Ragini Dwivedi: ನಟಿ ರಾಗಿಣಿ ದರ್ಶನ್ ಜೊತೆ ಒಂದೂ ಸಿನಿಮಾ ಮಾಡಿಲ್ಲ ಯಾಕೆ ಗೊತ್ತಾ..?
ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ನಟಿ ರಾಗಿಣಿ ತಮ್ಮ ಸಿನಿಮಾ ಜೀವನದಲ್ಲಿ ಮತ್ತೊಂದು ಅಧ್ಯಾಯ ಆರಂಭಿಸಿದ್ದಾರೆ. ಮೊದಲು ನಟಿಯಾಗಿ ಮಿಂಚಿದ್ದ ರಾಗಿಣಿ ಬಳಿಕ ಕೆಲವು ಸಂಕಷ್ಟಗಳನ್ನು ಎದುರಿಸಿದರು. ಜೈಲುವಾಸ ಕೂಡ ಅನುಭವಿಸುವಂತಾಯಿತು. ಬಿಡುಗಡೆಯಾದ ಬಳಿಕ ಇದೀಗ ಮತ್ತೆ ರಾಗಿಣಿ ನಟನೆ ಆರಂಭಿಸಿದ್ದು, ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ.
ಈ ಮಧ್ಯ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಜೆ ರಾಜೇಶ್ ಜೊತೆಗಿನ ಸಂದರ್ಶನದಲ್ಲಿ ರಾಗಿಣಿ ಭಾಗಿಯಾಗಿದ್ದು, ತಮ್ಮ ಬಾಲ್ಯ, ಸಿನಿಮಾ ಬದುಕು, ಕುಟುಂಬ ಹಾಗೂ ಕಷ್ಟದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸುದೀಪ್, ಶಿವಣ್ಣ, ಉಪೇಂದ್ರ ಅವರ ಜೊತೆ ಸಿನಿಮಾ ಮಾಡಿದ್ದೀರಿ. ಆದರೆ ದರ್ಶನ್, ಯಶ್ ಹಾಗೂ ಪುನೀತ್ ಅವರ ಜೊತೆ ಯಾಕೆ ಸಿನಿಮಾ ಮಾಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ರಾಗಿಣಿ, ಯಶ್ ಹಾಗೂ ಪುನೀತ್ ಅವರ ಜೊತೆ ಅವಕಾಶ ಅಥವಾ ಸಂದರ್ಭಗಳು ನನಗೆ ಸಿಕ್ಕಿಲ್ಲ. ಆದರೆ ದರ್ಶನ್ ಅವರೊಂದಿಗೆ ನಾನು ಮೂರು ಸಿನಿಮಾ ಸಹಿ ಮಾಡಿ ಶೂಟ್ ಮಾಡಿಲ್ಲ. ನಾನು ದರ್ಶನ್ ಜೊತೆ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದೆ ಆದರೆ ಅವುಗಳು ಆಗಲಿಲ್ಲ ಎಂದರು.
ದರ್ಶನ್ ಜೊತೆ ಯಾಕೆ ಆ ಮೂರು ಸಿನಿಮಾಗಳಲ್ಲಿ ನಟಿಸಲಿಲ್ಲ? ಆ ಸಿನಿಮಾಗಳು ಕೈ ತಪ್ಪಿ ಹೋಗುವುದಕ್ಕೆ ಕಾರಣವೇನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಗಿಣಿ, ಯಾಕೆ ಸಿನಿಮಾ ಮಾಡಿಲ್ಲ ಅಂದರೆ, ಪಾಲಿಟಿಕ್ಸ್. ಅದಕ್ಕೆ ಆಂತರಿಕ ರಾಜಕೀಯ ಅಂತ ಹೇಳಬಹುದು. ಒಳಗೊಳಗೆ ಗೇಮ್ ಆಡೋರು. ಚೀಪ್ ಗಿಮಿಕ್ಸ್ ಮಾಡುತ್ತಾರೆ.
