ನಿರ್ಮಾಪಕನಿಗೆ 'ಚಪ್ಪಲಿ'ಯಲ್ಲಿ ಹೊಡೆದ ನಟಿ..!
ಚಿತ್ರರಂಗ ಎಂದರೆ ಸಾಕು ಒಳ್ಳೆಯರಷ್ಟೇ ಮೋಸ ಮಾಡುವವರು ಇರುತ್ತಾರೆ. ಅವಕಾಶ ಕೊಡ್ತಿನಿ, ನನಗೆ ಅವರು ಗೊತ್ತು. ಇವರು ಗೊತ್ತು ಅಂತ ಬಣ್ಣ ಬಣ್ಣದ ಮಾತುಗಳ ಮೂಲಕ ಚಿತ್ರರಂಗವನ್ನು ಅರೆದು ಕುಡಿದವರಂತೆ ಇಲ್ಲಿ ಅನೇಕರು ವೆರೈಟಿ ವೆರೈಟಿ ವೇಷವನ್ನು ಹಾಕಿಕೊಂಡು ಓಡಾಡುತ್ತಾರೆ. ನನಗೆ ಎಲ್ಲಾರು ಗೊತ್ತು ಎಂದು ಇಲ್ಲಸಲ್ಲದ ಆಸೆಯನ್ನ ತೋರಿಸಿ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಬಂದವರಿಗೆ ಮೋಸ ಮಾಡಿ, ಕೈ ಕೊಟ್ಟು ಯಾರಿಗೂ ಸಿಗದಂತೆ ಕಣ್ಮರೆಯಾಗುತ್ತಾರೆ.
ಇಂದಿನ ಕಾಲದಲ್ಲಿ ಹಣಕ್ಕಾಗಿ ಅನೇಕರು ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳು ಕೂಡ ಇವೆ. ಬಾಲಿವುಡ್‌ನ ನಿರ್ಮಾಪಕ ಕರಣ್ ಸಿಂಗ್ ಚೌಹಾಣ್ ವಿರುದ್ದ ನಟಿಯಾಗಿ ಗುರುತಿಸಿಕೊಂಡಿರುವ ರುಚಿ ಗುಜ್ಜರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅಲ್ಲದೇ ವಂಚಿಸಿದ ನಿರ್ಮಾಪಕನಿಗೆ ಚಿತ್ರಮಂದಿರದಲ್ಲಿಯೇ ಚಪ್ಪಲಿ ಸೇವೆಯನ್ನು ಮಾಡಿದ್ದಾರೆ.

ಕರಣ್ ಸಿಂಗ್ ಚೌಹಾಣ್ ಸಹ ನಿರ್ಮಾಣದ ಸೋಲಾಂಗ್ ವ್ಯಾಲಿ' ಚಿತ್ರ ಜುಲೈ 25 ರಂದು ಬಿಡುಗಡೆಯಾಗಿದೆ. ಈ ಹಿನ್ನೆಲೆ.. ತಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ತಿರುವ ಪ್ರತಿಕ್ರಿಯೆಯನ್ನು ತಿಳಿಯಲು ಕರಣ್ ಸಿಂಗ್ ಚೌಹಾಣ್ ತಮ್ಮ ಮತ್ತೊಬ್ಬ ಸಹ ನಿರ್ಮಾಪಕ ಮತ್ತು ಚಿತ್ರದ ನಿರ್ದೇಶಕ ಮನ್ ಸಿಂಗ್ ಜೊತೆ ಮುಂಬೈನ ಮಲ್ಟಿಪ್ಲೆಕ್ಸ್‌ಗೆ ಹೋಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಟಿಯಾಗಿ ಗುರುತಿಸಿಕೊಂಡಿರುವ ರುಚಿ ಗುಜ್ಜರ್ ತಮ್ಮ ಹಣವನ್ನು ಹೇಗಾದರೂ ಮಾಡಿ ಮರಳಿ ಪಡೆಯುವ ಉದ್ದೇಶದಿಂದ ನಿರ್ಮಾಪಕನ ವಿರುದ್ಧ ಆ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರತಿಭಟನೆ ಮಾಡಲು ಹೋಗಿದ್ದರು.
