Vinod Raj: ನಟ ವಿನೋದ್ ರಾಜ್‌ಗೆ ಆರೋಗ್ಯ ಸಮಸ್ಯೆ... ಆಪರೇಷನ್!
Vinod Raj: ನಟ ವಿನೋದ್ ರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ವಿನೋದ್ ರಾಜ್ ಅವರು ಕೆಲವು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕಾಣಿಸಿಕೊಂಡಿದ್ದು ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಹಾಗೂ ಇಷ್ಟು ದಿನ ಯಾಕೆ ಹೊರಗೆ ಬರಲು ಸಾಧ್ಯವಾಗಲಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ. ನಾನು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು. ಇದೇ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ನಾನು ಹೊರಗೆ ಬಂದು ಮಾತನಾಡಲು ಸಾಧ್ಯವಾಗಲಿಲ್ಲ ಅಂತ ಅವರು ಹೇಳಿದ್ದಾರೆ. ಅವರ ಧ್ವನಿ ಸಹ ತುಸು ಬದಲಾಗಿದೆ. ವಿನೋದ್ ರಾಜ್‌ಗೆ ಏನು ಆರೋಗ್ಯ ಸಮಸ್ಯೆ ಆಗಿತ್ತು. ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ..
ಹೌದು ನನಗೆ ಸ್ವಲ್ಪ ಆರೋಗ್ಯ ಸರಿ ಇಲ್ಲ. ಹೀಗಾಗಿ, ಹೊರಗಡೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ನನಗೆ ಆರೋಗ್ಯ ಸಮಸ್ಯೆಯಿಂದ ಆಪರೇಷನ್ ಆಗಿದೆ. ಹೀಗಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕ್ಷಮಿಸಿ ನನ್ನ ಜೀವನವೇ ಬೇರೆ ಕಡೆ ಹೋಗಿದೆ ಅಂತಲೂ ಅವರು ಹೇಳಿದ್ದಾರೆ. ಈ ಮೂಲಕ ಸಿನಿಮಾ ರಂಗ ಹಾಗೂ ರಿಯಾಲಿಟಿ ಶೋಗಳು, ಕಿರುತೆರೆಗಳಿಂದಲೂ ವಿನೋದ್ ರಾಜ್ ಅವರು ಯಾಕೆ ದೂರವಾಗಿದ್ದಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ವಿನೋದ್ ರಾಜ್ ಅವರು ಕಳೆದ ಕೆಲವು ದಿನಗಳಿಂದ ಎಲ್ಲೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಅವರು ಸೋಷಿಯಲ್ ಮೀಡಿಯಾದಲ್ಲೂ ಅಷ್ಟೊಂದು ಕಾಣಿಸಿಕೊಳ್ಳದೆ ಇರುವುದರಿಂದ ಅವರಿಗೆ ಏನಾಗಿದೆ ಅಂತ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಇದೀಗ ಕೊನೆಗೂ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು. ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತ ಅವರು, ಕ್ಷಮಿಸಿ ನನ್ನ ಜೀವನವೇ ಬದಲಾಗಿ ಹೋಗಿದೆ. ನಾನು ಈಗ ಹಳ್ಳಿ.. ಜೀವನ ಹಾಗೂ ಕೃಷಿಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೀನಿ. ಹೀಗಾಗಿ, ಎಲ್ಲೂ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಹದ ಒಳಗಡೆ ಏನೆಲ್ಲಾ ಆಗಿರುತ್ತೋ ತಿಳಿಯಲ್ಲ. ನಾವು ಗಾಡಿಗಳಿಗೆ ಸರ್ವೀಸ್ ಮಾಡಿ ಬಿಡುತ್ತೇವೆ ದೇಹಕ್ಕೆ ಸರ್ವೀಸ್ ಮಾಡಲ್ಲ. ಇಲ್ಲ ಮಾಡಿಕೊಳ್ಳಲು ಮರೆತು ಹೋಗ್ತೀವಿ ಅಂತ ಅವರು ಹೇಳಿದ್ದಾರೆ.
ಬ್ಯಾಂಕ್‌ಗೆ ಹೋಗಿ ದುಡ್ಡಿದೆಯಾ ಅಂತ ಚೆಕ್ ಮಾಡಿಕೊಳ್ಳುತ್ತೇವೆ. ಆದರೆ ಆರೋಗ್ಯ ಸರಿ ಇದೆಯಾ ಅಂತ ನೋಡಿಕೊಳ್ಳಲ್ಲ. ಶಾಶ್ವತವಲ್ಲದ ಈ ಬದುಕು ಅಮೂಲ್ಯವಾದದ್ದು. ಇದನ್ನು ನಾವು ಉಳಿಸಿಕೊಳ್ಳಬೇಕು ಅಂತಲೂ ಹೇಳಿದ್ದಾರೆ.
ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಆಪರೇಷನ್ ಸಹ ಆಗಿದೆ. ಈಗ ಆರೋಗ್ಯ ತುಸು ಚೇತರಿಸಿಕೊಂಡಿದೆ ಪರವಾಗಿಲ್ಲ ಅಂತ ಅವರು ಹೇಳಿದ್ದಾರೆ. ದೇವರು ಕೆಲವೊಮ್ಮೆ ಜೀವನದಲ್ಲಿ ಎಲ್ಲಾ ಕೊಟ್ಟಿರುತ್ತಾರೆ. ಆರೋಗ್ಯ ಕ್ಷೀಣಿಸಬಾರದು. ಇವೊತ್ತು ಫಿಲಂ ಚೇಂಬರ್‌ನಲ್ಲಿ ಏರ್ಪಡಿಸಿರುವ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಇದನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಅಂತಲೂ ಅವರು ಹೇಳಿದ್ದಾರೆ. ಔಷಧಿಗಳನ್ನೂ ತಂದಿರಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮಂಡಳಿಯು ಕಾಲ ಕಾಲಕ್ಕೆ ಏನೆಲ್ಲಾ ಮಾಡಬೇಕೋ ಆ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಇನ್ನು ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರಿಗೆ ಹಾಗೂ ಕಾಲವಿದರೆಗೆ ರಾಜ್ಯ ಸರ್ಕಾರದಿಂದ ಆರೋಗ್ಯ ವಿಮೆ ಕಾರ್ಡ್‌ನಂತಹ ಸೇವೆಗಳು ಸಿಕ್ಕರೆ ಅನುಕೂಲವಾಗಲಿದೆ. ಕಲಾವಿದರು ಸಂಧ್ಯಾಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಅವರ ಆದಾಯಗಳು ನಿಂತು ಹೋಗುತ್ತವೆ ಅಂತಲೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಮೇಲೆ ಯುದ್ಧ ಬೇಡ: ಇನ್ನು ದೇಶದ ವಿಚಾರವಾಗಿಯೂ ಮಾತನಾಡಿರುವ ಅವರು ಇದೀಗ ಪಾಕ್ - ಭಾರತದ ಯುದ್ಧ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದ ಪರಿಸ್ಥಿತಿ ನೋಡಿದರೆ, ಯುದ್ಧ ಮಾಡುವುದು ಶ್ರೇಷ್ಠವಲ್ಲ ಎಂದನಿಸುತ್ತದೆ ಎಂದು ಹೇಳಿದ್ದಾರೆ.











Click it and Unblock the Notifications