Mayuri Kyatari: ನನಗೆ ಒಳ್ಳೆಯ ಕುಟುಂಬ ಇದೆ: ಡಿವೋರ್ಸ್‌ ವದಂತಿ ಬಗ್ಗೆ ‘ಕೃಷ್ಣ ಲೀಲಾ’ ನಟಿ ಮಯೂರಿ ಸ್ಪಷ್ಟನೆ

ಕನ್ನಡ ಕಿರುತೆರೆಯಲ್ಲಿ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಭಾರೀ ಜನಪ್ರಿಯತೆ ಪಡೆದ ನಟಿ ಮಯೂರಿ ಕ್ಯಾತರಿ (Mayuri Kyatari) ಬಗ್ಗೆ ಇತ್ತೀಚೆಗೆ ಡಿವೋರ್ಸ್‌ ಸಂಬಂಧಿಸಿದ ವದಂತಿಗಳು ಹರಿದಾಡುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿತ್ತು. ಇದೀಗ ಈ ಎಲ್ಲ ಊಹಾಪೋಹಗಳಿಗೆ ನಟಿಯೇ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.

ಕಿರುತೆರೆಯಿಂದ ದೊಡ್ಡ ಪರದೆಗೆ ಎಂಟ್ರಿ ನೀಡಿದ ಮಯೂರಿ, ನಟ ಅಜಯ್‌ ರಾವ್‌ ಜೊತೆ ಅಭಿನಯಿಸಿದ ಕೃಷ್ಣಲೀಲಾ ಸಿನಿಮಾದ ಮೂಲಕ ಮನೆಮಾತಾದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಮಯೂರಿ ಅವರಿಗೆ ಸಿನಿರಂಗದಲ್ಲಿ ಭದ್ರ ಸ್ಥಾನ ಒದಗಿಸಿತು. ಬಳಿಕ 'ಇಷ್ಟಕಾಮ್ಯ', 'ನಟರಾಜ ಸರ್ವೀಸ್', 'ಕರಿಯ 2', 'ರುಸ್ತುಂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡರು.

Mayuri Kyatari

2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮಯೂರಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅವರು ಕುಟುಂಬದ ಕಡೆ ಹೆಚ್ಚು ಗಮನಹರಿಸಿ, ಸಿನಿಮಾಗಳಿಂದ ದೂರ ಉಳಿದಿದ್ದರು. ಇದೇ ಸಮಯದಲ್ಲಿ ಅವರ ದಾಂಪತ್ಯ ಜೀವನದ ಕುರಿತು ಗಾಸಿಪ್‌ಗಳು ಕೂಡ ಹುಟ್ಟಿಕೊಂಡವು.

ಡಿವೋರ್ಸ್‌ ಬಗ್ಗೆ ಮಾತನಾಡಿಲ್ಲ

ಈ ಕುರಿತು ಪ್ರತಿಕ್ರಿಯಿಸಿದ ಮಯೂರಿ, "ನಾನು ಎಲ್ಲಿಯೂ ಡಿವೋರ್ಸ್‌ ಬಗ್ಗೆ ಹೇಳಿಕೆ ನೀಡಿಲ್ಲ. ನನಗೆ ಐದು ವರ್ಷದ ಮಗ ಇದ್ದಾನೆ. ನನಗೆ ಅದ್ಭುತವಾದ ಕುಟುಂಬವಿದೆ. ನನ್ನ ಮಗನಿಗೆ ನಾನು ಒಳ್ಳೆಯ ತಾಯಿ. ಅವನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವನ ಅಪ್ಪ ಕೂಡ ಒಳ್ಳೆಯವರು. ಆರವ್‌ಗೂ ಅವರ ಅಪ್ಪನಿಗೂ ಉತ್ತಮ ಸಂಬಂಧವಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

"ನನ್ನ ರಿಲೇಷನ್‌ಶಿಪ್‌ ಸ್ಟೇಟಸ್‌ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನನಗೆ ಆಸಕ್ತಿ ಇಲ್ಲ. ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಮಾಡುವುದು ನನಗೆ ಇಷ್ಟವಿಲ್ಲ," ಎಂದು ಅವರು ಹೇಳಿರುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಡಿವೋರ್ಸ್‌ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ನಟಿ ಮಯೂರಿ ತಮ್ಮ ಕುಟುಂಬ ಜೀವನ ಸುಖಕರವಾಗಿಯೇ ಸಾಗುತ್ತಿದೆ ಎಂಬ ಸಂದೇಶ ನೀಡಿದ್ದು, ಅನಾವಶ್ಯಕ ಊಹಾಪೋಹಗಳಿಗೆ ಬ್ರೇಕ್‌ ಹಾಕಿದ್ದಾರೆ.

ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಡಿವೋರ್ಸ್‌ ಸುದ್ದಿಗೆ ತೆರೆ ಬಿದ್ದಂತಾಗಿದೆ. ಕುಟುಂಬದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲದಿದ್ದರೂ, ಮಯೂರಿ ನೀಡಿದ ಸ್ಪಷ್ಟನೆ ಅವರ ವೈವಾಹಿಕ ಜೀವನ ಸುಖಕರವಾಗಿಯೇ ಸಾಗುತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+