತರುಣ್ ಸುಧೀರ್ ಅವರ ತಾಯಿ ತರುಣ್ ಮದುವೆ ಬಗ್ಗೆ ಖಚಿತ ಪಡಿಸಿದ್ದು, ಹುಡುಗಿ ಯಾರು ಎನ್ನುವ ಸಿಕ್ರೇಟ್‌ ಬಿಟ್ಟುಕೊಟ್ಟಿಲ್ಲ.

ತರುಣ್- ಸೋನಲ್ ಇಬ್ಬರ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ?

ತರುಣ್- ಸೋನಲ್ ಇಬ್ಬರ ಲವ್ ಸ್ಟೋರಿ ಆರಂಭವಾಗಿದ್ದು ಹೇಗೆ? ಎನ್ನುವ ಚರ್ಚೆ ಶುರುವಾಗಿದೆ. ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ಸೋನಲ್ ನಟಿಸಿದ್ದರು. 'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್(ರಾಘವ) ಜೋಡಿ ತನು ಆಗಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಇಬ್ಬರ ಆಪ್ತರು ಹೇಳುತ್ತಿದ್ದಾರೆ.

Actress Sonal Monteiro Said About Her Love Breakup Video Goes Viral In Social Media

ನಟ ದರ್ಶನ್ ತರುಣ್ ಸುಧೀರ್‌ಗೆ ಮದುವೆ ಮಾಡಿಸಬೇಕು ಎಂದು ಹೇಳುತ್ತಿದ್ದರು. ಹಾಗಾಗಿ ಶೂಟಿಂಗ್‌ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗುತ್ತಿದೆ.

ನನಗೆ ಬ್ರೇಕಪ್‌ ಆಗಿದೆ-ಸೋನಲ್

ಈ ಎಲ್ಲಾ ಬೆಳವಣಿಗೆಗಳ ಮಧ್ಯ ನಟಿ ಸೋನಲ್ ಈ ಹಿಂದೆ ತಮ್ಮ ವೈಯಕ್ತಿಕ ಜೀವನ ಅಂದರೆ ಪ್ರೀತಿ-ಮದುವೆ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಝೈದ್ ಖಾನ್‌ ಜೊತೆಗಿನ ಬನಾಸರ್‌ ಚಿತ್ರದ ಸಂದರ್ಶನದ ವೇಳೆ ಸೊನಾಲ್‌ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದ ವೇಳೆ ನನಗೆ ಬಾಯ್‌ಫ್ರೆಂಡ್‌ ಇಲ್ಲ ಎಂದಿರುವ ಸೊನಾಲ್‌, ಈಗ ನನಗೆ ನಿಜವಾಗಿಯೂ ಇಲ್ಲ. ಅಂದರೆ ಮೊದಲು ಇದ್ದರು. ನಾನು ಈಗಾಗಲೇ ಹೇಳಿದ್ದೇನೆ. ನನಗೆ ಒಂದು ಸಲ ಬ್ರೇಕಪ್‌ ಆಗಿದೆ. ಸದ್ಯ ನಾನು ಹ್ಯಾಪಿಲಿ ಸಿಂಗಲ್‌ ಎಂದಿರುವ ಸೊನಾಲ್‌ ವಿಡಿಯೋ ಸದ್ಯ ಮತ್ತೆ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+