ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಸಿಸ್ಟೆಂಟ್‌ ಕಾರ್‌ ಸೀಜ್‌! ಯಾವ ಕಾರಣಕ್ಕೆ?

ಸ್ಯಾಂಡಲ್‌ವುಡ್‌ ನಟಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರ ಅಸಿಸ್ಟೆಂಟ್‌ ಬಳಸುತ್ತಿದ್ದ ಕಾರು ಜಪ್ತಿಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆರ್‌ಟಿಒ ಅಧಿಕಾರಿಗಳು ದಿಢೀರನೆ ಶೂಟಿಂಗ್‌ ನಡೆಯುತ್ತಿದ್ದ ಜಾಗಕ್ಕೇ ತೆರಳಿ ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ವಾಹನ ವೈಟ್‌ ಬೋರ್ಡ್‌ ಹೊಂದಿದ್ದು, ಇದರಲ್ಲೇ ಕಲಾವಿದರನ್ನು ಕರೆತರಲಾಗುತ್ತಿತ್ತು ಎನ್ನುವ ಆರೋಪ ಮಾಡಲಾಗಿದೆ. ನಿಯಮದ ಪ್ರಕಾರ ವೈಟ್‌ ಬೋರ್ಡ್‌ ಇರುವ ವಾಹನವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಆದರೆ, ಸಿನಿಮಾ ಕಲಾವಿದರನ್ನು ಹಲವು ದಿನಗಳಿಂದ ಇದೇ ಕಾರಿನಲ್ಲಿ ಕರೆದುಕೊಂಡು ಹೋಗುವುದು, ಬರುವುದು ಮಾಡಲಾಗುತ್ತಿದೆ ಎನ್ನುವ ಆರೋಪದ ಮೇರೆಗೆ ಆರ್‌ಟಿಒ ಅಧಿಕಾರಿಗಳು ವಾಹನವನ್ನು ಸೀಜ್‌ ಮಾಡಿದ್ದಾರಂತೆ.

Actress Rachita Ram s Assistant s Car Has Been Seized By The Police

ಈ ಬಗ್ಗೆ ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೇಷನ್‌ ನೀಡಿದ್ದ ದೂರಿನ ಮೇರೆಗೆ ತುಮಕೂರು ಆರ್‌ಟಿಒ ಅಧಿಕಾರಿಗಳು, ಸಂಚಾರ ಪೊಲೀಸರಿಗೆ ದೂರು ಬಂದಿದ್ದರಿಂದ ವಾಹನ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ತುಮಕೂರಿನಲ್ಲಿ ಸಿನಿಮಾವೊಂದರ ಶೂಟಿಂಗ್‌ ನಡೆಯುತ್ತಿತ್ತು. ಈ ವೇಳೆ ಅಧಿಕಾರಿಗಳು ಶೂಟಿಂಗ್‌ ಸ್ಥಳಕ್ಕೇ ತೆರಳಿ ವಾಹನ ಜಪ್ತಿ ಮಾಡಿದ್ದಾರೆ. ನಟ ದುನಿಯಾ ವಿಜಯ್​ ಹಾಗೂ ನಟಿ ರಚಿತಾ ರಾಮ್ ಅಭಿನಯಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್‌ ವೇಳೆ ಬೆಳವಣಿಗೆ ನಡೆದಿದೆ.

ಚಿತ್ರತಂಡದ ಮೇಲೆ ನಿಯಮ ಉಲ್ಲಂಘನೆ ಆರೋಪ ಬಂದಿದೆ. ವಾಣಿಜ್ಯ ಉದ್ದೇಶಕ್ಕಾಗಿ ಸಾರಿಗೆಯೇತರ ವಾಹನವನ್ನು ಬಳಸುತ್ತಿದ್ದರು ಎಂದು ದೂರು ನೀಡಲಾಗಿತ್ತು. ಕಲಾವಿದರನ್ನು ಕರೆತಂದಿದ್ದು ತಪ್ಪಲ್ಲ, ಇದಕ್ಕಾಗಿ ಬಾಡಿಗೆ ವಾಹನಗಳನ್ನು ಬಳಸಬೇಕಿತ್ತು. ಆದರೆ, ಚಿತ್ರತಂಡ ವೈಟ್‌ ಬೋರ್ಡ್‌ ವಾಹನವನ್ನೇ ಬಳಸುತ್ತಿತ್ತು ಎನ್ನುವ ಆರೋಪವಿದೆ.

Actress Rachita Ram s Assistant s Car Has Been Seized By The Police

ದೂರು ಬಂದ ಹಿನ್ನೆಲೆ ಟ್ರಾಫಿಕ್‌ ಪೊಲೀಸರು ಶೂಟಿಂಗ್‌ ನಡೆಯುತ್ತಿದ್ದ ತುಮಕೂರಿನ ಕೈದಾಳ ಬಳಿಗೆ ತೆರಳಿ ಅಲ್ಲಿದ್ದ ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ. ಆರ್​ಟಿಓ ಇನ್​ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.

ಬಳಿಕ ಈ ಕಾರನ್ನು ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್ ಅವರ ಅಸಿಸ್ಟೆಂಟ್ ಬಳಸುತ್ತಿದ್ದರು ಎಂಬುದು ತಿಳಿದುಬಂದಿದೆ. ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಈ ಕಾರು ತುಮಕೂರಿಗೆ ಬಂದಿತ್ತು ಎನ್ನಲಾಗಿದೆ. ಪೊಲೀಸರು ವಾಹನ ಜಪ್ತಿ ಮಾಡಿದ ಬಳಿಕ ಅದರಲ್ಲಿ ಪರಿಶೀಲನೆ ಕೂಡ ನಡೆಸಿದ್ದಾರೆ. ಇದರಲ್ಲಿ ಸಿನಿಮಾ ವಾಹನ ಚಾಲಕರ ಸಂಘದ ಬಿಲ್‌ವೊಂದು ಪತ್ತೆಯಾಗಿದೆ.

ಹಲವು ದಿನಗಳಿಂದ ಈ ಖಾಸಗಿ ಕಾರನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿತ್ತು ಎಂದು ದೂರಿನ ಮೇರೆಗೆ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಬಳಿಕ ಕಾರನ್ನು ಜಪ್ತಿ ಮಾಡಿ ತಂದಿದ್ದು, ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಟಿ ರಚಿತಾರಾಮ್‌ ಎಲ್ಲಿಯೂ ಪ್ರತಿಕ್ರಿಯೆ ಕೊಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+