ಆ ವಿಚಾರಕ್ಕೆ ನನ್ನ & ಗಂಡನ ನಡುವೆ ಜಗಳ, ಪ್ರತಿದಿನ ಅಳ್ತೀನಿ: ನಟಿ ಶುಭಾ ಪೂಂಜಾ
'ಮೊಗ್ಗಿನ ಮನಸ್ಸು' ಸಿನಿಮಾ ಖ್ಯಾತಿಯ ನಟಿ ಶುಭಾ ಪೂಂಜಾ (Shubha Poonja) ಅವರು 2022ರಲ್ಲಿ ತನ್ನ ಬಹುಕಾಲದ ಗೆಳೆಯ ಸುಮಂತ್ ಅವರೊಂದಿಗೆ ಮದುವೆಯಾಗಿದ್ದರು. ಕೆಲವೇ ಸಿನಿಮಾಗಳೂ ಮಾಡಿದರೂ ಶುಭಾ ಅವರು ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಮತ್ತೆ ಗಮನ ಸೆಳೆದಿದ್ದರು. ಇತ್ತೀಚಿನ ಸಂದರ್ಶನದಲ್ಲಿ ಶುಭಾ ಪೂಂಜಾ ತಮ್ಮ ಬದುಕಿನ ಬಗ್ಗೆ ಅಚ್ಚರಿ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನನ್ನ ಹಾಗೂ ಗಂಡನ ನಡುವೆ ಆ ಒಂದು ವಿಚಾರಕ್ಕೆ ಗಲಾಟೆ ಎಂದು ಶಾಕಿಂಗ್ ವಿಷಯವನ್ನ ರಿವೀಲ್ ಮಾಡಿದ್ದಾರೆ.
'ಹೊಸದಾಗಿ ಮದುವೆ ಆಗುವವರು ತುಂಬಾ ನಿರೀಕ್ಷೆಗಳನ್ನ ಇಟ್ಟುಕೊಳ್ಳಬೇಡಿ. ಆಗಲೇ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತೆ. ಈಗ ನಾನು ಅಮ್ಮನ ಮನೇಲಿ ತುಂಬಾ ಹೊತ್ತು ಇರೋಕಾಗಲ್ಲ. ಅಮ್ಮನನ್ನ ತುಂಬಾ ಮಿಸ್ ಮಾಡಿಕೊಳ್ತೀನಿ. ಅಮ್ಮನನ್ನ ಬಿಟ್ಟು ಇದ್ದವಳೇ ಅಲ್ಲ. ಹುಟ್ಟಿದಾಗಲೂ ನನ್ನ ಕರುಳಬಳ್ಳಿ ಕಟ್ ಆಗಲಿಲ್ಲ ಅಂತ ಅಮ್ಮ ಹೇಳ್ತಿದ್ರು. ಹಾಗಾಗಿ ಅಮ್ಮನನ್ನ ಬಿಟ್ಟು ಇದ್ದವಳಲ್ಲ ನಾನು' ಎಂದು ನಟಿ ಶುಭಾ ಭಾವುಕರಾಗಿದ್ದಾರೆ.

'ಎಲ್ಲರೂ ಅಮ್ಮ ಹೋದ ಮೇಲೆ ಒಂದೆರಡು ವರ್ಷ ಆದ ಮೇಲೆ ಸರಿ ಹೋಗ್ತಾರೆ ಅಂತಾರೆ. ಆದರೆ ನಾನೂ ಸತ್ತು ಅಲ್ಲಿಗೆ ಹೋಗುವವರೆಗೂ ನಾನು ಹೀಗೇ ಇರುತ್ತೇನೆ. ನನಗೂ ಸುಮಂತ್‌ಗೂ ಇದೇ ವಿಚಾರಕ್ಕೆ ಜಗಳವೂ ಆಗಿದೆ. ಯಾವಾಗ ನೀನು ನಿಮ್ಮ ಅಮ್ಮನ ಪ್ರಪಂಚದಿಂದ ಹೊರಗೆ ಬರ್ತೀಯಾ? ಎಲ್ಲದಕ್ಕೂ ಅಮ್ಮ ಅಮ್ಮ ಅಂತೀಯಾ ಅಂತಿದ್ದ. ಆದರೆ ಅದು ನಿಜಕ್ಕೂ ಕಷ್ಟವಾದ ವಿಷಯ. ಪ್ರತಿದಿನ ಆ ವಿಚಾರಕ್ಕೆ ಅಳುತ್ತೇನೆ. ಪ್ರತಿದಿನ ಅಮ್ಮನನ್ನ ಮಿಸ್ ಮಾಡಿಕೊಳ್ತೀನಿ, ಬೇಜಾರಲ್ಲೇ ಇರ್ತೀನಿ' ಎಂದಿದ್ದಾರೆ.
