'ಅಂತಹ ದೊಡ್ಡ ಮನುಷ್ಯ ಅವರು': ದರ್ಶನ್‌ ಬಗ್ಗೆ ನಟಿ ಮಾಲಾಶ್ರೀ ಹೇಳಿದ್ದೇನು..?

ಬೆಂಗಳೂರು, ಆಗಸ್ಟ್‌ 30: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿ ಸುಮಾರು ಮೂರು ತಿಂಗಳು ಸಮೀಪಿಸುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಸದ್ಯ ದರ್ಶನ್‌ನನ್ನು ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ದರ್ಶನ್ ಜೈಲು ಸೇರಿರುವ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಬೇಸರ ವ್ಯಕ್ತಪಡಿಸಿದ್ದು, ಇದೀಗ ಹಿರಿಯ ನಟಿ ಮಾಲಾಶ್ರೀ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಮು ಅವರ ಕಲಾಸಿಪಾಳ್ಯ ಸಿನಿಮಾದಿಂದ ನನಗೆ ದರ್ಶನ್‌ ಗೊತ್ತು. ಅವರು ಜಂಟಲ್‌ಮೆನ್‌, ತುಂಬಾ ವಿನಯ, ವಿನಮ್ರವಾಗಿರುವವರು. ಕಲಾಸಿಪಾಳ್ಯದಲ್ಲಿ ಹೇಗೆ ನೋಡಿದ್ದೇನೋ ಅದೇ ರೀತಿ ಕಾಟೇರ ಸಮಯದಲ್ಲೂ ನಾನು ನೋಡಿದ್ದೇನೆ. ಅವರ ಕಾಳಜಿ, ಅವರು ನೀಡುವ ಗೌರವ ಎಲ್ಲಾ ಹಾಗೇ ಇದೆ' ಎಂದರು.

Actress Malashree Reaction About Darshan Arrest Case

'ನಾನು ಅವರಿಗೆ ಯಾವಾಗಲೂ ಚಿರರುಣಿಯಾಗಿರುತ್ತೇನೆ. ಯಾಕೆಂದರೆ ನನ್ನ ಮಗಳಿಗೆ ಕಾಟೇರ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ. ಕಾಟೇರ ಸಿನಿಮಾದಲ್ಲಿ ಆರಾಧನ ಬಗ್ಗೆ ಎಷ್ಟು ಕಾಳಜಿ ತೋರಿಸಿದ್ದಾರೆ. ಅವಳಿಗೆ ಹೇಳಿಕೊಡುವುದಾಗಲಿ, ಪ್ರೀತಿಯಾಗಲಿ, ನಾನು ಶೂಟಿಂಗ್‌ ಜಾಗಕ್ಕೆ ಹೋದಾಗ ಅಮ್ಮ..ಅಮ್ಮ ಅಂತಾ ಜೊತೆಯಲ್ಲಿ ಇರುತ್ತಿದ್ದರು. ಅವರಿಗೆ ನಾನು ಸಿನಿಮಾ ಆರಂಭದಲ್ಲೇ ಧನ್ಯವಾದ ಹೇಳಿದ್ದೆ' ಎಂದು ಹೇಳಿದರು.

'ನನ್ನ ಮಗಳಿಗೆ ಕಾಟೇರ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್​ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್​ ಅವರು, ನಿಮ್ಮ ಮಗಳ ಜೊತೆ ನಟಿಸೋದು ನನ್ನ ಅದೃಷ್ಟ ಅಂತ ದೊಡ್ಡ ಮಾತು ಹೇಳಿದ್ದರು. ಅಂತಹ ದೊಡ್ಡ ಮನುಷ್ಯ ಅವರು. ಅವರ ಜೊತೆ ಆರಾಧನಾ ನಟಿಸಿರುವುದು ತುಂಬಾ ಖುಷಿ ಅನಿಸುತ್ತದೆ. ನನಗೆ ಗೊತ್ತಿರುವ ಪ್ರಕಾರ ದರ್ಶನ್‌ ತುಂಬಾ ಒಳ್ಳೆ ಮನುಷ್ಯ. ಜಂಟಲ್‌ಮೆನ್‌. ದರ್ಶನ್‌ ನನ್ನ ಜೊತೆ ಇರುವಾಗ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರು ಬೇರೆಯವರಿಗೆ ಕೊಡುವ ಗೌರವ ಆಗಲಿ, ಕಾಳಜಿಯಾಗಲಿ ತುಂಬಾ ಇಷ್ಟವಾಗುತ್ತದೆ'. ಎಂದರು.

Actress Malashree Reaction About Darshan Arrest Case

ದರ್ಶನ್‌ ಬಿಡುಗಡೆ ಬಗ್ಗೆ ಮಾತನಾಡಿದ ಅವರು, 'ನನಗೆ ಕಾನೂನಿನಲ್ಲಿ ನಂಬಿಕೆ ಇದೆ. ಜೊತೆಗೆ ದೇವರ ಮೇಲೆ ಕೂಡ ನಂಬಿಕೆ ಇದೆ. ನನ್ನ ಪ್ರಕಾರ ದೇವರು ಒಳ್ಳೆಯವರ ಕೈ ಬಿಡಲ್ಲ. ಅದನ್ನು ಮಾತ್ರ ನಾನು ಹೇಳುತ್ತೇನೆ. ನಾನು ಈ ಘಟನೆ ಬಗ್ಗೆ ಮಾತನಾಡುವುದಿಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರೆ ದರ್ಶನ್ ಬಗ್ಗೆ ಬೇರೆ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳಿಗೆ ಎಷ್ಟು ಗೌರವ ಇದೆಯೋ, ನನಗೂ ನನ್ನ ಮಗಳಿಗೂ ಅಷ್ಟೇ ದರ್ಶನ್‌ ಮೇಲೆ ಗೌರವ ಇದೆ' ಎಂದು ನಟಿ ಮಾಲಾಶ್ರೀ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+