ನಗು..ನಗು..ನಗು.. ಉಪೇಂದ್ರ ಹೀರೋಯಿನ್‌ಗೆ ವಿಚಿತ್ರ ಕಾಯಿಲೆ
ಜಾಜಿಯ ಹೂ ಚಂದ ಜನಪದ ಬಲು ಚಂದ ನನ್ನವನ ಮನಸು ಚಂದವೋ...ಈ ಹಾಡು ಯಾರಿಗೆ ತಾನೆ ನೆನಪಿಲ್ಲ ಹೇಳಿ. ಕನ್ನಡದ ಎವರ್‌ಗ್ರಿನ್ ಹಾಡುಗಳಲ್ಲಿ ತಂದೆಗೆ ತಕ್ಕ ಮಗ ಚಿತ್ರದ ಈ ಹಾಡು ಕೂಡ ಒಂದು. ಈ ಹಾಡು ಕೇಳುತ್ತಿದ್ದಂತೆ ಕಣ್ಣ ಮುಂದೆ ಬರುವುದು ಉಪೇಂದ್ರ ಅವರ ಖಡಕ್ ಲುಕ್ ಹಾಗೂ ನಟಿ ಲೈಲಾ ಅವರ ಚಂದದ ನಗು.
ಕನ್ನಡದ ತಂದೆಗೆ ತಕ್ಕ ಮಗ ಹಾಗೂ ರಾಮ ಕೃಷ್ಣ ಸಿನಿಮಾಗಳಲ್ಲಿ ನಟಿಸಿರುವ ನಟಿ ಲೈಲಾ ಎಂದರೆ ಸಾಕು ಮೊದಲು ನೆನಪಿಗೆ ಬರುವುದೇ ಗಿಣಿ ಮೂಗು ಹಾಗೂ ಮುಗ್ಧ ಚಂದದ ನಗು. ಸದಾ ನಗು ಮುಖದಲ್ಲೇ ಕಾಣಿಸಿಕೊಳ್ಳುವ ನಟಿ ಲೈಲಾ ಅವರಿಗೆ ಈಗ ಆ ನಗುವೇ ದೊಡ್ಡ ಸಮಸ್ಯೆಯಾಗಿದ್ದು, ನಟಿ ಲೈಲಾ ಯಾರೂ ಊಹಿಸದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ದುಷ್ಮನ್ ದುನಿಯಾ ಕಾ ಎನ್ನುವ ಬಾಲಿವುಡ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಲೈಲಾ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ನೀಡಿ 2006ರ ಹೊತ್ತಿಗೆ ದಿಢೀರ್ ತೆಗೆ ಮರೆಗೆ ಸರಿದರು. ಇರಾನ್ ದೇಶದ ಉದ್ಯಮಿಯನ್ನು ಪ್ರೀತಿಸಿ ಮದುವೆಯಾದ ಲೈಲಾ ಸಿನಿಮಾದಿಂದ ಸಂಪೂರ್ಣವಾಗಿ ದೂರಾಗಿ ವೈಯಕ್ತಿಕ ಜೀವನದಲ್ಲಿ ಬ್ಯೂಸಿಯಾಗಿದ್ದರು. ಇಬ್ಬರು ಗಂಡು ಮಕ್ಕಳೊಂದಿಗೆ ಸುಂದರ ಸಮಯಗಳನ್ನು ಕಳೆಯುತ್ತಿದ್ದ ನಟಿ ಲೈಲಾ 2022ರಲ್ಲಿ ಮತ್ತೆ ಸಿನಿಮಾಗೆ ಕಂಬ್ಯಾಕ್ ಮಾಡಿದರು.
ಸದ್ಯ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಲೈಲಾಗೆ ವಿಚಿತ್ರ ಕಾಯಿಲೆಯೊಂದಿರುವುದು ತಿಳಿದು ಬಂದಿದೆ. ನಟಿ ಲೈಲಾ ಯಾವಾಗಲೂ ನಗುತ್ತಲೇ ಇರುತ್ತಾರಂತೆ. ಇದು ಅವರಿಗೆ ಇರುವ ವಿಚಿತ್ರವಾದ ಕಾಯಿಲೆಯಂತೆ. ಒಂದು ವೇಳೆ 30 ಸೆಕೆಂಡ್‌ಗಳ ಕಾಲ ಸಹ ನಗದೇ ಇದ್ದರೇ ಅವರು ಏಕಾಏಕಿ ಅಳಲು ಶುರು ಮಾಡುತ್ತಾರಂತೆ. ಹೀಗಾಗಿ ಲೈಲಾ ಸದಾ ನಗುತ್ತಲೇ ಇರಬೇಕು ಇಲ್ಲವಾದರೆ ನೋಡನೋಡುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆಯಂತೆ. ನಟಿ ಲೈಲಾ ಅವರು ಇಂತಹ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಇತ್ತೀಚಿಗಷ್ಟೇ ಈ ವಿಚಾರ ಎಲ್ಲರಿಗೂ ತಿಳಿದು ಬಂದಿದ್ದು, ಈ ವಿಚಾರ ಕೇಳಿ ಇದೆಂತಹ ಕಾಯಿಲೆ ಎಂದು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ.












Click it and Unblock the Notifications