Ramya VS Darshan: ದರ್ಶನ್ ಫ್ಯಾನ್ಸ್ ವಿರುದ್ಧ ಸಿಡಿದು ನಿಂತ ರಮ್ಯಾ; ಕೆಟ್ಟ ಕಮೆಂಟ್ ಮಾಡಿದೋರಿಗೆ ತಕ್ಕ ಪಾಠ ಫಿಕ್ಸ್!

ಬೆಂಗಳೂರು, ಜುಲೈ 28: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಕೇಸ್‌ನ ವಿಚಾರಣೆ. ಹೈಕೋರ್ಟ್‌ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು. ಇದರ ಬೆನ್ನಲ್ಲೇ ನಟಿ ರಮ್ಯಾ ಅದನ್ನು ಬೆಂಬಲಿಸಿ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಮಾಡಿದ್ದರು.

ನಟಿ ರಮ್ಯಾ ಅವರ ಪೋಸ್ಟ್‌ ನಿಂದಾಗಿ ದರ್ಶನ್‌ ಅವರ ಫ್ಯಾನ್ಸ್‌ ನಿಂದ ನಟಿ ರಮ್ಯಾ ಅವರಿಗೆ ಅಶ್ಲೀಲ ಪದಗಳಿಂದ ಟೀಕಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಮೆಸೇಜುಗಳು ಬರುತ್ತವೆ ಎಂದು ನಟಿ ರಮ್ಯಾ ಆರೋಪಿಸಿದ್ದರು. ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ತೀವ್ರವಾಗಿ ಕಿಡಿ ಕಾರಿದ್ದಾರೆ. ಇದೀಗ ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರವಾಗಿ ಇಂದು ಸೈಬರ್ ಕ್ರೈಂ ಗೆ ನಟಿ ರಮ್ಯಾ ದೂರು ನೀಡಲಿದ್ದಾರೆ. ಅಲ್ಲದೇ ನಟಿ ರಮ್ಯಾ ಅವರು ಮಹಿಳಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Actress Ramya Files Complaint Against Darshan Fans With State Women Commission

ಈ ಕುರಿತು ಖಾಸಗಿ ವಾಹಿನಿಯಲ್ಲಿ ಮಾತನಾಡಿದ ನಟಿ ರಮ್ಯಾ ಅವರು, ನಾನು ಒಂದು ಸಿಂಪಲ್‌ ಪೋಸ್ಟ್‌ ಹಾಕಿದ್ದೆ. ಸುಪ್ರೀಂ ಕೋರ್ಟ್ ಒಂದು ಸ್ಟೇಟ್ ಮೆಂಟ್ ಕೊಟ್ಟರು ಜುಲೈ 24ಕ್ಕೆ. ಇದಕ್ಕೆ ಸಂಬಂಧಿಸಿ ಸಾಮಾನ್ಯ ಜನರಿಗೆ ಎಲ್ಲೋ ಒಂದು ಕಡೆ ಹೋಪ್ ಇದೆ. ನ್ಯಾಯ ಸಿಗುತ್ತೆ ಅಂತ ಅಷ್ಟೇ ಪೋಸ್ಟ್ ಹಾಕಿದ್ದೆ. ಅದಾದ ಮೇಲೆ ಈ ಮೆಸೇಜ್ ಎಲ್ಲಾ ಬರೋಕೆ ಶುರುವಾಯ್ತು ಎಂದು ನಟಿ ರಮ್ಯಾ ಅವರು ತಿಳಿಸಿದ್ದಾರೆ.

ಇದೀಗ ದರ್ಶನ್‌ ಫ್ಯಾನ್ಸ್‌ ವಿರುದ್ಧ ಸಿಡಿದು ನಿಂತಿರುವ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಮಾಡಿದವಿಗೆ ಪಾಠ ಕಲಿಸೋಕೆ ರಮ್ಯಾ ಸಜ್ಜಾಗಿದ್ದಾರೆ. ದರ್ಶನ್ ಫ್ಯಾನ್ಸ್ ವಿರುದ್ದ ಮಹಿಳಾ ಅಯೋಗಕ್ಕೆ ದೂರು ನೀಡಲಿರುವ ಬಗ್ಗೆ ನಟಿ ರಮ್ಯಾ ಅವರು ಮಾತನಾಡಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ವಕೀಲರ ಜೊತೆ ಮಾತನಾಡಿದ್ದೀನಿ. ಕೆಟ್ಟ ಕಮೆಂಟ್ ಮಾಡಿರುವವರ ಎಲ್ಲಾ ಮಾಹಿತಿ ಕಲೆಕ್ಟ ಮಾಡಿ ದೂರು ನೀಡ್ತೀನಿ. ಈ ರೀತಿಯ ಹುಡುಗರಿಂದಲೇ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗ್ತಿರೋದು. ದರ್ಶನ್ ಅಭಿಮಾನಿಗಳು ಎಲ್ಲಾರಿಗೂ ಕೆಟ್ಟದಾಗಿ ನಿಂದಿಸ್ತಾರೆ ಎಂದು ತಿಳಿಸಿದ್ದಾರೆ.

