Upendra: ಉಪೇಂದ್ರ & ಅವರ ಪತ್ನಿ ಮೊಬೈಲ್ ಹ್ಯಾಕ್: ಹಣ ಕೇಳಿದವರಿಗೆ ಕೊಡದಂತೆ ಉಪ್ಪಿ ಮನವಿ: ಆಗಿದ್ದೇನು?
Priyanka Upendra: ಆಹಾರ ಸೇವನೆ, ಸೌಂದರ್ಯ, ಹಣ, ಖರ್ಚು,ವೆಚ್ಚ ಹೀಗೆ ಪ್ರತಿಯೊಂದರ ಮೇಲೂ ಹೆಚ್ಚಿನ ಕಾಳಜಿ ವಹಿಸುವ ಸೆಲೆಬ್ರೆಟಿಗಳಿಗೆ ಕೆಲವೊಂದು ಅನಿರೀಕ್ಷಿತ ಘಟನೆಗಳು ಎದುರಾಗಿ ಬಿಡುತ್ತವೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಮೊಬೈಲ್ ಸಂಕಷ್ಟ ಎದುರಾಗಿದ್ದು, ಯಾರಾದ್ರು ನಮ್ಮ ಹೆಸರಿನಲ್ಲಿ ಹಣ ಕೇಳಿದ್ರೆ ಕೊಡದಂತೆ ಅವರಿಬ್ಬರು ಮನವಿ ಮಾಡಿದ್ದಾರೆ.
ಹೌದು, ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ಈ ಕುರಿತು ದಂಪತಿಗಳು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೈಬರ್ ಕ್ರೈಂ ವಿಭಾಗಕ್ಕೂ ದೂರು ನೀಡುವುದಾಗಿ ಉಪೇಂದ್ರ ಅವರು ತಿಳಿಸಿದ್ದಾರೆ. ಅವರು ತಮ್ಮ ಮೊಬೈಲ್ ಹ್ಯಾಕ್ ಆಗಿದ್ದು, ಯಾರಾದರು ಹಣ ಕೇಳಿದ್ರೆ ಕೊಡದಂತೆ ಆಪ್ತರಿಗೆ, ಸ್ನೇಹಿತರಿಗೆ ಮನವಿ ಮಾಡಿ ವಿಡಿಯೋ ಮಾಡಿದ್ದಾರೆ. ಇದರಿಂದ ಸೈಬರ್ ಖದೀಮರು ಸೆಲೆಬ್ರೆಟಿಗಳಿಗೂ ಕಾಟ ಕೊಡಲು ಶುರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಮೊದಲಿಗೆ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಆಗಿದೆ. ಅವರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಅನೇಕರಿಗೆ ಹಣ ನೀಡುವಂತೆ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವರು ಏನೋ ಅನಿವಾರ್ಯ ಇದೆ ಎಂದು ಸಾವಿರಾರು, ಲಕ್ಷಾಂತರ ರೂಪಾಯಿ ಕಳುಹಿಸಿದ್ದಾರೆ ಅಂತಲೂ ವರದಿ ಆಗಿದೆ. ಈ ಬಗ್ಗೆ ಶೀಘ್ರವೇ ಮತ್ತಷ್ಟು ಸ್ಪಷ್ಟತೆ ಸಿಗಬೇಕಿದೆ. ಸದ್ಯ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಅಸಲಿಗೆ ಆಗಿದ್ದೇನು?
ಪ್ರಿಯಾಂಕಾ ಅವರು ಆನ್‌ಲೈನ್‌ನಲ್ಲಿ ಫರ್ನಿಚರ್ ಆರ್ಡರ್ ಮಾಡಿದ್ದರಂತೆ. ಇಂದು ಬೆಳಗ್ಗೆ ಅನ್ನೌನ್ ಸಂಖ್ಯೆಯಿಂದ ಕರೆ ಬಂದಿದೆ. ಆಗ ಡಿಲಿವರಿ ಕೋಡ್ ಹೇಳುವಂತೆ ಕೇಳಿದರು. ನಾನು ಹೇಳಿದೆ ತಕ್ಷಣವೇ ನನ್ನ ಮೊಬೈಲ್ ಹ್ಯಾಂಗ್ ಆಯಿತು. ವರ್ಕ್ ಆಗುವುದು ನಿಂತು ಹೋಯಿತು. ಕೆಲವೇ ಹೊತ್ತಿನಲ್ಲಿ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ಹಣ ಕೇಳಿದ್ದಾಗಿ ಮೆಸೆಜ್ ಹೋಗಿದೆ. ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ದಯವಿಟ್ಟು ಯಾರು ಹಣ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಇದೇ ವಿಚಾರವಾಗಿ ಉಪೇಂದ್ರ ಅವರು ವಿಡಿಯೋ ಮಾಡಿದ್ದು, ಅದರಲ್ಲಿ ಪತ್ನಿ ಮೊಬೈಲ್ ಹ್ಯಾಂಗ್ ಆಗುತ್ತಿದ್ದಂತೆ ಪತಿ ಮೊಬೈಲ್ ಬಳಸಿದ್ದಾರೆ. ತಮ್ಮ ಮೊಬೈಲ್ ಸಹ ಹ್ಯಾಂಗ್ ಆಗಿದೆ. ನಮ್ಮ ಹೆಸರಿನಲ್ಲಿ ಹಣ ಕೇಳಿದರೆ ಕೊಡದಂತೆ ಅವರು ಮನವಿ ಮಾಡಿದ್ದಾರೆ. ಪ್ರಿಯಾಂಕಾ ಅವರು ಅನ್ನೌನ್ ಸಂಖ್ಯೆಗೆ ಪುನಃ ಉಪೇಂದ್ರ ಅವರ ಮೊಬೈಲ್‌ನಿಂದ ಕರೆ ಮಾಡಿದಂತೆ ಕಾಣುತ್ತದೆ. ಹೀಗಾಗಿ ಅವರ ಮೊಬೈಲ್ ಸಹ ಹ್ಯಾಂಗ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದೂರು ನೀಡಿದ ಪೊಲೀಸರು ತನಿಖೆ ನಡೆಸಿ ಸುರಕ್ಷತೆ ಬಗ್ಗೆ ಅಗತ್ಯ ಮಾಹಿತಿ ನೀಡಬೇಕಿದೆ...












Click it and Unblock the Notifications