Shivaraj Kumar: ಶಿವಣ್ಣ 131ನೇ ಸಿನಿಮಾದ 'ಟೈಟಲ್' ಅನಾವರಣ ಯಾವಾಗ? ಇಲ್ಲಿದೆ ಅಪ್ಡೇಟ್
ಬೆಂಗಳೂರು, ಆಗಸ್ಟ್ 21: ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹಿರೋ, ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಎರಡು ವರ್ಷದಿಂದ ಕೇಳಿಬರುತ್ತಿದ್ದ ಶಿವಣ್ಣ ಅವರ 131ನೇ ಸಿನಿಮಾದ ಮಹೂರ್ತ ಕಳೆದ ವಾರ ನಡೆಯಿತು. ಇದರ ಶಿರ್ಷಿಕೆ ಏನೆಂಬುದು ಇನ್ನೂವರೆಗೂ ಗೊತ್ತಾಗಿಲ್ಲ.
ಸದ್ಯ ಶಿವಣ್ಣ ಅವರಿಗೆ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಭರವಸೆಯ ನಟ ನವೀನ್ ಶಂಕರ್ ಅವರು ಸಹ ಖಳನಟನಾಗಿ ಶಿವಣ್ಣ ಮುಂದೆ ಬಣ್ಣ ಹಚ್ಚಲಿದ್ದಾರೆ.

ವಿಶೇಷ ಪೋಸ್ಟರ್‌ನಿಂದಲೇ ಗಮನಸೆಳೆದ ನಟ ಶಿವರಾಜ್ ಕುಮಾರ್ ಅವರ 131ನೇ ಸಿನಿಮಾದ ಟೈಟಲ್ ಏನಿರಬಹುದೆಂದು? ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಫ್ಯಾನ್ಸ್ ಕುತೂಹಲಕ್ಕೆ ಮುಂದಿನ ತಿಂಗಳ ಗಣೇಶ ಚರ್ತುರ್ಥಿ ವೇಳೆ ತೆರೆ ಬೀಳಲಿದೆ. ಅಂದರೆ ಚೌತಿ ಹಬ್ಬಕ್ಕೆ 'ಶಿವಣ್ಣ 131' ಸಿನಿಮಾ ಶಿರ್ಷಿಕೆ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ.
ನಟ ಶಿವಣ್ಣ ಕೈಯಲ್ಲಿ ಹಲವು ಸಿನಿಮಾಗಳು
ಈ ಚಿತ್ರದ ಮಹೂರ್ತ ವೇಳೆ ಹಲವು ವಿಷಯಗಳ ಬಗ್ಗೆ ಶಿವರಾಜ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬರೀ ಗ್ಯಾಂಗ್ ಸ್ಟರ್ ಪಾತ್ರ ಅಂತೇನಿಲ್ಲ. ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತಿರಿಸಿದ್ದಾರೆ.
ಹೊಸ ಕಲಾವಿದರಿಗೂ, ನಿರ್ದೇಶಕರಿಗೂ ಅವಕಾಶ ಕೊಡಬೇಕು ಎಂದು 131ನೇ ಸಿನಿಮಾದ ನಿರ್ದೇಶಕರ ಸಾಮರ್ಥ್ಯ, ಕಥೆ ಹೇಳುವ ಶೈಲಿ, ತಮಗೆ ಏಕೆ ಕಥೆ ಇಷ್ಟವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸದ್ಯ 'ಬೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರವೇ ಜನರ ಮುಂದೆ ಬರುತ್ತೇವೆ ಎಂದರು.

ನಂತರ ಡಿಸೆಂಬರ್‌ಗೆ 'ಭೈರವನ ಕೊನೆ ಪಾಠ' ಸಿನಿಮಾ ಡಿಸೆಂಬರ್‌ಗೆ ಶುರುವಾಗಲಿದೆ. ನಾನು ಸಂಪೂರ್ಣವಾಗಿ ಆ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ನಾಳೆಯಿಂದಲೇ ಈ 131ನೇ ಸಿನಿಮಾ ಚಿತ್ರೀಕರಣ ಆರಂಭವಾಲಿದೆ. ಯಾವ ಸಿನಿಮಾಗಳಿಗೂ ತೊಂದರೆ ಆಗದಂತೆ ಡೇಟ್ ನೀಡಲಾಗುವುದು ಎಂದು ಅವರು ತಮ್ಮ ಮುಂದಿನ ಪ್ರಾಜೆಕ್ಟಗಳ ಕುರಿತು ವಿವರಿಸಿದರು.
ನಟ ನವೀನ್ ಶಂಕರ್ ಸಂತಸ
ಇನ್ನೂ ಮಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ನವೀನ್ ಶಂಕರ್ ಅವರು ಪ್ರತಿಕ್ರಿಯಿಸಿ, ಬಾಲ್ಯದಿಂದಲೂ ನಾನು ಶಿವಣ್ಣ ಅವರ ಸಿನಿಮಾ ನೋಡಿ ಬೆಳೆದವನು. ಚಿತ್ರರಂಗಕ್ಕೆ ಬಂದ ಮೇಲೆ ಅವರೊಂದಿಗೆ ನಟಿಸಬೇಕು ಎಂಬ ಕನಸಿತ್ತು. ಅದು ಇಂದು ಸಾಕಾರಗೊಳ್ಳುತ್ತಿದೆ. ಅವರ ಮುಂದೆ ಖಳನಾಯಕನಾಗಿ ನಿಲ್ಲವುದೇ ಖುಷಿಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಹಿಂದಿನ ಸಲಾರ್ ಸಿನಿಮಾದಲ್ಲಿನ ಪಂಡಿತ ಪಾತ್ರಕ್ಕೂ ಶಿವಣ್ಣ ಅವರ ಸಿನಿಮಾದಲ್ಲಿನ ಈ ಖಳನಾಯಕನ ಪಾತ್ರಕ್ಕೆ ಭಿನ್ನತೆ ಇದೆ ಎಂದು ಅವರು ತಮ್ಮ ಪಾತ್ರ ಕುರಿತು ತಿಳಿಸಿದರು.












Click it and Unblock the Notifications