ಎಲ್ಲದರಲ್ಲೂ ಅವರು ಡಿಬಾಸ್ ಎಂದು ಹಾಕಿಕೊಂಡಿದ್ದರು. ಅವರು ಎಲ್ಲ ರೇಣುಕಸ್ವಾಮಿ ಬಗ್ಗೆ ಹೇಳ್ತೀರಾ? ಈ ಕೇಸ್ ಬಗ್ಗೆ ಅಲ್ಲ ಸೌಜನ್ಯ ಕೇಸ್ ಬಗ್ಗೆ ಮಾತಾಡಿ ಅಂತ ಹೇಳುತ್ತಿದ್ದರು. ನಾನು ಸೌಜನ್ಯ ಕೇಸ್‌ ಬಗ್ಗೆಯೂ ಮಾತಾಡಿದ್ದೀನಿ. ಅವರು ಡೈವರ್ಸಿಟಿ ಟ್ಯಾಕ್ಟಿಂಗ್ ಮಾಡ್ತಿದ್ದಾರೆ. ಇದರ ಬಗ್ಗೆ ಮಾತಾಡಬಾರದು ಅದರ ಬಗ್ಗೆ ಮಾತಾಡಿ ಅಂತ ಮಾಡ್ತಿದ್ದಾರೆ. ತುಂಬಾ ಕೆಟ್ಟ ಪದಗಳು ಮಾಡಿ, ಆಶ್ಲೀಲ ಪದಗಳೆಲ್ಲ ಯೂಸ್ ಮಾಡಿ ನನಗೆ ಮೆಸೇಜ್ ಕಳಿಸಿದ್ದರು. ನನಗೆ ಅನಿಸ್ತು ರೇಣುಕಸ್ವಾಮಿ ಮೆಸೆಜ್ಗೂ ಮತ್ತೆ ಡಿ ಬಾಸ್ ಫ್ಯಾನ್ಸ್ ಮೆಸೇಜ್ಗೂ ಏನು ವ್ಯತ್ಯಾಸ ಇಲ್ಲ ಅನಿಸ್ತು. ಹಾಗಾಗಿ ಜಸ್ಟ್ ಸ್ಕ್ರೀನ್‌ಶಾಟ್ ತೆಗೆದು ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹಾಕಿದೆ. ನಾವು ಯಾವ ಥರ ಸಮಾಜದಲ್ಲಿ ಇದ್ದೀವಿ, ಯಾವ ತರ ಮೆಸೇಜ್ ಮಾಡ್ತಾರೆ ಅಂತ ನಾನು ಹಾಕಿದೆ ಎಂದು ರಮ್ಯಾ ಹೇಳಿದ್ದಾರೆ.

ತಪ್ಪು ತಪ್ಪು ಅಂತ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಈ ಕೇಸ್ ಬಗ್ಗೆ ಯಾರೇ ಮಾತಾಡಿದ್ರು, ಏನೇ ಹೇಳಿದರೂ ಅವರು ಅಟ್ಯಾಕ್ ಮಾಡುತ್ತಾರೆ, ಹೆದರಿಸುತ್ತಾರೆ. ಅದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. ಇದು ತುಂಬಾ ಕೆಟ್ಟ ಸಂಗತಿ. ಇಂಥಹ ಮೈಂಡ್ ಸೆಟ್, ಇಂಥಹ ಹುಡುಗರಿಂದಲೇ ಹೆಣ್ಮಕ್ಕಳ ಮೇಲೆ ಆರೋಪ ಬರುತ್ತಿರುವುದು. 1 ನಿಮಿಷ ಯೋಚನೆ ಮಾಡಿ ನೀವು ಧರ್ಮಸ್ಥಳ ಅಲಿಗೇಷನ್ಸ್ ಬಗ್ಗೆ ಹೇಳುತ್ತಿದ್ದಾರೆ. ಆ ಹೆಣ್ಣುಮಕ್ಕಳು ಎಷ್ಟು ಜನ ಮಿಸ್ ಆಗಿದ್ದಾರೆ. ಯಾವ ಹುಡುಗುರು ಇಲ್ಲ ಎಂದಿದ್ದಾರೆ. ನ್ಯಾಯ ಕೇಳುವ ಸಂದರ್ಭದಲ್ಲಿ ಇತರ ಟೀಕೆ ಮಾಡುವುದು ಸರಿಯಲ್ಲ. ನಾವು ಸುಮ್ನಿರೋಕೆ ಆಗಲ್ಲ. ಯಾವ ತರ ಸಮಾಜದಲ್ಲಿದ್ದೇವೆ? ನಾವು ಸಮಾಜಕ್ಕೆ ಏನು ಮೆಸೇಜ್ ಕೊಡುತ್ತಿದ್ದೀವೆ? ಎಂದು ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+