Shiva Rajkumar: ಶಿವಣ್ಣ ಸಿಕ್ಕಾಪಟ್ಟೆ ಕುಡೀತಾರೆ! ಹೌದು, ನನ್ನ ಎನರ್ಜಿ ಸೀಕ್ರೇಟ್ ಅದೇ ಎಂದ ಹ್ಯಾಟ್ರಿಕ್ ಹೀರೋ
ನಟ ಶಿವರಾಜ್ ಕುಮಾರ್ 63ನೇ ವರ್ಷದಲ್ಲೂ ಯುವಕರನ್ನು ನಾಚಿಸುವ ಲವಲವಿಕೆ, ಕೈಯಲ್ಲಿ ಸಾಲು ಸಾಲು ಸಿನಿಮಾಗಳು, ಜೊತೆಯಲ್ಲಿ ರಿಯಾಲಿಟಿ ಶೋಗಳು, ಪರಭಾಷೆಗಳಲ್ಲೂ ದೊಡ್ಡ ದೊಡ್ಡ ಸಿನಿಮಾ ಆಫರ್, ಆದರೂ ಶಿವಣ್ಣನ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಮಫ್ತಿ ಸಿನಿಮಾದಲ್ಲಿ ರಣಗಲ್ ಪಾತ್ರ ಯಾರಿಗೆ ತಾನೆ ಮರೆಯಲು ಸಾಧ್ಯ, ಈಗ ಅದೇ ಭೈರತಿ ರಣಗಲ್ ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾನೆ.
ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಇದೇ ಶುಕ್ರವಾರ (ನವೆಂಬರ್ 15) ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಸಿನಿಮಾ ಹಾಡುಗಳು, ಟ್ರೈಲರ್ ನಿರೀಕ್ಷೆಯನ್ನು ಹೆಚ್ಚಿಸಿವೆ. ಶಿವರಾಜ್ ಕುಮಾರ್ ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾಗೆ ಬಂಡವಾಳ ಹಾಕಿದ್ದು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಆರೋಗ್ಯ ಸಮಸ್ಯೆ ಇದ್ದರೂ ಸಿನಿಮಾ ಮೇಲಿನ ಪ್ರೀತಿ ಒಂಚೂರು ಕಡಿಮೆಯಾಗಿಲ್ಲ. ಒಪ್ಪಿಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಡುತ್ತಾರೆ. ಇಷ್ಟೆಲ್ಲಾ ಲವ ಲವಿಕೆಯಿಂದ ಇರಲು ಶಿವಣ್ಣನವರಿಗೆ ಹೇಗೆ ಸಾಧ್ಯ, ಅವರ ಎನರ್ಜಿ ಡ್ರಿಂಕ್ ಯಾವುದು ಎನ್ನುವ ಬಗ್ಗೆ ಮಾತನಾಡಿದ್ದಾರೆ.
ಕೀರ್ತಿ ಇಎನ್‌ಟಿ ಕ್ಲಿನಿಕ್ ಎನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಶಿವರಾಜ್‌ಕುಮಾರ್ ತಮ್ಮ ಎನರ್ಜಿ ಡ್ರಿಂಕ್ ಯಾವುದು ಎನ್ನುವ ಸೀಕ್ರೇಟ್ ಬಿಟ್ಟುಕೊಟ್ಟಿದ್ದಾರೆ. ನಟ ಶಿವರಾಜ್‌ಕುಮಾರ್ ಸಿಕ್ಕಾಪಟ್ಟೆ ಕುಡಿಯುತ್ತಾರೆ ಅದಕ್ಕೆ ಅವರಿಗೆ ಇಷ್ಟು ಎನರ್ಜಿ ಇರುತ್ತದೆ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆಂಕರ್ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರ ಕೊಟ್ಟ ಶಿವರಾಜ್‌ಕುಮಾರ್ ಹೌದು, ನಾನು ಸಿಕ್ಕಾಪಟ್ಟೆ ಕುಡಿಯುತ್ತೇನೆ ಎಂದಿದ್ದಾರೆ. ಸ್ವಲ್ಪ ಡಿಕಾಕ್ಷನ್ ಮತ್ತು ಹಾಲು ಸಿಕ್ಕರೆ ಸಾಕು ಎನ್ನುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ.
ಕಾಫಿ ಪ್ರಿಯ ಶಿವರಾಜ್‌ಕುಮಾರ್
ಹೌದು, ಶಿವರಾಜ್ ಕುಮಾರ್ ಅವರಿಗೆ ಕಾಫಿ ಎಂದರೆ ಸಿಕ್ಕಾಪಟ್ಟೆ ಇಷ್ಟ. ಯಾವಾಗಲೂ ಕಾಫಿ ಕುಡಿಯುತ್ತಿರುತ್ತೇನೆ ಅದಕ್ಕೆ ಎನರ್ಜಿಯಿಂದ ಇರುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶಿವರಾಜ್‌ಕುಮಾರ್ 62ನೇ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಯಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೂಡ ತಿಳಿಸಿದ್ದಾರೆ. ಅಮೆರಿಕದಲ್ಲಿ ಆಪರೇಷನ್ ಆಗಬೇಕಿದ್ದು, ಜನವರಿಯಿಂದ ಫುಲ್ ಫಿಟ್ ಆಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ. ಶಿವರಾಜ್‌ಕುಮಾರ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ನಿರೀಕ್ಷೆ ಹುಟ್ಟಿಸಿರುವ ಭೈರತಿ ರಣಗಲ್
ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಹಲವು ಕಾರಣಗಳಿಂದ ನಿರೀಕ್ಷೆ ಹುಟ್ಟುಹಾಕಿದೆ. ಮೊದಲನೆಯದಾಗಿ ಇದು ಸೂಪರ್ ಹಿಟ್ ಮಫ್ತಿ ಸಿನಿಮಾದ ಪ್ರೀಕ್ವೆಲ್, ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನಲ್ಲಿ ಪ್ರೀಕ್ವೆಲ್ ಸಿನಿಮಾ ಬರುತ್ತಿದೆ. ಮಫ್ತಿ ಸಿನಿಮಾವನ್ನು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದ ನರ್ತನ್ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಟ್ರೈಲರ್ ಸಿನಿಮಾ ಅದ್ದೂರಿತನ, ಆಕ್ಷನ್, ಸೆಂಟಿಮೆಂಟ್ ದೃಶ್ಯಗಳ ಸುಳಿವು ಬಿಟ್ಟುಕೊಟ್ಟಿದೆ. ದೊಡ್ಮನೆ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ಈ ವರ್ಷದ ಸ್ಯಾಂಡಲ್‌ವುಡ್ ಸೂಪರ್ ಹಿಟ್ ಸಿನಿಮಾ ಲಿಸ್ಟ್‌ಗೆ ಭೈರತಿ ರಣಗಲ್ ಸೇರಲಿ ಕನ್ನಡ ಸಿನಿಮಾ ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications