Niveditha Rajkumar: ಶಿವಣ್ಣ ಮಗಳ ಮದುವೆ ಯಾವಾಗ? ಡ್ರೀಮ್ ಬಾಯ್ ಬಗ್ಗೆ ನಿವೇದಿತಾ ಹೇಳಿದಿಷ್ಟು?
ಪಾರ್ವತಮ್ಮನವರ ಅಣ್ಣಾವರ ಮೊಮ್ಮಕ್ಕಳ ಮೂರನೇಯ ತಲೆಮಾರು ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದೆ. ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಕಿರಿಯ ಪುತ್ರಿ ನಿವೇದಿತಾ ಮೊದಲ ಸಿನಿಮಾ 'ಫೈರ್ ಫ್ಲೈ' ಸಿನಿಮಾ ತೆರೆಗೆ ಮೇಲೆ ಬರಲು ಸಜ್ಜಾಗಿದೆ. ಸಿನಿಮಾದ ಪ್ರಚಾರದಲ್ಲಿ ಶಿವಣ್ಣ ಅವರ ಕಿರಿಯ ಮಗಳು ನಿವೇದಿತಾ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ಕ್ಯಾಮೆರಾಗಳ ಮುಂದೆ ಬಂದಿರುವ ನಿವೇದಿತಾ ಅವರು ಸೆಲೆಬ್ರೆಟಿ ಕ್ರಶ್ ಮತ್ತು ಮದುವೆ, ಜೊತೆಗೆ ಪ್ರೀತಿಯ ಅಪ್ಪು ಚಿಕ್ಕಪ್ಪ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅಜ್ಜಿ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಅವರ ಹಾದಿಯಲ್ಲಿ ಸಿನಿಮಾಗಳನ್ನು ನಿರ್ಮಿಸಿ, ಹೊಸಬರಿಗೆ ಅವಕಾಶ ನೀಡುವ ಗುರಿಯನ್ನ ಶಿವಣ್ಣ ಅವರ ಪುತ್ರಿ ನಿವೇದಿತಾ ಅವರು ಇಟ್ಟುಕೊಂಡಿದ್ದಾರೆ. ಅವರ ನಿರ್ಮಾಣದ ಮೊದಲ 'ಫೈರ್ ಫ್ಲೈ' ಸಿನಿಮಾ ಇನ್ನೇನು ರಿಲೀಸ್ ಆಗಲಿದೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿವೇದಿತಾ ತಮ್ಮ ಮದುವೆ ಬಗ್ಗೆ ಹಾಗೂ ಡ್ರೀಮ್ ಬಾಯ್ ಕುರಿತು ಫಿಲ್ಮಿ ಬೀಟ್ ಕನ್ನಡದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ನಿವೇದಿತಾಗೆ ಮದುವೆ ಯಾವಾಗ? ಶಿವಣ್ಣ ಅವರ ಮಗಳು ಲವ್ ಮ್ಯಾರೇಜಾ ಅಥವಾ ಅರೇಂಜ್ಡ್ ಮ್ಯಾರೇಜಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿವೇದಿತಾ ಅವರು, ಸದ್ಯಕ್ಕೆ ಅದೆಲ್ಲಾ ಏನು ಪ್ಲ್ಯಾನ್ ಇಲ್ಲ. ಎಲ್ಲರಿಗೂ ತಮ್ಮ ಡ್ರೀಮ್ ಬಾಯ್ ಹೇಗಿರಬೇಕು ಅನ್ನೋ ಕನಸಿರತ್ತೆ ಅದರಂತೆ ನನಗೂ ಇದೆ. ಸಿಂಪಲ್ ಆಗಿ ಇರ್ಬೇಕು. ಹೀಗೆ ಇರ್ಬೇಕು ಅಂತ ಏನು ಇಲ್ಲ. ನಮ್ಮ ಕೆಲಸಕ್ಕೆ ಸಪೋರ್ಟ್ ಮಾಡಬೇಕು ಎಂದು ತಮ್ಮ ಮದುವೆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಪ್ರತಿಯೊಬ್ಬರಿಗೂ ಸೆಲೆಬ್ರಿಟಿ ಕ್ರಶ್, ಫೇವರಿಟ್ ನಟ - ನಟಿಯರು ಇರೋದೆಲ್ಲಾ ಕಾಮನ್. ಆ ಬಗ್ಗೆ ಮಾತನಾಡಿದ ಅವರು, ಖಂಡಿತವಾಗಿಯೂ ಆ ರೀತಿ ತುಂಬಾ ಇದೆ. ಕನ್ನಡದಲ್ಲಿ ನಂಗೆ ಯಶ್ ಅಂದ್ರೆ ತುಂಬಾ ಇಷ್ಟ. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಮತ್ತು ಒಂದು ಟೈಮ್‌ನಲ್ಲಿ ಸಲ್ಮಾನ್ ಖಾನ್ ಅಂದ್ರೆ ನನಗೆ ತುಂಬಾ ಇಷ್ಟ ಇತ್ತು. ಕನ್ನಡದಲ್ಲಿ ಎಲ್ಲಾ ನಟರನ್ನು ಮೀಟ್ ಮಾಡಿದ್ದೀನಿ. ರಜನಿಕಾಂತ್, ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದೀನಿ ಎಂದು ಸಂದರ್ಶನದಲ್ಲಿ ನಿವೇದಿತಾ ಅವರು ಹೇಳಿದರು.
ಕನ್ನಡದ ಚಿತ್ರರಂಗ ಸ್ಟಾರ್ ನಟರು ಇರಲಿ, ಇಲ್ಲ ಪರಭಾಷೆಯ ನಟರು ಇರಲಿ. ತಮ್ಮ ಹೊಸ ಪ್ರಾಜೆಕ್ಟ್ ರಿಲೀಸ್ ಆಗುತ್ತಿದೆ ಅಂದರೆ, ಅವರ ಮನೆಗೆ ಬಂದು ಭೇಟಿ ಕೊಟ್ಟು ಆಶೀರ್ವಾದವನ್ನು ಪಡೆಯುತ್ತಾರೆ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಬೇರೆ ಇಂಡಸ್ಟ್ರಿಯವರು ಬಂದು ತಂದೆಯವರ ಆಶೀರ್ವಾದ ಪಡೆದು ಹೋಗುತ್ತಾರೆ. ತಂದೆಗೆ ಅವರದ್ದೇ ಆದ ಅನುಭವವಿದೆ. ಓಪನ್ ಆಗಿ ಇರುತ್ತಾರೆ. ಒಪ್ಪಿಕೊಳ್ಳುವ ವ್ಯಕ್ತಿ. ಹಾಗಾಗಿ ಸೆಲೆಬ್ರೆಟಿಗಳು ನಮ್ಮ ಮನೆ ಬರುತ್ತಾರೆ. ಇದನ್ನು ನೋಡಿದಾಗ ಖುಷಿಯಾಗುತ್ತದೆ ಎಂದು ಹೇಳಿದರು.












Click it and Unblock the Notifications