'ಶೂಟಿಂಗ್ ಇಲ್ಲದಿದ್ರೆ, ಬೆಳಿಗ್ಗೆ ಎದ್ದು ತಿಂಡಿ ತಿಂದು ಸೀದಾ ಅಮ್ಮನ ಮನೆಗೆ ಹೋಗ್ತೀನಿ, ರಾತ್ರಿವರೆಗೂ ಅಲ್ಲೇ ಇದ್ದು ಬರ್ತೀನಿ. ಅಮ್ಮ ಸಡನ್ನಾಗಿ ಇಲ್ಲ ಅನ್ನೋದು ತಡೆಯೋಕಾಗಲ್ಲ. ನಾನು ಅದನ್ನ ಎಲ್ಲರಂತೆ ಅಳುತ್ತಾ ತೋರಿಸಿಕೊಳ್ಳಲ್ಲ. ಆದರೆ ನಾನು ನಿಜವಾಗಿ ಅದರಿಂದ ಹೊರಗೆ ಬಂದಿಲ್ಲ' ಎಂದು ಅಮ್ಮನನ್ನ ನೆನೆದಿದ್ದಾರೆ.
'ಮೋಸ ಮಾಡುವವರಿಂದ ದೂರ ಇರಿ'
'ನಾನು ಮನುಷ್ಯತ್ವ ಅನ್ನೋದನ್ನ ತಾಯಿಯಿಂದ ಕಲಿತೆ. ಬೇರೆಯವರಿಗೆ ಸ್ಪಂದಿಸಬೇಕು ಅನ್ನೋದನ್ನೂ ಕಲಿತಿದ್ದೀನಿ. ಅಮ್ಮನ ಗುಣಗಳೇ ನನಗೂ ಬಂದಿದೆ. ಬೇರೆ ಯಾರಾದ್ರೂ ನೋವಲ್ಲಿದ್ರೆ ಅದನ್ನು ನೋಡಿ ನನಗೂ ಬೇಜಾರಾಗುತ್ತೆ. ಅದಕ್ಕೆ ಮಿಡಿಯುವ ನಮ್ಮ ಗುಣವನ್ನ ಮನುಷ್ಯರು ದುರ್ಬಳಕೆ ಮಾಡಿಕೊಳ್ತಾರೆ. ಅದಕ್ಕೆ ಮನುಷ್ಯರಿಗಿಂತ ಪ್ರಾಣಿಗಳನ್ನ ಹೆಚ್ಚಾಗಿ ನಂಬುತ್ತೀನಿ. ಹಾಗಾಗಿ ನಾವು ನಮ್ಮ ಜಾಗ್ರತೆಯಲ್ಲಿರಬೇಕು. ನಮ್ಮ ಹುಷಾರಲ್ಲಿ ನಾವಿದ್ದರೆ ಒಳ್ಳೆಯದು, ಹಾಗಂತ ನಮ್ಮ ಸ್ವಭಾವವನ್ನೂ ಕಳೆದುಕೊಳ್ಳಬಾರದು' ಎಂದಿದ್ದಾರೆ.
'ನಮ್ಮ ಲಿಮಿಟ್ ನಮಗೆ ಗೊತ್ತಿರಬೇಕು. ಯಾವುದನ್ನು ಎಷ್ಟು ತಗೋಬೇಕು ಅನ್ನೋದು ತಿಳಿದಿರಬೇಕು. ಮೋಸ ಮಾಡುವವರಿಂದ ದೂರ ಇರಬೇಕು. ನನ್ನಿಂದ ಇಷ್ಟು ಸ್ಪಂದನೆ ಅಷ್ಟೇ ಅನ್ನೋ ಹಾಗೆ ಇರಬೇಕು. ಈಗೆಲ್ಲ ಜನರಿಗೆ ಕೇಳುವವರು ಬೇಕು. ಗಂಟೆಗಟ್ಟಲೆ ಜನಗಳ ಕಷ್ಟಗಳನ್ನ ಕೇಳ್ತೀನಿ. ಕಾರಲ್ಲಿ ಹೋಗಬೇಕಾದ್ರೂ ನಾನು ಡ್ರೈವರ್‌ಗಳನ್ನ ಮಾತನಾಡಿಸಿಕೊಂಡೇ ಟ್ರಾವೆಲ್ ಮಾಡ್ತೀನಿ, ಸುಮ್ನೆ ಮೊಬೈಲ್ ನೋಡಿಕೊಂಡು ಕೂರಲ್ಲ' ಎಂದಿದ್ದಾರೆ ಶುಭಾ ಪೂಂಜಾ.












Click it and Unblock the Notifications