ಕೆಲವರ ಬದುಕಿನ ಉದ್ದೇಶನೇ ಅದು. ಹಾಗೆಲ್ಲ ಮಾಡುವವರು ಇದ್ದಾರೆ. ನಿಮ್ಮ ಕೆಲಸವನ್ನು ಹೇಗೆ ಹಾಳು ಮಾಡೋದು. ಒಬ್ಬರು ಇನ್ನೊಬ್ಬರೊಂದಿಗೆ ಕೆಲಸ ಮಾಡಬಾರದು ಅಂತ ಮಾಡೋದು. ಅದೇ ಜೀವನ ಅವರದ್ದು ಎಂದು ಅಂತಹ ವ್ಯಕ್ತಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇತರ ಕೋ-ಸ್ಟಾರ್‌ಗಳ ಜೊತೆಗೆ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಅವರು, ನನ್ನ ಎಲ್ಲಾ ಸಹ ನಟರೊಂದಿಗೆ ನನ್ನ ಸಂಬಂಧ ಚೆನ್ನಾಗಿದೆ. ಹೀರೊಗಳು, ಅವರ ಕುಟುಂಬ, ಹೀರೋಯಿನ್ ಬಗ್ಗೆ ಬರೋದಾರೆ, ರಕ್ಷಿತಾ ಅವರೊಂದಿಗೆ ತುಂಬಾ ಒಳ್ಳೆಯ ಸಂಬಂಧವಿದೆ. ರಮ್ಯಾ ಅವರೊಂದಿಗೆ ಕಮ್ಯೂನಿಕೇಷನ್ ಇದೆ.
ಪೂಜಾ ಗಾಂಧಿ ಅವರೊಂದಿಗೆ ಉತ್ತಮ ಬಾಂಡಿಂಗ್ ಇತ್ತು. ರಾಧಿಕಾ, ಮಾಲಶ್ರೀ ಮೇಡಂ ಜೊತೆಗೆ ಉತ್ತಮ ಬಾಂಧವ್ಯ ಇದೆ. ದರ್ಶನ್, ಸುದೀಪ್, ಅವರ ಪತ್ನಿ ಪ್ರಿಯಾ ಜೊತೆ ಒಳ್ಳೆಯ ಬಾಡಿಂಗ್ ಇತ್ತು. ಅಲ್ಲದೇ ಸಾನ್ವಿ ಜೊತೆ ಕೂಡ. ಈಗ ಆಕೆಯನ್ನು ನೋಡಿದರೆ ಖುಷಿ ಆಗುತ್ತದೆ. ನಾನು ಕೆರಿಯರ್ ಶುರು ಮಾಡುವಾಗ ಆಕೆ ಚಿಕ್ಕವಳಿದ್ದಳು ಎಂದು ಚಿತ್ರರಂಗದಲ್ಲಿ ತಮ್ಮ ಸ್ನೇಹದ ಬಗ್ಗೆ ರಾಗಿಣಿ ಹೇಳಿಕೊಂಡರು.
ಉಪೇಂದ್ರ ಅವರೊಂದಿಗೆ ಎರಡು ಸಿನಿಮಾ ಮಾಡಿದ್ದೇನೆ. ಪ್ರಿಯಾಂಕಾ ಅವರೊಂದಿಗೆ ಸಂಬಂಧ ಚೆನ್ನಾಗಿದೆ. ಪ್ರೇಮ್, ದಿಗಂತ್, ಐಂದ್ರಿಯಾ ರೇ ಅವರೊಂದಿಗೆ ಸಂಬಂಧ ಚೆನ್ನಾಗಿದೆ. ನನ್ನ ಜೀವನದಲ್ಲಿ ಒಂದು ಸರಳ ವಿಚಾರ ಇದೆ. ನಾನು ಎಲ್ಲರ ಜೊತೆಗೆ ಚೆನ್ನಾಗಿ ಇರುತ್ತೇನೆ. ನನ್ನ ಎದುರಿಗುರುವವ ಬಗ್ಗೆ ನಾನು ಜಡ್ಜ್ ಮಾಡಲು ಆಗುವುದಿಲ್ಲ. ಅವರು ಏನು ಯೋಚನೆ ಮಾಡುತ್ತಾರೆ ಅದನ್ನು ನಾನು ಹೇಳಲು ಆಗುವುದಿಲ್ಲ. ಆದರೆ ನಾನು ಎಲ್ಲರ ಜೊತೆಗೂ ಚೆನ್ನಾಗಿ ಇರುತ್ತೇನೆ. ನಟರು ನಟಿಯರು ಮಾತ್ರವಲ್ಲ ಎಲ್ಲರ ಜೊತೆಗೂ ಚೆನ್ನಾಗಿ ಇರುತ್ತೇನೆ ಎಂದು ಹೇಳಿದರು.












Click it and Unblock the Notifications