Rashmika Mandanna: ರಾಷ್ಟ್ರವೇ ಪ್ರೀತಿಸುವ "ಕಾಂತಾರ-1'ಗೆ ವಿಷ್ ಮಾಡದ ರಶ್ಮಿಕಾ ಮತ್ತೆ ಟ್ರೋಲ್
Rashmika Mandanna: ಕನ್ನಡ ನೆಲದ ಕಥೆಯನ್ನು ಸಿನಿಮಾ ಗೆದ್ದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ "ಕಾಂತಾರ ಚಾಪ್ಟರ್ 1' ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಹಳೆಯ ದಾಖಲೆಗಳನ್ನು ಮುರಿಯುತ್ತಿದೆ. ಈ ಸಿನಿಮಾಗೆ ಚಿತ್ರರಂಗದ ಭೇದ ಭಾವ ಮರೆತು ಅನೇಕ ಸೆಲೆಬ್ರೆಟಿಗಳು ಶುಭ ಕೋರುತ್ತಿದ್ದಾರೆ. ಆದರೆ ನ್ಯಾಷನಲ್ ಕ್ರಷ್ ಪಟ್ಟಕ್ಕೇರಿದ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಮಾತ್ರ ವಿಷ್ ಮಾಡುವ ಗೋಜಿಗೆ ಹೋಗಿಲ್ಲ.
ಅರೇ ರಶ್ಮಿಕಾ ಮಂದಣ್ಣ ವಿಷ್ ಮಾಡದಿದ್ರೆ ಏನಾಯ್ತು? ಮಾಡದಿದ್ರೆ ಬಿಟ್ಟು ಬಿಡಿ ಎನ್ನಬಹುದು. ಈ ಬಗ್ಗೆ ಹೇಳಲು ಕಾರಣವಿದೆ. ರಶ್ಮಿಕಾ ಮಂದಣ್ಣ ಕರ್ನಾಟಕದವಳು. ರಶ್ಮಿಕಾ ನಟಿಸಿದ್ದ ಮೊದಲ ಸಿನಿಮಾ ಕನ್ನಡದ "ಕಿರಿಕ್ ಪಾರ್ಟಿ'. ಕಾಂತಾರ ಸರಣಿ ನಿರ್ದೇಶಿಸಿ ರಿಷಬ್ ಶೆಟ್ಟಿಯವರೇ ಆ ಸಿನಿಮಾ ಸಹ ನಿರ್ದೇಶಿಸಿದ್ದರು. ಪರಮ್‌ವಾ ಸ್ಟುಡಿಯೋನಡಿ ಕಿರಿಕ್ ಪಾರ್ಟಿ ನಿರ್ಮಾಣವಾಗಿ ಭರ್ಜರಿ ಹೆಸರು ಮಾಡಿತು. ಮೊದಲ ಸಿನಿಮಾದಿಂದಲೇ ನಟಿ ರಶ್ಮಿಕಾ ಗುರುತಿಸಿಕೊಳ್ಳುವಂತಾಯಿತು. ಅಲ್ಲಿಂದ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯೂಸಿಯಾದ ನಟಿಗೆ ಶ್ರೀಮಂತಿಕೆ, ಖ್ಯಾತಿ ಅಮಲೇರಿದೆ ಎಂದು ಅನೇಕರು ರಶ್ಮಿಕಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡಿಗರ ಕೆಂಗಣ್ಣಿಗೆ ರಶ್ಮಿಕಾ ಗುರಿಯಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕನ್ನಡದಲ್ಲಿ ಡಬ್ ಮಾಡಲು ರಶ್ಮಿಕಾಗೆ ಭಾಷೆ ಸಮಸ್ಯೆ ಆಗಿತ್ತಂತೆ. ತನಗೆ ಮೊದಲಿಗೆ ಅವಕಾಶ ನೀಡಿದ ನಿರ್ದೇಶಕರು ಮತ್ತು ಸಂಸ್ಥೆ ಹೆಸರು ಹೇಳದೇ ಸನ್ನೆ ಮಾಡಿದ್ದರು. ತಾನು ಹೈದರಾಬಾದ್ ನವಳು ಎಂದು ರಶ್ಮಿಕಾ ಹೇಳಿದ್ದರು. ಹೀಗೆ ಅನೇಕ ವಿಚಾರಗಳಿಗೆ ಸುದ್ದಿಯಾಗಿ ಕನ್ನಡಿಗರನ್ನು ಕೆಣಕುವಂತೆ ಮಾಡಿದ್ದರು ಎಂದು ಟ್ರೋಲ್ ಸಹ ಆಗಿದ್ದರು. ಹಲವು ಟೀಕೆಗಳನ್ನು ನ್ಯಾಷನಲ್ ಕ್ರಷ್ ಎದುರಿಸಿದ್ದರು.
