ದರ್ಶನ್ ಭೇಟಿ ಮಾಡಿದ ವಿನೋದ್ ಪ್ರಭಾಕರ್‌ಗೆ ಆಘಾತ!
ದರ್ಶನ್ ಕೊಲೆ ಆರೋಪದ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹೀಗೆ, ಜೈಲಿನಲ್ಲಿ ಮುದ್ದೆ ನುಂಗುತ್ತಿರುವ ತಮ್ಮ ನೆಚ್ಚಿನ ನಟನ ಭೇಟಿಗೆ ಬಡ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ, ಹೀಗಿದ್ದಾಗಲೇ ನಟ ವಿನೋದ್ ಪ್ರಭಾಕರ್ ಇಂದು ದರ್ಶನ್ ಭೇಟಿ ಮಾಡಿದ್ದು, ಮಹತ್ವದ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.
ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ಮೊದಲಿನಿಂದ ಕೂಡ ಆತ್ಮೀಯರಾಗಿ, ಒಟ್ಟೊಟ್ಟಿಗೆ ಇದ್ದವರು. ಅವರ ಸಿನಿಮಾ ರಿಲೀಸ್‌ಗೆ ಇವರು, ಇವರ ಸಿನಿಮಾ ರಿಲೀಸ್ ವೇಳೆ ಅವರು ಅಂತಾ ಒಗ್ಗಟ್ಟು ಪ್ರದರ್ಶನ ಮಾಡಿದ್ದವರು. ಆದರೆ ಇದೀಗ ಕೊಲೆ ಕೇಸ್ ಹಿನ್ನೆಲೆ ದರ್ಶನ್ ತೂಗುದೀಪ್ ಜೈಲು ಸೇರಿದ್ದು, ದರ್ಶನ್ ಭೇಟಿಗೆ ಅಂತಾ ವಿನೋದ್ ಪ್ರಭಾಕರ್ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಆಗ ವಿನೋದ್ ಪ್ರಭಾಕರ್ ಅವರನ್ನ ಕಂಡು ದರ್ಶನ್ ಹೇಳಿದ್ದು ಏನಂತೆ ಗೊತ್ತಾ? ಮುಂದೆ ಓದಿ.

ವಿನೋದ್ ನೋಡಿ ದರ್ಶನ್ ಹೇಳಿದ್ದೇನು?
ದರ್ಶನ್ ವಿರುದ್ಧ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್ ಅಂಟಿಕೊಂಡಿದೆ. ಈ ಕಾರಣಕ್ಕೆ ಪೊಲೀಸರ ಅತಿಥಿ ಆಗಿದ್ದ ದರ್ಶನ್ ಈಗ ಸೆಂಟ್ರಲ್ ಜೈಲಲ್ಲಿ ಮುದ್ದೆ ಮುರಿದು ನುಂಗುತ್ತಾ, ಕಂಬಿ ಎಣಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ಹೀಗಿದ್ದಾಗ ದರ್ಶನ್ ಭೇಟಿಗೆ ಅವರ ಆತ್ಮೀಯರು ಬರುತ್ತಿದ್ದು ಬಹುಕಾಲದ ಫ್ರೆಂಡ್ ವಿನೋದ್ ಪ್ರಭಾಕರ್ ಕೂಡ ಇಂದು ದರ್ಶನ್ ಭೇಟಿ ಮಾಡಿದ್ದಾರೆ. ವಿನೋದ್ ನೋಡುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದು, ಟೈಗರ್ ಎಂದು ಮಾತನಾಡಿಸಿ ಕಳಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಅವರ ಸ್ಥಿತಿಯ ಬಗ್ಗೆ ಮಾಧ್ಯಮಗಳ ಎದುರು ನಟ ವಿನೋದ್ ಪ್ರಭಾಕರ್ ನೋವು ತೋಡಿಕೊಂಡರು.
ಜೈಲಿನ ಊಟಕ್ಕೆ ದರ್ಶನ್ ಸುಸ್ತು!
