Bhavana Ramanna: ನಟಿ ಭಾವನಾ ರಾಮಣ್ಣಗೆ ಹೆರಿಗೆ; ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ: ಅಷ್ಟಕ್ಕೂ ಆಗಿದ್ದೇನು?
ಸ್ಯಾಂಡಲ್‌ವುಡ್ ಖ್ಯಾತ ನಟಿ ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಬೋಲ್ಡ್ ಹೆಜ್ಜೆ ಇಟ್ಟಿದ್ದಾರೆ. ಭಾವನಾ ರಾಮಣ್ಣ ಮದುವೆ ಆಗದೆಯೇ ಮಗುವನ್ನು ಪಡೆಯಲು ಮುಂದಾಗಿರುವ ವಿಚಾರ ಎಲ್ಲಾರಿಗೂ ಗೊತ್ತೆ ಇದೆ. ಕನ್ನಡ ನಟಿ ಭಾವನಾ ರಾಮಣ್ಣ ಅವರು 40 ನೇ ವಯಸ್ಸಿನಲ್ಲಿ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಲು ಹೊರಟಿರುವ ವಿಚಾರ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳ ಮಕ್ಕಳಿಗೆ ಭಾವನಾ ತಾಯಿಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧವಾಗಿ ಚರ್ಚೆ ನಡೆಯುತ್ತಿದೆ. ಈ ಯಾವ ಚರ್ಚೆ, ಟೀಕೆಗೂ ತಲೆ ಕೆಡಿಸಿಕೊಳ್ಳದ ಭಾವನಾ ರಾಮಣ್ಣ ಅವರು ತಮ್ಮ ನಿರ್ಧಾರವನ್ನ ಖುಷಿಯಿಂದ ಹಂಚಿಕೊಂಡಿದ್ದರು.
ಈ ಹಿಂದೆ ಮಾಧ್ಯಮಗಳ ಮೂಲಕವೇ ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗಿರುವ ಬಗ್ಗೆ ಖುಷಿಯಿಂದ ಹಂಚಿಕೊಂಡಿದ್ದರು. ಆದರೆ, ದುರಾದೃಷ್ಟವಶತ್ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಈ ವಿಚಾರ ಅಭಿಮಾನಿಗಳಿಗೆ ತೀವ್ರ ಬೇಸರವನ್ನುಂಟು ಮಾಡಿದೆ.

ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಿದ್ದರು. ಸದ್ಯ ಎಂಟನೇ ತಿಂಗಳಿನಲ್ಲಿರುವ ನಟಿ ಭಾವನಾ ಅವರಿಗೆ ಹೆರಿಗೆ ಮಾಡಿಸಲಾಗಿದೆ. ವೈದ್ಯರ ಸಲಹೆ ಮೂಲಕ ಎರಡು ವಾರಗಳ ಹಿಂದೆಯೇ ಹೆರಿಗೆ ಮಾಡಿಸಲಾಗಿದೆ. ಆದರೆ ದುರಾದೃಷ್ಟವಶತ್ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಹೆಣ್ಣು ಮಗು ಆರೋಗ್ಯವಾಗಿದ್ದು, ತಾಯಿ ಹಾಗೂ ಶಿಶು ಕ್ಷೇಮವಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಏಳನೇ ತಿಂಗಳಲ್ಲಿ ನಟಿ ಭಾವನಾ ಅವರು ಸೀಮಂತ ಮಾಡಿಕೊಂಡಿದ್ದರು. ಆದರೆ, ಏಳನೇ ತಿಂಗಳಿನಲ್ಲಿರುವಾಗ ನಟಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಎಂಟನೇ ತಿಂಗಳಿಗೆ ಹೆರಿಗೆ ಮಾಡಿಸುವ ಸೂಚನೆ ನೀಡಿದ್ದರು.
ಕೆಲ ಸಮಸ್ಯೆಯಿಂದಾಗಿ ನಟಿ ಭಾವನಾ ಅವರಿಗೆ ಎರಡು ವಾರಗಳ ಹಿಂದೆ ಹೆರಿಗೆ ಮಾಡಿಸಲಾಗಿತ್ತು. ಆದರೆ ಒಂದು ಮಗು ಮೃತಪಟ್ಟಿದೆ. ಇನ್ನೊಂದು ಮಗು ಆರೋಗ್ಯವಾಗಿದೆ. ಭಾವನಾ ಅವರ ಸೀಮಂತ ಶಾಸ್ತ್ರದ ವಿಡಿಯೋ ವೈರಲ್ ಆಗಿತ್ತು. ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ಸೀಮಂತ ನಡೆದಿತ್ತು. ಚಿತ್ರರಂಗದ ಸ್ನೇಹಿತೆಯರು ಹಾಗೂ ಆಪ್ತರು ಭಾಗವಹಿಸಿ ಶುಭ ಕೋರಿದ್ದರು.
ಈ ಹಿಂದೆ ಮಕ್ಕಳ ಬಗ್ಗೆ ಮಾತನಾಡಿದ ನಟಿ ಭಾವನಾ ಅವರು, ನನ್ನ ಮಕ್ಕಳ ಭವಿಷ್ಯಕ್ಕೆ ನಾನು ತಯಾರಿ ಮಾಡಿಕೊಂಡಿದ್ದೇನೆ. ನನ್ನ ತಾಯಿ ಬದುಕಿದ್ದಿದ್ದರೆ ಈ ವಿಷಯ ಕೇಳಿ ಫುಲ್ ಖುಷಿಯಾಗುತ್ತಿದ್ದಳು. ತಂದೆಯಿಲ್ಲದೆ ಮಕ್ಕಳನ್ನು ಬೆಳೆಸಿದರೆ ಸಮಾಜವು ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತದೆ ಎನ್ನೋದು ನನಗೆ ಗೊತ್ತಿದೆ. ನಾನು ಪುರುಷ ವಿರೋಧಿಯಲ್ಲ, ಆದರೆ ಪುರುಷನಿಲ್ಲದೆ ಬದುಕೋದು ಸರಿ ಅಂತ ಕೂಡ ಹೇಳುತ್ತಿಲ್ಲ. ಜೀವನದಲ್ಲಿ ಪ್ರೀತಿ ಮುಖ್ಯ, ಪ್ರಾಮಾಣಿಕತೆ ಇರಬೇಕು ಎನ್ನೋದನ್ನು ನನ್ನ ಮಕ್ಕಳಿಗೆ ಕಲಿಸಿಕೊಡ್ತೀನಿ ಎಂದು ಭಾವನಾ ರಾಮಣ್ಣ ಅವರು ಹೇಳಿದ್ದರು.












Click it and Unblock the Notifications