ಇದೀಗ ಮತ್ತೆ ಅಂತದ್ದೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. "ರಶ್ಮಿಕಾ ಮಂದಣ್ಣ" ಬಿಟ್ಟರೆ ಇಡೀ ದೇಶವೇ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾವನ್ನು ಕಾಣಲು, ಅದು ಯಶಸ್ವಿಯಾಗಲು ಬಯಸುತ್ತಿದ್ದಾರೆ. ಇಡೀ ಕಾಂತರ ತಂಡಕ್ಕೆ ಭಾಷೆಯ ಭೇದ ಭಾವವಿಲ್ಲದೇ ಶುಭ ಕೋರುತ್ತಿದ್ದಾರೆ. ಆದರೆ ಇಲ್ಲಿಂದಲೇ, ಇದೇ ನಿರ್ದೇಶಕರ ಗಡಿಯಲ್ಲಿ ನಟನೆ ಕಲಿತು ಹೋಗಿರುವ ರಶ್ಮಿಕಾ ಮಾತ್ರ ಕಾಂತಾರಗೆ ವಿಷ್ ಮಾಡಿಲ್ಲ ಎಂಬುದು ರಿಷಬ್ ಶೆಟ್ಟಿ ಅವರ ಫ್ಯಾನ್ಸ್ ಸೇರಿದಂತೆ ಹಲವು ದೂರಿದ್ದಾರೆ.
"ರಶ್ಮಿಕಾ ಕನ್ನಡ ಉದ್ಯಮದ ಬೆಂಬಲದ ಮೂಲಕ ತಮ್ಮ ವೃತ್ತಿಜೀವನದ ಆರಂಭಿಕ ಈ ಹಂತಕ್ಕೆ ಬಂದಿದ್ದಾರೆ. ಕನ್ನಡದಿಂದ ಬೆಳೆದವರು ನಂತರ ಕನ್ನಡವನ್ನು ಇಲ್ಲಿ ಬೆಳೆಸಿದವರನ್ನು ಸುಲಭವಾಗಿ ಮರೆತುಬಿಡುತ್ತಾರೆ. ಜೀವನದಲ್ಲಿ ನಾವು ಯಾವುತ್ತು ಹೇಗೆ ಬಂದೆವು. ಎಲ್ಲಿಂದ ಬಂದಿದ್ದೇವೆ ಎಂಬುದನ್ನು ಮರೆತುಬಿಡುವುದು ಸರಿಯಲ್ಲ. ಹಾಗಾದಲ್ಲಿ ಖಂಡಿತವಾಗಿಯೂ ಜೀವನವೇ ಮುಂದೆ ಪಾಠ ಕಲಿಸುತ್ತದೆ. ರಶ್ಮಿಕಾ ನೀವು ಈಗ ಯಶಸ್ವಿಯಾಗಿರಬಹುದು. ಖ್ಯಾತಿಯ ಉತ್ತುಂಗದಲ್ಲಿರಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ...' ಅಂತಲೂ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಟೀಕೆಗಳು ಹರಿದಾಡುತ್ತಿವೆ.
ರಶ್ಮಿಕಾಗೆ ರಿಷಬ್ ಶೆಟ್ಟಿ ಟಾಂಗ್
ಈ ಹಿಂದೆ ಸಂದರ್ಶನದಲ್ಲಿ ನಟ ರಿಷಬ್ ಶೆಟ್ಟಿಯವರು ಸಹ ಕೈಸನ್ನೆ ಮಾಡಿ ರಶ್ಮಿಕಾಗೆ ಟಾಂಗ್ ನೀಡಿದ್ದರು. ಸದ್ಯ ಸಿನಿಮಾ ಬಿಡುಗಡೆ ಆಗಿರುವ ಕಾಂತಾರ ಅಧ್ಯಾಯ 1ರ ಪ್ರಮೋಷನ್ ಕಾರ್ಯಕ್ರಮವೊಂದರಲ್ಲಿ ನಿರೂಪಕರ ಪ್ರಶ್ನೆಗೆ ಉತ್ತರಿಸಿದ್ದ ರಿಷಬ್, "ಕಥೆಗೆ ಯಾರು ಸೂಟ್ ಆಗುತ್ತಾರೆ ಅವರನ್ನು ಕರೆತಂದು, ವರ್ಕ್ ಶಾಪ್ ಮಾಡಿ, ಅವರ ಹಿಂದೆ ಟೀಂ ಬಿಟ್ಟು ನಟನೆ ಹೇಳಿಕೊಡುತ್ತೇವೆ. ಅವರಿಗೆ ನಟನೆ ಬರದಿದ್ದರೂ ಸಹಿತ ಕಥೆಯ ಆದ್ಯತೆಯನ್ನು ಪೂರೈಸುತ್ತೇವೆ' ಎಂದು ಹೇಳುವ ಮುಖೇನ ನಟಿ ರಶ್ಮಿಕಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.












Click it and Unblock the Notifications