ದರ್ಶನ್ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ. ಹೀಗಾಗಿ ದರ್ಶನ್ ಜೀವನ ಶೈಲಿ ಕೂಡ ಭರ್ಜರಿ ಐಷಾರಾಮಿ ಆಗಿತ್ತು. ಅದರಲ್ಲೂ ದರ್ಶನ್ ಪ್ರತಿ ದಿನ ತಮ್ಮ ದೇಹದ ಪೌಷ್ಠಿಕಾಂಶ ಕಾಪಾಡಿಕೊಳ್ಳಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರಂತೆ. ಈಗ ದರ್ಶನ್‌ಗೆ ಅದು ಯಾವುದೂ ಇಲ್ಲ, ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿ ಮುದ್ದೆ ಮುರಿದು ನುಂಗಬೇಕು ಅಷ್ಟೇ. ಆದರೆ ಜೈಲಿನ ಊಟದಲ್ಲಿ ಉಪ್ಪು & ಖಾರ ಹೆಚ್ಚಾಗಿ ಹಾಕುವುದಿಲ್ಲ.
ಸಪ್ಪೆ ಊಟಕ್ಕೆ ಸಿಗುತ್ತಾ ಮುಕ್ತಿ?
ಸಪ್ಪೆ ಊಟ ತಿಂದು ನಟ ದರ್ಶನ್ ನರಳಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ, ಮನೆ ಊಟ ಬೇಕು ಎಂದು ದರ್ಶನ್ ಕೋರ್ಟ್‌ಗೆ ಮನವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ನ್ಯಾಯಾಲಯ ಒಪ್ಪಿಗೆ ಸೂಚಿಸಿದರೆ ಮಾತ್ರ ಸೆಂಟ್ರಲ್ ಜೈಲಿನಲ್ಲಿ ದರ್ಶನ್‌ಗೆ ಮನೆಯ ಊಟದ ವ್ಯವಸ್ಥೆ ಮಾಡಬಹುದಾಗಿದೆ. ಇಲ್ಲವಾದರೆ ಜೈಲಿನಲ್ಲಿ ನೀಡುವ ಮುದ್ದೆ, ಅನ್ನ, ಚಪಾತಿ ತಿಂದೇ ದರ್ಶನ್ ಜೀವನ ಮಾಡಬೇಕಾಗುತ್ತದೆ. ಅದರಲ್ಲೂ ದರ್ಶನ್ ಗ್ಯಾಂಗ್‌ನ ಇತರರು ಕೂಡ ಇದೇ ರೀತಿ ಜೈಲಿನ ಊಟಕ್ಕೆ ಒಗ್ಗಿಕೊಳ್ಳಲು ಆಗದೆ ಒದ್ದಾಡುತ್ತಿದ್ದಾರೆ. ಕೊಲೆ ಆರೋಪದಲ್ಲಿ ಜೈಲು ಸೇರಿರುವ ಇವರಿಗೆ ಸೊಳ್ಳೆ ಕಾಟ ಕೂಡ ವಿಪರೀತವಾಗಿದೆ.
ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ & ವಿನೋದ್ ಪ್ರಭಾಕರ್ ಅವರ ಅಪ್ಪ ಟೈಗರ್ ಪ್ರಭಾಕರ್ ಇಬ್ಬರೂ ಆತ್ಮೀಯ ಸ್ನೇಹಿತರು, ಇಬ್ಬರ ನಡುವೆ ಅನುಬಂಧ ಇತ್ತು. ಕನ್ನಡದ ಹಲವು ಸಿನಿಮಾಗಳಲ್ಲಿ, ವರನಟ ರಾಜ್‌ಕುಮಾರ್ ಅವರ ಎದುರು ವಿಲನ್ ಆಗಿ ತೂಗುದೀಪ್ ಶ್ರೀನಿವಾಸ್ & ಪ್ರಭಾಕರ್ ಮಿಂಚಿದ್ದರು. ಇದೇ ಕಾರಣಕ್ಕೆ ನಟ ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ಮಧ್ಯೆ ಕೂಡ ಅತ್ಯಂತ ಆತ್ಮೀಯ ಸ್ನೇಹ ಇತ್ತು.












Click it and Unblock the Notifications