ನಟ ಯಶ್ ತಾಯಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ, ಯಾವ ಸಿನಿಮಾ?
ಪ್ಯಾನ್ ಇಂಡಿಯಾ ಹೀರೋ ಆಗಿ ಹವಾ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಕುಟುಂಬದಿಂದ ಮತ್ತೊಂದು ಸಿಹಿಸುದ್ದಿ ಹೊರಬಿದ್ದಿದೆ. ಸೀರಿಯಲ್‌ಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಮಿಂಚಿದ್ದ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ದೊಡ್ಡ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಸ್ಯಾಂಡಲ್‌ವುಡ್‌ನ ಫೇಮಸ್ ನಟಿ. ಇದೀಗ ರಾಕಿಂಗ್ ಸ್ಟಾರ್ ಕುಟುಂಬದಿಂದ ಮತ್ತೊಬ್ಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಾಧಿಕಾ ಪಂಡಿತ್, ಯಶ್ ಬಳಿಕ ಅವರ ತಾಯಿ ಇದೀಗ ಸಿನಿಮಾರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಾವ ಸಿನಿಮಾ, ಏನು ಪಾತ್ರ, ಯಾವ ನಟನೊಂದಿಗೆ ಅವರ ಅಭಿನಯ? ಎನ್ನುವ ವಿವರ ಇಲ್ಲಿದೆ..
ಹೌದು, ನಟ ಯಶ್ ಅವರ ತಾಯಿ ಪುಷ್ಪಾ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮತ್ತೊಂದು ಸಿಹಿ ವಿಚಾರ ಅಂದ್ರೆ ಪುಷ್ಪಾ ಅವರೂ ಹೊಸ ಪ್ರೊಡಕ್ಷನ್ ಹೌಸ್ ತೆರೆಯುತ್ತಿದ್ದಾರೆ. ಇದಕ್ಕೆ PA ಪ್ರೊಡಕ್ಷನ್ಸ್ ಎಂದು ಹೆಸರಿಡಲಾಗಿದೆ. ಯಶ್ ಅವರ ಪೋಷಕರಾದ ಪುಷ್ಪಾ ಹಾಗೂ ಅರುಣ್ ಕುಮಾರ್ ದಂಪತಿಯ ಹೆಸರಲ್ಲೇ ಪಿಎ ಪ್ರೊಡಕ್ಷನ್ ಜನ್ಮತಾಳಿದೆ. ಯಶ್ ಕೂಡ ಈಗಾಗಲೇ ತಮ್ಮ ಸಿನಿಮಾಗಳಿಗೆ ಹಣ ಹಾಕುವ ಮೂಲಕ ನಿರ್ಮಾಣಕ್ಕೆ ಸಾಥ್ ಕೊಡುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ತೆರೆಯುತ್ತಿದೆ ರಾಕಿಂಗ್ ಕುಟುಂಬ.

ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ತಮ್ಮ ಹೊಸ ಬ್ಯಾನರ್ ಪಿಎ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬ್ಯಾನರ್‌ನಡಿ ಮೊದಲ ಸಿನಿಮಾ ಕೂಡ ಸೆಟ್ಟೇರುತ್ತಿದ್ದು, ಈ ಬಗ್ಗೆ ಏಪ್ರಿಲ್ 29ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೊದಲ ಚಿತ್ರದ ಘೋಷಣೆಯಾಗಲಿದೆ.
ಈ ಸಿನಿಮಾದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದಾರೆ. ಕಾವ್ಯ ಶೈವ, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ರಾಜೇಶ್ ನಟರಂಗ ಸೇರಿದಂತೆ ಹಲವರು ಇದ್ದಾರೆ. ಈ ಸಿನಿಮಾಗೆ ಶ್ರೀರಾಜ್ ನಿರ್ದೇಶನವಿದ್ದು, ಸಿನಿಮಾಟೋಗ್ರಾಫರ್ ಆಗಿ ಕಾರ್ತಿಕ್ ಎಸ್, ಸಂಗೀತ ನಿರ್ದೇಶಕರಾಗಿ ವಿಕಾಸ್ ವಸಿಷ್ಟ, ರಘು ನಿಡುವಳ್ಳಿ ಅವರ ಸಂಭಾಷಣೆ ಇರಲಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಬ್ಯಾನರ್ ಮೂಲಕ ಹೊಸಬರಿಗೆ ಅವಕಾಶ ಮಾಡಿಕೊಡುತ್ತಿದ್ದು, ಪ್ರತಿಭಾನ್ವಿತ ನಿರ್ದೇಶಕರು ಹಾಗೂ ಕಲಾವಿದರಿಗೆ ಸಿನಿಮಾ ಮಾಡುವ ಅವಕಾಶ ಮಾಡಿಕೊಡುತ್ತಿದ್ದಾರೆ. ಮೂಲಗಳ ಪ್ರಕಾರ ಪುಷ್ಪ ಅರುಣ್ ಕುಮಾರ್ ಅವರು ಕೇವಲ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗುತ್ತಿಲ್ಲ. ಬದಲಿಗೆ ತಮ್ಮ ಮೊದಲ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯೂ ಇದೆಯಂತೆ. ಈ ಸಿನಿಮಾದ ಹೀರೋ ಪೃಥ್ವಿ ಅಂಬಾರ್ ಅವರ ತಾಯಿ ಪಾತ್ರದಲ್ಲಿ ಪುಷ್ಪಾ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ನಾಳೆಯೇ ಮಾಹಿತಿ ಹೊರಬೀಳಲಿದೆ. ಒಟ್ಟಾರೆ ಡಾ.ರಾಜ್‌ಕುಮಾರ್ ಅವರ ಕುಟುಂಬದಂತೆ ಇದೀಗ ಯಶ್ ಕುಟುಂಬ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ.












Click it and Unblock the Notifications