ನಟಿಯಾಗಿ ಗುರುತಿಸಿಕೊಂಡಿರುವ ರುಚಿ ಗುಜ್ಜರ್ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ''ಸೋಲಾಂಗ್ ವ್ಯಾಲಿ'' ಪೋಸ್ಟರ್‌ಗೆ ಮಸಿ ಬಳೆದಿರುವುದು. ಅಲ್ಲದೇ ಕತ್ತೆಯ ಮೇಲೆ ನಿರ್ಮಾಪಕರನ್ನು ಕೂರಿಸಿರುವ ಚಿತ್ರವನ್ನ ಪ್ರದರ್ಶಿಸಿ ನಿರ್ಮಾಪಲ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರುಚಿ ಗುಜ್ಜರ್ ಮತ್ತು ಮನ್ ಸಿಂಗ್ ನಡುವೆ ವಾದ ಶುರುವಾಗಿದೆ. ಈ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡ ರುಚಿ ಗುಜ್ಜರ್ ಅಲ್ಲಿಯೇ ಮನ್ ಸಿಂಗ್ ಅವರ ಮೈಚಳಿ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಕರಣ್ ಸಿಂಗ್ ಚೌಹಾಣ ಮೇಲೀನ ಕೋಪದಿಂದ ಮನ್ ಸಿಂಗ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ.
ಏನಿದು ಪ್ರಕರಣ?
ಕರಣ್ ಸಿಂಗ್ ಚೌಹಾಣ್ ಈ ಹಿಂದೆ ಧಾರಾವಾಹಿಯನ್ನು ಮಾಡುವ ಮಾತನ್ನು ರುಚಿ ಗುಜ್ಜರ್ ಅವರಿಗೆ ನೀಡಿದ್ದರು. ''ಸೋನಿ'' ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ ಎಂದು ರುಚಿ ಅವರನ್ನು ನಂಬಿಸಿ ನೀವು ನಮ್ಮ ಜೊತೆ ಧಾರಾವಾಹಿಗೆ ಹಣ ಹೂಡಿ ಸಹ ನಿರ್ಮಾಪಕಿಯಾಗಿ ಎಂದು ಹೇಳಿದ್ದರು. ಕರಣ್ ಸಿಂಗ್ ಚೌಹಾಣ್ ಮಾತುಗಳನ್ನ ನಂಬಿ ರುಚಿ ಗುಜ್ಜರ್ ಜುಲೈ 2023 ರಿಂದ ಜನವರಿ 2024ರ ನಡುವೆ ತಮ್ಮ ಸಂಸ್ಥೆಯಾದ ಎಸ್ ಆರ್ ಈವೆಂಟ್ ಮತ್ತು ಎಂಟರ್‌ಟೈನ್ಮೆಂಟ್ಸ್‌ದಿಂದ ಕರಣ್ ಸಿಂಗ್ ಚೌಹಾಣ್ ಕೇಳಿದಾಗೆಲ್ಲ ಹಣ ಕಳುಹಿಸಿದ್ದಾರೆ.
ಕರಣ್ ಸಿಂಗ್ ಚೌಹಾಣ್ ಅವರಿಗೆ ಹೆಚ್ಚು ಕಡಿಮೆ 24 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಧಾರಾವಾಹಿ ಶುರುವಾಗಲೇ ಇಲ್ಲ. ಸುಳಿವು ಕೂಡ ಸಿಗಲಿಲ್ಲ. ಹೀಗಾಗಿ ಅನುಮಾನಗೊಂಡು ವಿಚಾರಿಸಲು ಶುರು ಮಾಡಿದಾಗ ಕರಣ್ ಸಿಂಗ್ ಚೌಹಾಣ್ ಬೆದರಿಕೆಯನ್ನು ಹಾಕಲು ಶುರು ಮಾಡಿದ್ದರು. ಇದೇ ವೇಳೆ ತಮ್ಮಿಂದ ಪಡೆದ ಹಣವನ್ನು ಕರಣ್ ಸಿಂಗ್ ಚೌಹಾಣ್ ''ಸೋಲಾಂಗ್ ವ್ಯಾಲಿ'' ಚಿತ್ರಕ್ಕೆ ಹೂಡಿದ್ದಾರೆ ಎನ್ನುವ ವಿಚಾರ ಕೂಡ ರುಚಿ ಗುಜ್ಜರ್‌ಗೆ ಗೊತ್ತಾಗಿತ್ತು. ಈ ಎಲ್ಲ ವಿಚಾರಗಳನ್ನು ಹಲ್ಲೆ ನಡೆಸುವ ಮುನ್ನ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ರುಚಿ ಉಲ್ಲೇಖಿಸಿದ್ದಾರೆ. ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 318(4), 352 ಮತ್ತು 351(2) ರ ಅಡಿಯಲ್ಲಿ ಕರಣ್ ಸಿಂಗ್ ಚೌಹಾಣ್ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications